ಈ ಪಕ್ಷಿಗಳ ಫೋಟೋ ಮನೆಯಲ್ಲಿಟ್ಟರೆ ಹಣದ ಸಮಸ್ಯೆ ಇರೋದೇ ಇಲ್ಲ....
ಸಾಮಾನ್ಯವಾಗಿ ನಾವು ಪಕ್ಷಿಗಳನ್ನು ಇಷ್ಟ ಪಡುತ್ತೇವೆ. ಆಕಾಶದಲ್ಲಿ ಹಾರಾಡುವ, ಮರಗಿಡಗಳಲ್ಲಿ ಕುಳಿತಿರುವ ಬಣ್ಣ ಬಣ್ಣದ ಪಕ್ಷಿಗಳನ್ನು ನೋಡುವುದೇ ಚಂದ. ಅವುಗಳು ನಮ್ಮ ಮನೆಯಲ್ಲಿದ್ದರೆ ನಿತ್ಯ ನೋಡಬಹುದು ಅನ್ನೋ ಮನಸ್ಸಾಗದೇ ಇರದು. ಹೀಗಾಗಿನೇ ಕೆಲವರು ತಮಗಿಷ್ಟವಾಗುವ ಹಕ್ಕಿಗಳನ್ನು ಮನೆಯಲ್ಲಿ ಸಾಕುತ್ತಾರೆ. ಇನ್ನೋ ಕೆಲವರು ಅವುಗಳ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗೆ ನೀವು ನಿಮ್ಮ ಮನೆಯಲ್ಲಿ ಪಕ್ಷಿಗಳ ಫೋಟೋ ಇಟ್ಟುಕೊಳ್ಳುವಾಗ ಜಾಗರೂಕರಾಗಿರಬೇಕು.
ನಾವು ವಾಸಿಸುವ ಮನೆ ಮಾತ್ರವಲ್ಲ, ನಾವು ಮನೆಯಲ್ಲಿ ಇಡುವ ವಸ್ತುಗಳು ಮತ್ತು ಆ ವಸ್ತುಗಳು ಇರುವ ದಿಕ್ಕುಗಳು ಜೀವನದಲ್ಲಿ ನಡೆಯುವ ಒಳ್ಳೆಯ ಮತ್ತು ಕೆಟ್ಟ ಸಂಗತಿಗಳಿಗೆ ಸಂಬಂಧಿಸಿವೆ. ಆದ್ದರಿಂದ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಲು ವಾಸ್ತು ಪ್ರಕಾರ ಏನು ಮಾಡಬೇಕೆಂದು ಹಿರಿಯರು ಪ್ರತೀ ಬಾರಿ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತಾರೆ.

ಯಾರಾದರೂ ತಮ್ಮ ಜೀವನದಲ್ಲಿ ಹಲವಾರು ಕಷ್ಟಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ ಎಂದರ್ಥ. ಹೀಗಾಗಿ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ, ನೀವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಸಮಸ್ಯೆಗಳಿಂದ ಮುಕ್ತರಾಗಬಹುದು. ಹಾಗೆಯೇ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಮಾಡಬೇಕಾದ ಅನೇಕ ವಿಷಯಗಳನ್ನು ವಾಸ್ತು ಶಾಸ್ತ್ರ ಉಲ್ಲೇಖಿಸುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಪಕ್ಷಿಗಳ ಕೆಲವು ಫೋಟೋಗಳನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಯಶಸ್ಸು ಮತ್ತು ಹಣದ ಒಳಹರಿವು ಹೆಚ್ಚಾಗುತ್ತದೆ. ಈಗ ವಾಸ್ತು ಪ್ರಕಾರ ಮನೆಯಲ್ಲಿ ಯಾವ ರೀತಿಯ ಪಕ್ಷಿಗಳ ಫೋಟೋಗಳನ್ನು ಇಡಬೇಕು. ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿಯೋಣ.
ಹಂಸ
ಹಂಸವು ಸುಂದರವಾದ ಪಕ್ಷಿಯಾಗಿದೆ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗಾಗಿ ಹಂಸದ ಫೋಟೋ ಮನೆಯಲ್ಲಿ ಇದ್ದರೆ ಅದೃಷ್ಟ ಸೂರ್ಯನಂತೆ ಹೊಳೆಯುತ್ತದೆ. ಈ ಹಂಸದ ಫೋಟೋವನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿ ಈ ಹಕ್ಕಿಯ ಫೋಟೋವನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಹಣದ ಹರಿವಿನಲ್ಲಿನ ಅಡೆತಡೆಗಳು ದೂರವಾಗುತ್ತವೆ.

ನವಿಲು
ನವಿಲು ಮುರುಗನ ವಾಹನ ಮಾತ್ರವಲ್ಲ, ವಾಸ್ತು ಶಾಸ್ತ್ರದಲ್ಲಿ ನವಿಲು ಮಹತ್ವದ್ದಾಗಿದೆ. ನವಿಲು ಗರಿ ಬಿಚ್ಚಿದಾಗ ಅದರ ಸೌಂದರ್ಯ ಬಹಳ ಆಕರ್ಷಕವಾಗಿರುತ್ತದೆ. ನವಿಲನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಂತಹ ನವಿಲಿನ ಫೋಟೋವನ್ನು ಮನೆಯಲ್ಲಿಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಮನೆಯಲ್ಲಿನ ದೋಷಗಳನ್ನು ಇದು ನಿವಾರಿಸುತ್ತದೆ. ವಾಸ್ತು ಪ್ರಕಾರ ನವಿಲಿನ ಫೋಟೋವನ್ನು ಮನೆಯ ಪೂರ್ವ ಗೋಡೆಗೆ ನೇತು ಹಾಕಬೇಕು.
ಮಿಂಚುಳ್ಳಿ
ವಾಸ್ತು ಪ್ರಕಾರ ಮಿಂಚುಳ್ಳಿ ಪಕ್ಷಿಯನ್ನು ಮನೆಯಲ್ಲಿ ಸಾಕುವುದು ತುಂಬಾ ಒಳ್ಳೆಯದು. ಈ ಹಕ್ಕಿಯ ಫೋಟೋವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಈ ಪಕ್ಷಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಸಂತೋಷ ಹೆಚ್ಚಾಗುತ್ತದೆ, ಸಂಪತ್ತು ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿನ ಹಣದ ತೊಂದರೆಗಳು ದೂರವಾಗುತ್ತವೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications