Instagram: ಬೆತ್ತಲೆ ಚಿತ್ರ ಕಳುಹಿಸಿದ್ರೆ 'ಫೋಟೋ' ತನ್ನಿಂತಾನೆ ಬ್ಲರ್ ಆಗಲಿದೆ..! ಯಾಕೆ ಹೀಗೆ? ಮಹತ್ವದ ಮಾಹಿತಿ
ನವದೆಹಲಿ, ಏಪ್ರಿಲ್ 12: ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಬಹಳಷ್ಟು ಶಕ್ತಿ ಶಾಲಿ ಮಾಧ್ಯಮಗಳಾಗಿ ಗುರುತಿಸಿಕೊಂಡಿವೆ. ಇವು ಮಕ್ಕಳು, ವಿದ್ಯಾರ್ಥಿಗಳಿಂದ ಹಿಡಿದು ಸೆಲೆಬ್ರೆಟಿಗಳ ವರೆಗೆ ಅಚ್ಚುಮೆಚ್ಚು. ಈ ವೇದಿಕೆಗಳಿಂದ ಕೆಲವುರು ದುಡ್ಡು ಮಾಡುವ ದಂಧೆ ಶುರುವಿಟ್ಟುಕೊಂಡಿದ್ದರಿಂದ ಇವುಗಳ ದುರುಪಯೋಗ ಹೆಚ್ಚಾಗಿದೆ. ಹೀಗಾಗದಂತೆ ತಡೆಯಲೆಂದೆ 'ಇನ್‌ಸ್ಟಾಗ್ರಾಮ್' (Instagram) ಹೊಸ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ.
ರೀಲ್ಸ್ ಮಾಡಲು, ಶೇರ್ ಮಾಡಲು, ಪೋಟೋ ಹಂಚಿಕೊಳ್ಳಲು ಪ್ರಮುಖ ವೇದಿಕೆಗಳ ಪೈಕಿ 'ಇನ್‌ಸ್ಟಾಗ್ರಾಮ್' ಹೆಚ್ಚು ಪ್ರಭಾವಶಾಲಿಯಾಗಿದೆ. ಇಲ್ಲಿ ಹಿಂದೆ ಮುಂದೆ ನೋಡದೇ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅದೇ ಮುಳುವಾಗಿ ಹಣ ಪೀಕುವವರಿಗೆ ಕೈಗೆ ಸಿಕ್ಕು ಪೇಚಿಗೆ ಸಿಲುಕಿರುವ ಉದಾಹರಣೆಗಳು ಸಾಕಷ್ಟಿವೆ.

ಅಶ್ಲೀಲ ಫೋಟೋ 'ಬ್ಲರ್' ಆಗುವ ತಂತ್ರಜ್ಞಾನ
ಇನ್‌ಸ್ಟಾಗ್ರಾಮ್‌ನಲ್ಲಿ ಹೀಗೆ ಆಗದಂತೆ ತಡೆಯಲು ತಂತ್ರಜ್ಞಾನ ಅಳವಡಿಕೆಗೆ ನಿರ್ಧರಿಸಲಾಗಿದೆ. ಮಕ್ಕಳು ಇಲ್ಲವೆ ಹೆಣ್ಣುಮಕ್ಕಳ ಬೆತ್ತಲೆ ಚಿತ್ರ/ಫೋಟೋ ಅನ್ನು 'ಡೈರೆಕ್ಟ್ ಮೆಸೇಜ್' ಮೂಲಕ ಕಳುಹಿಸಿ ಹೆದರಿಸಿ ಹಣ ಸುಲಿಗೆಗೆ ಮುಂದಾಗುತ್ತಾರೆ. ಇಂತಹ ಪ್ರಯತ್ನಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 'ಇನ್‌ಸ್ಟಾಗ್ರಾಮ್' ಎಚ್ಚೆತ್ತುಕೊಂಡಿದೆ.
ಬಳಕೆದಾರರಿಗೆ ಮತ್ತಷ್ಟು ಸುರಕ್ಷತೆ ಒದಗಿಸುವ ಉದ್ದೇಶದಿಂದ ಇನ್‌ಸ್ಟಾಗ್ರಾಮ್ ಮಕ್ಕಳು ಸೇರಿದಂತೆ ಇತರರ ಬೆತ್ತಲೆ ಚಿತ್ರಗಳು ಇದ್ದರೆ ಅವುಗಳು ತನ್ನಿಂದತಾನೆ ಬ್ಲರ್ (ಮಸಕು) ಆಗಿ ಕಾಣುವಂತೆ ಮಾಡಲು ಫೀಚರ್/ತಂತ್ರಜ್ಞಾನ ಅಳವಡಿಕೆಗೆ ನಿರ್ಧರಿಸಿದೆ.
ಕೆಲವು ದೇಶಗಳಲ್ಲಿ ದುರ್ಬಳಕೆ, ಜನಾಕ್ರೋಶ
ಅಮೆರಿಕಾ, ನೈಜಿರಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಕಿಡಿಗೇಡಿಗಳು ಹಣ ಪೀಕಲು ಬೆತ್ತಲೆ ಚಿತ್ರ, ಫೋಟೋಗಳನ್ನು ಮಕ್ಕಳು, ಅವರ ಪಾಲಕರಿಗೆ ಕಳುಹಿಸಿ ಹಣ ಕೀಳಲು ಮುಂದಾದ ಘಟನೆಗಳೂ ವರದಿ ಆಗಿದ್ದವು. ಇದರಿಂದ ಮಕ್ಕಳ ಭವಿಷ್ಯ ನಾಶವಾಗುವ ಸಾಧ್ಯತೆ ಇರುತ್ತದೆ. ಸಾಮಾಜಿಕ ವೇದಿಕೆಯನ್ನು ದುರ್ಬಳಕೆ ಮಾಡಿಕೊಡಿದ್ದರು. ಇಂತಹ ಬೆಳವಣಿಗೆ ವಿರುದ್ಧ ಭಾರಿ ಜನಾಕ್ರೋಶ ವ್ಯಕ್ತವಾಗಿತ್ತು.

