EPFO: ಪಿಎಫ್ ನಿಯಮದಲ್ಲಿ ಭಾರೀ ಬದಲಾವಣೆ, 1 ಲಕ್ಷದವರೆಗೂ ಹಣ ಬಿಡಿಸಿಕೊಳ್ಳಬಹುದು!
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಹಣ ವಿತ್‌ಡ್ರಾ ಮಾಡಲು ಅಸ್ತಿತ್ವದಲ್ಲಿರುವ 68ಜೆ ಕ್ಲೈಮ್‌ಗಳ ಅರ್ಹತೆಯ ಮಿತಿಯನ್ನು 50,000 ರೂಪಾಯಿ ಇಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಲು ಆದೇಶಿಸಿದೆ. ಏಪ್ರಿಲ್ 16 ರಂದು ಇಪಿಎಫ್‌ಒ ಹೊರಡಿಸಿದ ಸುತ್ತೋಲೆಯ ಮೂಲಕ ಈ ಘೋಷಣೆ ಮಾಡಲಾಗಿದೆ.
ಇಪಿಎಫ್‌ಒ ಇತ್ತೀಚೆಗೆ ಪ್ಯಾರಾಗ್ರಾಫ್ 68J ಅಡಿಯಲ್ಲಿ ಸ್ವಯಂ ಕ್ಲೈಮ್ ಸೆಟಲ್‌ಮೆಂಟ್‌ಗಳ ಅಸ್ತಿತ್ವದಲ್ಲಿರುವ ಅರ್ಹತೆಯ ಮಿತಿಯನ್ನು 1 ಲಕ್ಷಕ್ಕೆ ಹೆಚ್ಚಿಸಿದೆ. ಪ್ಯಾರಾಗ್ರಾಫ್ 68J ಇಪಿಎಫ್ ಹೂಡಿಕೆದಾರರ ಸ್ವಯಂ ಮತ್ತು ಅವಲಂಬಿತರ ವೈದ್ಯಕೀಯ ವೆಚ್ಚಗಳಿಗಾಗಿ ಮುಂಗಡವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಮುಂಗಡವನ್ನು ಪಡೆಯಲು ಇಪಿಎಫ್‌ಒ ಸದಸ್ಯರಿಗೆ ಅವಕಾಶ ಇದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಏಪ್ರಿಲ್ 10, 2024 ರಂದು ಅಪ್ಲಿಕೇಶನ್ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡಿದೆ. ಇದು ಈಗಾಗಲೇ ಕೇಂದ್ರ ಭವಿಷ್ಯ ನಿಧಿ ಆಯುಕ್ತರಿಂದ (CPFC) ಗ್ರೀನ್ ಸಿಗ್ನಲ್ ಪಡೆದಿದೆ. ಇಪಿಎಫ್ ಭಾಗಶಃ ಹಣ ವಿತ್‌ಡ್ರಾ ಮಾಡುವ ಹಲವಾರು ಉದ್ದೇಶಗಳಿಗಾಗಿ ಫಾರ್ಮ್ 31 ಮೂಲಕ ಅನುಮತಿಸಲಾಗಿದೆ. ಈ ಉದ್ದೇಶಗಳು ಮದುವೆಯಿಂದ ಹಿಡಿದು ಸಾಲ ಮರುಪಾವತಿ, ಮತ್ತು ಫ್ಲಾಟ್ ಖರೀದಿಯಿಂದ ಮನೆ ನಿರ್ಮಾಣದವರೆಗೆ ಹಲವು ಕಾರಣಗಳಾಗಿವೆ.
ಪ್ಯಾರಾ 68J ಅಡಿಯಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಯಿಂದ ಮಿತಿಯನ್ನು ಅನ್ನು ಈಗಷ್ಟೇ ಹೆಚ್ಚಿಸಲಾಗಿದೆ. ಈ ಮೂಲಕ ಒಂದು ಲಕ್ಷದ ಮಿತಿಗೆ ಒಳಪಟ್ಟು ಚಂದಾದಾರರ ಅಥವಾ ಕುಟುಂಬದ ಸದಸ್ಯರ ಅನಾರೋಗ್ಯದ ಚಿಕಿತ್ಸೆಗಾಗಿ ಮುಂಗಡಗಳನ್ನು ಪಡೆಯಬಹುದು.

ಚಂದಾದಾರರು 6 ತಿಂಗಳ ಮೂಲ ವೇತನ ಮತ್ತು ಡಿಎ (ಅಥವಾ ಬಡ್ಡಿಯೊಂದಿಗೆ ಉದ್ಯೋಗಿ ಪಾಲು) ಯಾವುದು ಕಡಿಮೆಯೋ ಅದನ್ನು ವಿತ್‌ಡ್ರಾ ಮಾಡುವ ಹಕ್ಕು ಪಡೆಯುತ್ತಾರೆ. ಫಾರ್ಮ್ 31 ಜೊತೆಗೆ, ಚಂದಾದಾರರು ಉದ್ಯೋಗಿ ಮತ್ತು ವೈದ್ಯರಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕಾಗುತ್ತದೆ.
