• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಫೋಸಿಸ್ ನಿಂದ 5 ಸಾವಿರ ಮಂದಿ ಔಟ್?

By Mahesh
|

ಬೆಂಗಳೂರು, ಜ.4: ಹೊಸ ವರ್ಷದ ಆರಂಭದಲ್ಲೇ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. ಲಭ್ಯ ಮಾಹಿತಿ ಪ್ರಕಾರ ಇನ್ಫೋಸಿಸ್ ಸಂಸ್ಥೆ 5 ಸಾವಿರ ಮಂದಿ ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ reuters ನಲ್ಲಿ ವರದಿಯಾಗಿತ್ತು.

ಆದರೆ, ಸದ್ಯಕ್ಕೆ ಉದ್ಯೋಗ ಕಡಿತ ಸಂಭವವಿಲ್ಲ ಎಂದು ಇನ್ಫೋಸಿಸ್ ವಕ್ತಾರರು ಮಾಧ್ಯಮ ವರದಿಯನ್ನು ಅಲ್ಲಗೆಳೆದಿದ್ದಾರೆ.

ಉದ್ಯೋಗಿಗಳ ಕಡಿತಕ್ಕೆ ಕಾರಣ ಸಿಂಪಲ್, ಖರ್ಚು ವೆಚ್ಚ ಕಡಿಮೆ ಮಾಡಿಕೊಳ್ಳುವುದು, ಸೇಲ್ಸ್ ಗ್ರಾಫ್ ನಲ್ಲಿ ಏರಿಕೆ ಕಾಣುವುದು ಇನ್ಫೋಸಿಸ್ ನ ಉದ್ದೇಶ.

ಇನ್ಫೋಸಿಸ್ ನ ಯಾವ ವಿಭಾಗಗಳಲ್ಲಿ ಉದ್ಯೋಗ ಕಡಿತವಾಗಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟಣೆ ಸಿಕ್ಕಿಲ್ಲ. ಆದರೆ, ಸುಮಾರು 5000 ಉದ್ಯೋಗಿಗಳ ಕಡಿತ ಗ್ಯಾರಂಟಿ ಎಂದು Reuters ವರದಿ ಮಾಡಿದೆ.

ಕಳೆದ ಹಲವು ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ ಸಾಧನೆ ನಿರೀಕ್ಷಿತ ಮಟ್ಟ ಮುಟ್ಟಿರಲಿಲ್ಲ. ಅಮೆರಿಕದಲ್ಲಿ ಬರಾಕ್ ಒಬಾಮಾ ಹೊರ ತಂದಿರುವ ಹೊಸ ಉದ್ಯೋಗ ನೇಮಕಾತಿ ನೀತಿ ಕೂಡಾ ಇನ್ಫೋಸಿಸ್ ಗೆ ಮುಳುವಾಗಿದೆ. [ಪಿಂಕ್ ಸ್ಲಿಪ್]

ಇತ್ತೀಚಿನ ಬೆಳವಣಿಗೆಗಳನ್ನು ಮೆಲುಕು ಹಾಕಿದರೆ...

* ಪ್ರತಿಷ್ಠಿತ ನಾಸ್ಡಾಕ್ ನ ಟಾಪ್ 100 ಪಟ್ಟಿಯಿಂದ ಇನ್ಫೋಸಿಸ್ ಹೊರ ಬಿದ್ದಿತ್ತು.

* ನಾಸ್ಡಾಕ್ 100 ನಿಂದ ಹೊರಬಿದ್ದಿರುವುದು ಇನ್ಫೋಸಿಸ್ ಪಾಲಿಗೆ ಭಾರಿ ಹಿನ್ನೆಡೆಯಾಗಿತ್ತು. 13 ವರ್ಷಗಳ ಬಳಿಕ ಇನ್ಫೋಸಿಸ್ ತುಂಬಾ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ.