ಹೊಸ ಫೀಚರ್ ಅಲರ್ಟ್
ಮುಂದಿನ ದಿನಗಳಲ್ಲಿ ಈ ರೀತಿಯ ಬೆತ್ತಲೆ ಫೋಟೋಗಳು ಮೆಸೆಜ್ ಮೂಲಕ ಬಂದರೆ ಅವುಗಳ 'ಬ್ಲರ್' ಆಗಿ ತೋರಿಸುವ ಫೀಚರ್ ಬರಲಿದೆ. ಮೆಸೆಜ್ ಬಂದಾಗಿ ಇನ್‌ಸ್ಟಾಗ್ರಾಮ್ ಅಲರ್ಟ್ ಮಾಡಲಿದೆ. ಇದು ಅಶ್ಲೀಲ್ ಚಿತ್ರವಾಗಿದೆ ಎಂದು ಮೊದಲೇ ತಿಳಿಸುತ್ತದೆ. ಅವರು ಒಕೆ ಮಾಡಿದರೆ ಮಾತ್ರವೇ ಆ ಫೋಟೊ ತೆರೆಯುತ್ತದೆ. ಇಲ್ಲವಾದರೆ ನೀವು ಅದನ್ನು ಅವಾಯ್ಡ್ (ತಿರಸ್ಕಾರ) ಮಾಡಬಹುದು.
ದುರುದ್ದೇಶಕ್ಕಾಗಿ ಯಾರಾದರೂ ಇಂತಹ ಚಿತ್ರಗಳನ್ನು ಕಳಹಿಸಿ ಹಣ ಕೀಳುವ ಕಿಡಿಗೇಡಿಗಳ ವಿರುದ್ಧ ಮೆಸೆಜ್ ಸ್ವೀಕರಿಸುವ ಬಳಕೆದಾರರು ದೂರು ನೀಡಬಹುದು.
ಯುವತಿ ಹೆಸರಲ್ಲಿ ಆನ್‌ಲೈನ್ ಮೋಸ
ಅಲ್ಲದೇ ಇನ್‌ಸ್ಟಾಗ್ರಾಮ್ ನಲ್ಲಿ ಹೊಸ ಹೊಸ ಖಾತೆಗಳಿಂದ ಮೆಸೆಜ್ ಬರುತ್ತಿದ್ದರೆ ಎಚ್ಚರವಾಗಿರಿ. ಯುವತಿ ಹೆಸರಲ್ಲಿ ಮೊದಲು ಫೋಟೊ ಕಳುಹಿಸಿ ನಂತರ ನಂಬರ್ ಪಡೆದು ವಿಡಿಯೋ ಕಾಲ್ ಮಾಡುತ್ತಾರೆ. ಆ ವಿಡಿಯೋ ಕರೆ ಮಾಡಿದಾಗ ಅದರ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು ನಿಮ್ಮ ಮುಖವನ್ನು ಎಡಿಟ್ ಮಾಡಿ ಹಣ ಪೀಕುವ ಜಾಲಗಳು ಹುಟ್ಟಿಕೊಂಡಿವೆ ಎಂದು ವರದಿ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಎಚ್ಚರಿಕೆ ವಹಿಸುವುದು ಅಗತ್ಯ.












Click it and Unblock the Notifications