Narayana Murthy: ಮೊಮ್ಮಗನಿಗೆ ₹240 ಕೋಟಿ ಷೇರು ಉಡುಗೊರೆಯಾಗಿ ಕೊಟ್ಟ ಮೂರ್ತಿ
ನವದೆಹಲಿ, ಮಾರ್ಚ್ 19: ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿಕೆ ಕೊಟ್ಟು ಸುದ್ದಿಯಾಗಿದ್ದ ಇನ್ಫೋಸಿಸ್ ಸಹ ಸಂಸ್ಥಾಪಕರಾದ ಎನ್‌ಆರ್.ನಾರಾಯಣ ಮೂರ್ತಿ ಅವರು ಇದೀಗ ಷೇರು ಗಿಫ್ಟ್ ವಿಚಾರವಾಗಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.
ಹೌದು, ಇನ್ಫೋಸಿಸ್ ಮುಖ್ಯಸ್ಥರಾಗಿರುವ ಎನ್.ಆರ್ ನಾರಾಯಣ ಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗನಿಗೆ ₹240 ಕೋಟಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಅವರು ಹೆಸರು ಸುದ್ದಿಯಲ್ಲಿದ್ದಾರೆ.

ನಾರಾಯಣ ಮೂರ್ತಿಯವರು ಮೂರನೇ ಮೊಮ್ಮಗ 'ಏಕಾಗ್ರಹ ರೋಹನ್ ಮೂರ್ತಿ' ಅವರಿಗೆ ಇನ್ಫೋಸಿಸ್‌ನ 15,00,000 ಷೇರುಗಳನ್ನು ಹೊಂದಿದ್ದಾರೆ. ಇದು ಕಂಪನಿಯಲ್ಲಿ ಶೇಕಡ 0.04ರಷ್ಟು ಪಾಲು ಎನ್ನಲಾಗಿದೆ ಎಂಬುದು ವರದಿಯಿಂದ ಬಹಿರಂಗವಾಗಿದೆ.
ಷೇರಿನಲ್ಲಿ ಇಳಿಕೆ
ಸದ್ಯ ಟೆಕ್ ಕಂಪನಿಯಲ್ಲಿ ನಾರಾಯಣ ಮೂರ್ತಿ ಅವರ ಷೇರು ಶೇಕಡಾ 0.40 ರಿಂದ ಶೇಕಡಾ 0.36 ಕ್ಕೆ ಅಂದರೆ 1.51 ಕೋಟಿ ಷೇರುಗಳಿಗೆ ಇಳಿಕೆ ಆಗಿದೆ.
ಏಕಾಗ್ರಹ ರೋಹನ್ ಅವರು ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಮಗ ರೋಹನ್ ಮೂರ್ತಿ ಮತ್ತು ಸೊಸೆ ಅಪರ್ಣಾ ದಂಪತಿ ಮಗ, ನಾರಾಯಣ ಮೂರ್ತಿಯವರಿಗೆ ಮೂರನೇ ಮೊಮ್ಮಗ. ನವೆಂಬರ್ 2023 ರಲ್ಲಿ ಏಕಾಗ್ರಹ ರೋಹನ್ ಜನಿಸಿದರು. ಇನ್ನೂ ಅಕ್ಷತಾ ಮೂರ್ತಿ ಮತ್ತು ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ಇಬ್ಬರು ಹೆಣ್ಣುಮಕ್ಕಳಿಗೆ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅಜ್ಜ-ಅಜ್ಜಿಯಾಗಿದ್ದಾರೆ.

ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಲೇಖಕಿಯು ಹೌದು
₹10,000 ಸಾಧಾರಣ ಹೂಡಿಕೆಯೊಂದಿಗೆ 1981ರಲ್ಲಿ ಆರಂಭವಾದ ಇನ್ಫೋಸಿಸ್ ನಂತರ ಭಾರತದ 2ನೇ ಅತಿದೊಡ್ಡ ಟೆಕ್ ಕಂಪನಿಯಾಗಿ ಬೆಳೆದಿದೆ. ಇನ್ಫೋಸಿಸ್ ಸ್ಥಾಪಕರಾದ ಸುಧಾ ಮೂರ್ತಿ ಅವರು ಒಬ್ಬ ಉತ್ತಮ ಲೇಖಕರು, ಲೋಕೋಪಕಾರಿ, ಇನ್ಫೋಸಿಸ್‌ನ ಆರಂಭಿಕ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ಫೋಸಿಸ್ ಫೌಂಡೇಶನ್ ಅನ್ನು ಮುನ್ನಡೆಸಲು 25 ವರ್ಷಗಳನ್ನು ಮೀಸಲಿಟ್ಟ ನಂತರ, ಅವರು ಡಿಸೆಂಬರ್ 2021 ರಲ್ಲಿ ತಮ್ಮ ಸ್ಥಾನದಿಂದ ನಿವೃತ್ತರಾದರು. ಕುಟುಂಬದ ಪ್ರತಿಷ್ಠಾನದ ಮೂಲಕ ತಮ್ಮ ದತ್ತಿ ಕೆಲಸಗಳನ್ನು ಮುಂದುವರೆಸಿರುವ ಅವರು ಕೇಂದ್ರ ಸರ್ಕಾರದಿಂದ ಮೊನ್ನೆಯಷ್ಟೇ ರಾಜ್ಯಸಭಾ ಸದಸ್ಯೆಯಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಚರ್ಚೆಗೆ ಗ್ರಾಸವಾಗಿದ್ದ ನಾರಾಯಣ ಮೂರ್ತಿ ಹೇಳಿಕೆ
ಕಳೆದ ವರ್ಷ ನಾರಾಯಣ ಮೂರ್ತಿಯವರು ಯುವಕರನ್ನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಒತ್ತಾಯಿಸಿದ್ದರು. ಇದು ತೀವ್ರ ಚರ್ಚೆ ಹುಟ್ಟುಹಾಕಿತ್ತು. ದೇಶದ ವಿದ್ಯಾವಂತ ಜನಸಂಖ್ಯೆಯು "ಅತ್ಯಂತ ಕಷ್ಟಪಟ್ಟು" ಕೆಲಸ ಮಾಡುವ ಕಡಿಮೆ ಅದೃಷ್ಟಕ್ಕೆ ಋಣಿಯಾಗಿದೆ ಎಂದು ತಿಳಿಸಿದ್ದರು.
ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ನಾರಾಯಣ ಮೂರ್ತಿಯವರ ಅಭಿಪ್ರಾಯವನ್ನು ಹಲವರು ಒಪ್ಪಿದರು. ಇನ್ನೂ ಕೆಲವರು ಟೀಕಿಸಿದರು. ಕಂಪನಿ ವಿರುದ್ಧವು ಕೆಲವರು ಟೀಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಮೂರ್ತಿ ಅವರು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.












Click it and Unblock the Notifications