Infosys: ₹280 ಕೋಟಿಗೆ ಬೆಂಗಳೂರಿನ ಈ ಪ್ರತಿಷ್ಠಿತ ಸಂಸ್ಥೆ ಇನ್ಫೋಸಿಸ್ ಸ್ವಾಧೀನ, ಈ ಕಂಪನಿಯ ಆದಾಯ ಎಷ್ಟು ಕೋಟಿ ಗೊತ್ತಾ?
ಬೆಂಗಳೂರು, ಜನವರಿ, 12: ಪ್ರತಿಷ್ಠಿತ ಕಂಪನಿಯಾಗಿರುವ ಇನ್ಫೋಸಿಸ್, ಬೆಂಗಳೂರು ಮೂಲದ ಸೆಮಿಕಂಡಕ್ಟರ್ ಮತ್ತು ಎಂಬೆಡೆಡ್ ಸಿಸ್ಟಮ್ಸ್ ಡಿಸೈನ್ ಕಂಪನಿ ಆಗಿರುವ InSemi ಅನ್ನು 280 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಳ್ಳಲು ನಿರ್ಧಾರ ಮಾಡಿದೆ.
ಎಐ ಅನುಕೂಲತೆಗಳು, ಸ್ಮಾರ್ಟ್ ಸಾಧನಗಳು, 5G ಮತ್ತು ಅದಕ್ಕೂ ಮೀರಿದ ಎಲೆಕ್ಟ್ರಿಕ್ ವಾಹನಗಳ ಆಗಮನದಿಂದ ಎಂಬೆಡೆಡ್ ಸಿಸ್ಟಮ್‌ಗಳೊಂದಿಗೆ ಸಂಯೋಜಿಸಲ್ಪಟ್ಟ ಮುಂದಿನ ಪೀಳಿಗೆಯ ಸೆಮಿಕಂಡಕ್ಟರ್ ವಿನ್ಯಾಸ ಸೇವೆಗಳ ಬೇಡಿಕೆಯು ವಿಶಿಷ್ಟವಾದ ವಿಭಿನ್ನತೆಯನ್ನು ಸೃಷ್ಟಿಸುತ್ತದೆ. InSemi ಒಂದು ಕಾರ್ಯತಂತ್ರದ ಹೂಡಿಕೆ ಆಗಿದ್ದು, ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಾಯಕತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಸ್ವಾಧೀನ ಪ್ರಕ್ರಿಯೆಯು 2024 ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳುವ ಸಾಧ್ಯೆತೆಯಿದೆ. ಇನ್ಫೋಸಿಸ್‌ನೊಂದಿಗೆ ಸ್ವಾಧೀನದೊಂದಿಗೆ ಸಹಯೋಗ ದೊಡ್ಡ ಪ್ರಮಾಣದಲ್ಲಿ ಸೃಷ್ಟಿ ಆಗಲಿದೆ. ಎಐ, ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಬಂದಾಂತಾಗಲಿದೆ. ಮುಂದಿನ ಪೀಳಿಗೆಯ ತಂತ್ರಜ್ಞಾನದ ಶಕ್ತಿಯನ್ನು ಜಾಗತಿಕ ಗ್ರಾಹಕರು ಮತ್ತು ಉದ್ಯಮ ವಲಯಗಳಲ್ಲಿ ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದು InSemi ಸಹ ಸಂಸ್ಥಾಪಕರಾದ ಶ್ರೀಕಾಂತ್ ಸಂಪಿಗೆತಯಾ ಮಾಹಿತಿ ನೀಡಿದ್ದಾರೆ.
2013ರಲ್ಲಿ ಸ್ಥಾಪನೆಯಾದ InSemi, ಎಲೆಕ್ಟ್ರಾನಿಕ್ ವಿನ್ಯಾಸ, ಪ್ಲಾಟ್‌ಫಾರ್ಮ್ ವಿನ್ಯಾಸ, ಆಟೊಮೇಷನ್, ಎಂಬೆಡೆಡ್ ಮತ್ತು ಸಾಫ್ಟ್‌ವೇರ್ ತಂತ್ರಜ್ಞಾನಗಳ ಪರಿಣತಿಯೊಂದಿಗೆ ಎಂಡ್-ಟು-ಎಂಡ್ ಸೆಮಿಕಂಡಕ್ಟರ್ ವಿನ್ಯಾಸ ಸೇವೆಗಳನ್ನು ನೀಡುತ್ತದೆ. ಇದು ಸೆಮಿ-ಕಂಡಕ್ಟರ್, ಗ್ರಾಹಕ ಎಲೆಕ್ಟ್ರಾನಿಕ್ಸ್, ಆಟೋಮೋಟಿವ್ ಮತ್ತು ಹೈಟೆಕ್ ಉದ್ಯಮಗಳಾದ್ಯಂತ ಹಲವಾರು ಪ್ರಮುಖ ಜಾಗತಿಕ ನಿಗಮಗಳಿಗೆ ಸೇವೆ ಸಲ್ಲಿಸುತ್ತದೆ.
