70 Hours Work: ವಾರಕ್ಕೆ 70 ಗಂಟೆ ಕೆಲಸ, ಸುಧಾ ಮೂರ್ತಿ ಹೇಳಿದ್ದೇನು?

ಇನ್ಫೊಸಿಸ್‌ ಮುಖ್ಯಸ್ಥರಾದ ನಾರಾಯಣ ಮೂರ್ತಿ ಇತ್ತೀಚೆಗೆ ಕೊಟ್ಟಿದ್ದ ಹೇಳಿಕೆಯು, ಭಾರಿ ಸಂಚಲನ ಸೃಷ್ಟಿಸಿ ಚರ್ಚೆಗೆ ವೇದಿಕೆ ಒದಗಿಸಿದೆ. ಒಂದು ಕಡೆ ನಾರಾಯಣ ಮೂರ್ತಿ ಅವ್ರು ಹೇಳಿದ್ದು ಸರಿ, ಅದನ್ನ ಫಾಲೋ ಮಾಡಬೇಕು ಅಂತಾ ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಇನ್ನೂ ಕೆಲವರು ಮೂರ್ತಿ ಅವರ ಹೇಳಿಕೆ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಸುಧಾ ಮೂರ್ತಿ ಅವರು ಈ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ ಭಾರತದ ಒಟ್ಟಾರೆ ಉತ್ಪಾದಕತೆ ಹೆಚ್ಚಿಸಲು ಯುವ ಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರಬೇಕು ಎಂದು ಇನ್ಫೊಸಿಸ್‌ ಸಹ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರು ಹೇಳಿದ್ದರು. ಈ ಕುರಿತು ಸಾಕಷ್ಟು ಚರ್ಚೆ ಶುರುವಾಗಿತ್ತು. ಅಲ್ಲದೆ ಈಗಿನ ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಒತ್ತಡ ಮತ್ತೆ ಇದರಿಂದ ಉಂಟಾಗುತ್ತಿರುವ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚೆ ಜೋರಾಗಿತ್ತು. ಆದರೆ ಇಷ್ಟೆಲ್ಲಾ ಬೆಳವಣಿಗೆ ನಡುವೆ, ನಾರಾಯಣ ಮೂರ್ತಿ ಅವರ ಹೇಳಿಕೆ ಬಗ್ಗೆ ಸುಧಾ ಮೂರ್ತಿ ಅವರು ಪ್ರತಿಕ್ರಿಯಿಸಿದ್ದಾರೆ.

Find What Sudha Murthy Said About Narayana Murthy Statement About 70 Hours Of Work In A Week

ಸುಧಾ ಮೂರ್ತಿ ಹೇಳಿದ್ದು ಏನು?

ಅಂದಹಾಗೆ ಸುಧಾ ಮೂರ್ತಿ ಅವರ ಪತಿ ಮತ್ತು ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಸಿಕ್ಕಿದೆ. ಈ ಬಗ್ಗೆ ಈಗ ಮಾತನಾಡಿರುವ ಸುಧಾ ಮೂರ್ತಿ ಅವರು, 'ಸ್ವತಃ ನಾರಾಯಣ ಮೂರ್ತಿ ಅವರೇ ವಾರಕ್ಕೆ 80 ರಿಂದ 90 ಗಂಟೆ ಕಾಲ ದುಡಿದಿದ್ದು ಅದನ್ನೇ ಈಗ ಹೇಳಿದ್ದಾರೆ' ಎಂದಿದ್ದಾರೆ. ಈ ಮೂಲಕ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನ ಸುಧಾ ಮೂರ್ತಿ ಅವರು ಸಮರ್ಥಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮದ ಬಗ್ಗೆ ನಾರಾಯಣ ಮೂರ್ತಿ ನಂಬಿಕೆ ಹೊಂದಿದ್ದರು. ತಮ್ಮ ಅನುಭವವ ಹಂಚಿಕೊಂಡಿದ್ದಾರೆ ಎಂದಿದ್ದಾರೆ, ಕನ್ನಡದ ಹಿರಿಯ ಬರಹಗಾರ್ತಿಯೂ ಆಗಿರುವ ಸುಧಾ ಮೂರ್ತಿ ಅವರು.

'ಕಡಿಮೆ ಕೆಲಸ ಮಾಡುವ ಬಗ್ಗೆ ಅವರಿಗೆ ತಿಳಿದಿಲ್ಲ'

ಮತ್ತೊಂದು ಕಡೆ ತಮ್ಮ ಮಾತನ್ನು ಮುಂದುವರಿಸಿ ನಾರಾಯಣ ಮೂರ್ತಿ ಅವರ ಕಾಯಕ ಶ್ರದ್ಧೆ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ ಅವರು, 'ಅವರು ಪ್ರತಿ ವಾರಕ್ಕೆ 80ರಿಂದ 90 ಗಂಟೆ ಕಾಲ ಕೆಲಸ ಮಾಡುತ್ತಿದ್ರು. ಇದಕ್ಕಿಂತ ಕಡಿಮೆ ಕೆಲಸ ಮಾಡುವ ಬಗ್ಗೆ ಅವರಿಗೆ ತಿಳಿದೇ ಇಲ್ಲ. ಕಠಿಣ ಪರಿಶ್ರಮದ ಬಗ್ಗೆ ಅವರಿಗೆ ಬಹಳ ನಂಬಿಕೆಯಿದೆ. ಅವರು ಏನು ನಂಬಿದ್ದರೋ ಅದನ್ನೇ ಈಗ ಹೇಳಿದ್ದಾರೆ' ಎಂದಿದ್ದಾರೆ.

ಒಟ್ನಲ್ಲಿ ಭಾರತದ ಐಟಿ ಕ್ಷೇತ್ರದ ದಿಗ್ಗಜನ ಮಾತಿನ ಬಗ್ಗೆ ಚರ್ಚೆ ಶುರುವಾಗಿದೆ. ಈ ಕುರಿತು ಈಗ ಸುಧಾ ಮೂರ್ತಿ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ನಡೆಯುವ ಚರ್ಚೆ ಇಲ್ಲಿಗೆ ನಿಂತು ಹೋಗುತ್ತಾ? ಅಥವಾ ಹೀಗೆ ಮುಂದುವರಿಯುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+