* 1999 ರಲ್ಲಿ 100 ಮಿಲಿಯನ್ ಡಾಲರ್ ಆದಾಯ ಗಳಿಕೆಯೊಂದಿಗೆ ಜಾಗತಿಕ ಮಟ್ಟದ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಭಾರತದ ಕಂಪನಿ ಎಂಬ ಹೆಗ್ಗಳಿಕೆಗೆ ಇನ್ಫೋಸಿಸ್ ಪಾತ್ರವಾಗಿತ್ತು.

* ಕ್ಯಾಂಪಸ್ ಸಂದರ್ಶನದ ಮೂಲಕ ನೇಮಕಾತಿಯನ್ನು 27,000ಕ್ಕೆ ಇಳಿಸಿದ್ದ ಇನ್ಫೋಸಿಸ್ ಈಗ ಈ ಪೈಕಿ 17,000 ನೇಮಕಾತಿಯನ್ನು ವಿಳಂಬಗೊಳಿಸಿತ್ತು.

* ಇನ್ಫೋಸಿಸ್ ನಿಂದ ಫೈನಾನ್ಸ್ ಸರ್ವೀಸಸ್ ನ ಶಾಜಿ ಫರೂಖ್ ಇನ್ಫೋಸಿಸ್ ತೊರೆದು ಬದ್ಧವೈರಿ ವಿಪ್ರೋ ಸೇರಿದ್ದರು. ನಂತರ ಬೋರ್ಡ್ ನಿಂದ ಮೋಹನ್ ದಾಸ್ ಪೈ, ಸೇಲ್ಸ್ ವಿಭಾಗದ ಮುಖ್ಯಸ್ಥ ಸುಭಾಷ್ ಧರ್, ಇನ್ಫೋಸಿಸ್ ಬಿಪಿಒ ಸಿಒಒ ರಿತೇಶ್ ಇದ್ನಾನಿ ಹಾಗೂ ಜಾಗತಿಕ ಕಾರ್ಪೊರೇಟ್ ವ್ಯವಹಾರ ವಿಭಾಗದ ಮುಖ್ಯಸ್ಥರಾಗಿದ್ದ ವಿನೋದ್ ಹುದ್ದೆ ತೊರೆದಿದ್ದರು.

* Q2 Year-on-Year ನಲ್ಲಿ 7.343 ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಹೊತ್ತಿದ್ದ ಇನ್ಫೋಸಿಸ್ Q2 ತ್ರೈಮಾಸಿಕ ವರದಿ ಹೂಡಿಕೆದಾರರಿಗೆ ನಿರಾಶೆ ಮೂಡಿಸಿತ್ತು.

* 2012ರಲ್ಲಿ ಷೇರುಪೇಟೆಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ಸಾಧನೆ ತೀರಾ ಕಳಪೆಯಾಗಿತ್ತು. ಸೆನ್ಸೆಕ್ಸ್ ಶೇ 26 ರಷ್ಟು ಲಾಭ ಪಡೆದಿತ್ತು. ಷೇರುಗಳ ಹಾವು ಏಣಿಯಾಟ ಹೂಡಿಕೆದಾರರಿಗೆ ತಲೆನೋವಾಗಿತ್ತು.

* ಜ.11 ರಂದು ಇನ್ಫೋಸಿಸ್ ತನ್ನ ಮತ್ತೊಂದು ನಿರಾಶಾದಾಯಕ ತ್ರೈಮಾಸಿಕ ವರದಿ ಪ್ರಕಟಿಸಲು ಸಿದ್ಧತೆ ನಡೆಸಿದೆ. ಮೇಲ್ಕಂಡ ಕಾರಣಗಳೂ ಸೇರಿ ಇನ್ನಷ್ಟು ಪ್ರಮುಖ ಬೆಳವಣಿಗೆಗಳು ಇನ್ಫೋಸಿಸ್ ಸಂಸ್ಥೆಯನ್ನು cost cutting ಮಂತ್ರ ಜಪಿಸುವಂತೆ ಮಾಡಿದೆ.

English summary
Infosys is planning to lay off up to 5,000 employees as the software services provider looks to cut costs and boost sales, a Reuters report quoting a newspaper report has said. However Infosys spokesperson denied media reports are wrong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X