ಫಾರ್ಮ್ 31 ಎಂದರೇನು?
ಇಪಿಎಫ್ ಫಾರ್ಮ್ 31 ಅನ್ನು ನೌಕರರ ಭವಿಷ್ಯ ನಿಧಿ ಖಾತೆಯಿಂದ ಹಣವನ್ನು ಕೊಂಚ ಭಾಗ ವಿತ್‌ಡ್ರಾ ಮಾಡಲು ಸಲ್ಲಿಸಬೇಕಾಗುತ್ತದೆ. ಫಾರ್ಮ್ 31 ರ ಮೂಲಕ, ಪ್ಯಾರಾ 68B ಅಡಿಯಲ್ಲಿ ನಿವೇಶನವನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಮನೆ/ಫ್ಲಾಟ್ ಖರೀದಿ, ಮನೆ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಬಹುದು. ಪ್ಯಾರಾ 68BB ಅಡಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ಸಾಲದ ಮರುಪಾವತಿಗಾಗಿ, ಪ್ಯಾರಾ 68H ಅಡಿಯಲ್ಲಿ ವಿಶೇಷ ಪ್ರಕರಣಗಳಲ್ಲಿ ಮುಂಗಡಗಳ ಅನುದಾನ ಪಡೆಯಬಹುದು.
ಪ್ಯಾರಾ 68J ಅಡಿಯಲ್ಲಿ ಅನಾರೋಗ್ಯದ ಕಾರಣಕ್ಕಾಗಿ, ಪ್ಯಾರಾ 68K ಅಡಿಯಲ್ಲಿ ಮಕ್ಕಳ ಮದುವೆಗಳು ಅಥವಾ ಮೆಟ್ರಿಕ್ಯುಲೇಷನ್ ನಂತರದ ಶಿಕ್ಷಣಕ್ಕಾಗಿ ಮತ್ತು ಪ್ಯಾರಾ 68N ಅಡಿಯಲ್ಲಿ ದೈಹಿಕವಾಗಿ ಅಶಕ್ತರಾಗಿರುವ ಸದಸ್ಯರಿಗೆ ಮುಂಗಡ ಅನುದಾನ ಮತ್ತು ಪ್ಯಾರಾ 68NN ಅಡಿಯಲ್ಲಿ ನಿವೃತ್ತಿಯ ಮೊದಲು ಒಂದು ವರ್ಷದೊಳಗೆ ಹಣ ಪಡೆಯಲು ಅನುವು ಮಾಡಿಕೊಡುತ್ತದೆ.
68-ಜೆ ಅಡಿಯಲ್ಲಿ ಹಣ ಕ್ಲೈಮ್ ಮಾಡುವುದು ಹೇಗೆ?
* ಸದಸ್ಯರು ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ (UAN) ವಿವರಗಳನ್ನು ಬಳಸಿಕೊಂಡು ಇಪಿಎಫ್‌ಒ ಪೋರ್ಟಲ್‌ಗೆ ಲಾಗ್ ಇನ್ ಮಾಡಬಹುದು.
* ನಿಮ್ಮ ಕೆವೈಸಿ (KYC) ವಿವರಗಳು ಮತ್ತು ಸೇವಾ ಅರ್ಹತೆಯ ಮಾಹಿತಿಯು ಸರಿಯಾಗಿದೆ ಮತ್ತು ಸಂಪೂರ್ಣವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.
* ಒಮ್ಮೆ ಪುಟದಲ್ಲಿ, ನೀವು ಪಡೆಯಲು ಬಯಸುವ ಕ್ಲೈಮ್ ಪ್ರಕಾರವನ್ನು ನೀವು ಆಯ್ಕೆ ಮಾಡಬೇಕು. ಮದುವೆ, ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಮನೆ ಖರೀದಿ ಅಥವಾ ಹೋಮ್ ಲೋನ್ ಮರುಪಾವತಿ, ಇತ್ಯಾದಿ.
* ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಬಂದ ಒಟಿಪಿ ಟೈಪ್ ಮಾಡಿ.
* ಪ್ರಾಂಪ್ಟ್‌ಗಳನ್ನು ಅನುಸರಿಸಿ ಮತ್ತು ಯಾವುದೇ ಅಗತ್ಯ ದಾಖಲೆ ಅಥವಾ ಮಾಹಿತಿಯನ್ನು ಒದಗಿಸುವ ಮೂಲಕ ಆನ್‌ಲೈನ್ ಕ್ಲೈಮ್ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.












Click it and Unblock the Notifications