ಕಳೆದ ವರ್ಷ ಮಾರ್ಚ್‌ಗೆ ಕೊನೆಗೊಂಡ ವರ್ಷದಲ್ಲಿ ಕಂಪನಿಯು 154 ಕೋಟಿ ಆದಾಯವನ್ನು ಹೊಂದಿತ್ತು. ಇದರ ಸ್ವಾಧೀನವು ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಮತ್ತು ಎಂಜಿನಿಯರಿಂಗ್‌ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸೇವೆಗಳಲ್ಲಿ ಪರಿಣತಿಯನ್ನು ಬಲಪಡಿಸುತ್ತದೆ ಎಂದು ಇನ್ಫೋಸಿಸ್ ಹೇಳಿದೆ.
ಮತ್ತೆ ಸುದ್ದಿಯಾದ "70 ಗಂಟೆ ನಾರಾಯಣಮೂರ್ತಿ"
ಇತ್ತೀಚೆಗಷ್ಟೇ ಕಂಪನಿಗಳಲ್ಲಿ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿ ಇನ್ಫೋಸಿಸ್ ನಾರಾಯಣಮೂರ್ತಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೆ ಸುದ್ದಿಯಲಿದ್ದಾರೆ. ಯಾವ ವಿಚಾರದಲ್ಲಿ ಗೊತ್ತಾ ಇಲ್ಲಿದೆ ಮಾಹಿತಿ ತಿಳಿಯಿರಿ.
ತಮ್ಮ ಯೌವ್ವನದಲ್ಲಿ ನಡೆದ ಪ್ರೇಮ ಪ್ರಲಾಪದ ಹಾಸ್ಯದಿಂದಾಗಿ ಮತ್ತೂಮ್ಮೆ ಇದೀಗ ಸಾಮಾಜಿಲ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿದ್ದಾರೆ. ಆದರೆ ನೆಟ್ಟಿಗರು ಈ ಹಾಸ್ಯಕ್ಕೂ 70 ಗಂಟೆ ವಿಚಾರವನ್ನು ಸೇರಿಸಿಕೊಂಡು ನಾರಾಯಣ ಮೂರ್ತಿಯವರ ಕಾಲೆಳೆದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಾರಾಯಣಮೂರ್ತಿ ಅವರು, ತಾವು ಸುಧಾಮೂರ್ತಿ ಅವರನ್ನು ನೋಡಲು ಟಿಕೆಟ್ ಇಲ್ಲದೇ ರೈಲಿನಲ್ಲಿ 11 ಗಂಟೆಗಳ ಕಾಲ ಪ್ರಯಾಣಿಸಿದ್ದ ವಿಚಾರವನ್ನು ಹಂಚಿಕೊಂಡಿದ್ದರು ಎನ್ನುವ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಆಗ ಯೌವ್ವನ ಆಗಿದ್ದರಿಂದ ನಮ್ಮ ಮಾತನ್ನು ನಾವೇ ಕೇಳುತ್ತಿರಲಿಲ್ಲ. ಯೌವ್ವನ ಆಡಿಸಿದ ರೀತಿಯಲ್ಲಿ ನಾವು ಅದರ ಮಾತು ಕೇಳಬೇಕಿತ್ತು ಎನ್ನುವಂತಹ ಹಾಸ್ಯದ ಮಾತನಾಡಿದ್ದರು. ಈ ವೀಡಿಯೋ ವೈರಲ್ ಆಗಿದ್ದು, ಇದಕ್ಕೆ ನಟ್ಟಿಗರು ಅವರಿಗೆ ಇಷ್ಟ ಬಂದಂತೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇನ್ನು ಕೆಲವರು ನೀವು ಇತ್ತೀಚೆಗಷ್ಟೇ 70 ಗಂಟೆ ಕೆಲಸ ಮಾಡುವ ನಿಯಮ ಅನುಸರಿಸಿರಲಿಲ್ಲವೇ ಎಂದು ಪ್ರಶ್ನಿಸಿದ್ದರೆ, ಮತ್ಂದೆಡೆ ಇನ್ನೂ ಕೆಲವರು ಆ ವಾರ ನೀವು ಕೇವಲ 59 ಗಂಟೆ ಕೆಲಸ ಮಾಡಿದ್ದೀರಿ, ಇದರಿಂದ ಸಂಸ್ಥೆಗೆ ಆರ್ಥಿಕ ಸಂಕಷ್ಟ ಆಗಿಲ್ಲವೇ ಎಂದು ಕಾಲೆಳೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನವದೆಹಲಿ, ಜನವರಿ, 12: ಇತ್ತೀಚೆಗಷ್ಟೇ ಕಂಪನಿಗಳಲ್ಲಿ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿ ಇನ್ಫೋಸಿಸ್ ನಾರಾಯಣಮೂರ್ತಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೆ ಸುದ್ದಿಯಲಿದ್ದಾರೆ. ಯಾವ ವಿಚಾರದಲ್ಲಿ ಗೊತ್ತಾ ಇಲ್ಲಿದೆ ಮಾಹಿತಿ ತಿಳಿಯಿರಿ.
