Lok Sabha Election 2024: ಜಯನಗರದಲ್ಲಿ ಕಂತೆ ಕಂತೆ ನೋಟು ಪತ್ತೆ!
ಬೆಂಗಳೂರು ಏಪ್ರಿಲ್ 13: ಕರ್ನಾಟಕ ಲೋಕಸಭಾ ಚುನಾವಣೆಗೆ ಹಣದ ಹೋಳೆ ಹರೆಯುತ್ತಿದೆ. ತೆರೆಮರೆಯಲ್ಲಿ ನೋಟು ಹಂಚಿಕೆ ಕಸರತ್ತು ಜೋರಾಗಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಜಯನಗರದಲ್ಲಿ ಕಾರಿನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ.
ಹೌದು.... ಇಂದು (ಏ.13) ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಜಯನಗರದಲ್ಲಿ ಎರಡು ಕಾರು ಒಂದು ಬೈಕ್‌ನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ. ಬೈಕ್‌ನಲ್ಲಿ ಒಂದು ಬ್ಯಾಗ್, ಎರಡು ಕಾರ್‌ನಲ್ಲಿ ತಲಾ ಒಂದೊಂದು ಬ್ಯಾಗ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಖಲೆ ರಹಿತ ಹಣ ಎಲ್ಲಿಂದ ಬಂತು ಎಲ್ಲಿಗೆ ಹೋಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ವಾಹನದಲ್ಲಿ ಇದ್ದವರು ಎಸ್ಕೇಪ್ ಆಗಿದ್ದಾರೆ. ಹಣ ಎಣಿಸಲು ಸಾಧ್ಯವಾಗದೇ ಪೊಲೀಸರು ಕೌಂಟಿಂಗ್ ಮೆಷಿನ್ ತಂದಿದ್ದಾರೆ. ಲೋಕಸಭಾ ಚುನವಣೆ ಹಿನ್ನಲೆ ಯಾವುದೇ ಅಕ್ರಮ ನಡೆಯದಂತೆ ಚೆಕ್‌ಪೋಸ್ಟ್ ನಿರ್ಮಿಸಿ ಹದ್ದಿನ ಕಣ್ಣು ಇಡಲಾಗಿದೆ. ಅನುಮಾನ ಬಂದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಈ ತಪಾಸಣೆ ವೇಳೆ ಬೈಕ್‌ನಲ್ಲಿ ಒಂದು ಬ್ಯಾಗ್, ಎರಡು ಕಾರ್‌ನಲ್ಲಿ ತಲಾ ಒಂದೊಂದು ಬ್ಯಾಗ್‌ನ್ನು ಜಪ್ತಿ ಮಾಡಲಾಗಿದ್ದು, ಪಾರ್ಚುನರ್ ಕಾರಿನಲ್ಲಿದ್ದ ಐವರು ಎಸ್ಕೇಪ್ ಆಗಿದ್ದಾರೆ.
ಇದೀಗ ಐಟಿ ಸಿಬ್ಬಂದಿ ಹಣ ಎಣಿಸುವ ಮೆಷಿನ್ ತಂದಿದ್ದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕಾಯುತ್ತಿದ್ದಾರೆ. ಸ್ಥಳದಲ್ಲಿ ಎಂಸಿಸಿ ನೋಡಲ್ ಅಧಿಕಾರಿ ಮನೀಷ್ ಮೌದ್ಗಿಲ್ ಇದ್ದು, ಇನ್ನು ಸೀಜ್ ಆದ ಬೈಕ್ ಧನಂಜಯ ಎಂಬುವರಿಗೆ ಸೇರಿದ್ದಾಗಿದ್ದು, ಕಾರು ಸೋಮಶೇಖರ್ ಎಂಬುವರಿಗೆ ಸೇರಿದೆ ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಎರಡು ಕೌಂಟಿಂಗ್ ಮೆಷಿನ್ ಮೂಲಕ ಹಣ ಎಣಿಸಲಾಗುತ್ತಿದೆ.
ಇದೇ ವೇಳೆ ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾರಿನ ಒಳಗಡೆ ಇದ್ದ ಒಂದು ಮೊಬೈಲ್ ಮತ್ತು ಒಂದಷ್ಟು ದಾಖಲಾತಿಗಳು ಚುನಾವಣಾಧಿಕಾರಿಗಳಿಗೆ ಲಭ್ಯವಾಗಿದ್ದು, ಸೋಮಶೇಖರ್ ಗಂಗಾಧರಯ್ಯ ಎಂಬುವರ ಹೆಸರಲ್ಲಿ ಕೆಲವು ದಾಖಲೆಗಳು ಇರುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ತನಿಖೆ ಬಳಿಕ ನಿಖರ ಮಾಹಿತಿ ದೊರೆಯಲಿದೆ.












Click it and Unblock the Notifications