ತಮ್ಮ ಯೌವ್ವನದಲ್ಲಿ ನಡೆದ ಪ್ರೇಮ ಪ್ರಲಾಪದ ಹಾಸ್ಯದಿಂದಾಗಿ ಮತ್ತೂಮ್ಮೆ ಇದೀಗ ಸಾಮಾಜಿಲ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿದ್ದಾರೆ. ಆದರೆ ನೆಟ್ಟಿಗರು ಈ ಹಾಸ್ಯಕ್ಕೂ 70 ಗಂಟೆ ವಿಚಾರವನ್ನು ಸೇರಿಸಿಕೊಂಡು ನಾರಾಯಣ ಮೂರ್ತಿಯವರ ಕಾಲೆಳೆದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಾರಾಯಣಮೂರ್ತಿ ಅವರು, ತಾವು ಸುಧಾಮೂರ್ತಿ ಅವರನ್ನು ನೋಡಲು ಟಿಕೆಟ್ ಇಲ್ಲದೇ ರೈಲಿನಲ್ಲಿ 11 ಗಂಟೆಗಳ ಕಾಲ ಪ್ರಯಾಣಿಸಿದ್ದ ವಿಚಾರವನ್ನು ಹಂಚಿಕೊಂಡಿದ್ದರು ಎನ್ನುವ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಆಗ ಯೌವ್ವನ ಆಗಿದ್ದರಿಂದ ನಮ್ಮ ಮಾತನ್ನು ನಾವೇ ಕೇಳುತ್ತಿರಲಿಲ್ಲ. ಯೌವ್ವನ ಆಡಿಸಿದ ರೀತಿಯಲ್ಲಿ ನಾವು ಅದರ ಮಾತು ಕೇಳಬೇಕಿತ್ತು ಎನ್ನುವಂತಹ ಹಾಸ್ಯದ ಮಾತನಾಡಿದ್ದರು. ಈ ವೀಡಿಯೋ ವೈರಲ್ ಆಗಿದ್ದು, ಇದಕ್ಕೆ ನಟ್ಟಿಗರು ಅವರಿಗೆ ಇಷ್ಟ ಬಂದಂತೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇನ್ನು ಕೆಲವರು ನೀವು ಇತ್ತೀಚೆಗಷ್ಟೇ 70 ಗಂಟೆ ಕೆಲಸ ಮಾಡುವ ನಿಯಮ ಅನುಸರಿಸಿರಲಿಲ್ಲವೇ ಎಂದು ಪ್ರಶ್ನಿಸಿದ್ದರೆ, ಮತ್ಂದೆಡೆ ಇನ್ನೂ ಕೆಲವರು ಆ ವಾರ ನೀವು ಕೇವಲ 59 ಗಂಟೆ ಕೆಲಸ ಮಾಡಿದ್ದೀರಿ, ಇದರಿಂದ ಸಂಸ್ಥೆಗೆ ಆರ್ಥಿಕ ಸಂಕಷ್ಟ ಆಗಿಲ್ಲವೇ ಎಂದು ಕಾಲೆಳೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Click it and Unblock the Notifications