Infosys Jobs: ಇನ್ಫೋಸಿಸ್‌ನಲ್ಲಿ ವರ್ಕ್ ಫ್ರಮ್ ಹೋಮ್ ಸೇರಿ ಹಲವು ಕೆಲಸ ಖಾಲಿ: ಈಗಲೇ ಅರ್ಜಿ ಹಾಕಿ
ನೀವು ಪದವೀಧರರಾ? ಡಿಗ್ರಿ ಮುಗಿಸಿ ಸೂಕ್ತ ಕೆಲಸಕ್ಕಾಗಿ ಹುಡಕಾಡುತ್ತಿದ್ದೀರಾ? ಅಥವಾ ಉದ್ಯೋಗ ಬದಲಾವಣೆ ಮಾಡಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಇನ್ಫೋಸಿಸ್‌ನಲ್ಲಿದೆ ಕೆಲಸ ಮಾಡುವ ಅವಕಾಶ.
ಬೆಂಗಳೂರು ಮೂಲದ ಟೆಕ್ ದೈತ್ಯ ಕಂಪನಿಯಾಗಿರುವ ಇನ್ಫೋಸಿಸ್‌ನಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ಅನುಭವಿಗಳು, ಇತ್ತೀಚಿನ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಯುವ ಪ್ರತಿಭೆಗಳಿಗಾಗಿ ಡೈನಾಮಿಕ್ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಕೂಡ ಇನ್ಫೋಸಿಸ್ ಒದಗಿಸುತ್ತಿದೆ.
ಲಾಭದಾಯಕ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಪದವೀಧರರು ಇನ್ಫೋಸಿಸ್‌ನಲ್ಲಿ ಲಭ್ಯವಿರುವ ಅವಕಾಶಗಳನ್ನು ಅನ್ವೇಷಿಸಬಹುದು. ನಿಮ್ಮ ಕೌಶಲ್ಯ ಮತ್ತು ಆಕಾಂಕ್ಷೆಗಳೊಂದಿಗೆ ಹೊಂದಾಣಿಕೆಯಾಗುವ ಕೆಲಸಗಳನ್ನು ಹುಡುಕಬಹುದಾಗಿದೆ.

ಟೆಕ್ನಾಲಜಿ ಅನಾಲಿಸ್ಟ್, ಎಸ್‌ಎಪಿ ಟೆಕ್ನಾಲಜಿ, ಬುಸಿನೆಸ್ ಅನಾಲಿಸ್ಟ್, ಟೆಕ್ನಿಕಲ್ ಲೀಡ್, ಜಾವಾ ಲೀಡ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವರ್ಕ್ ಫ್ರಮ್ ಹೋಮ್ ಕೆಲಸ
ಕಚೇರಿಯಿಂದ ಮಾಡುವ ಕೆಲಸಗಳ ಜೊತೆ ಮನೆಯಿಂದ ಕೆಲಸ ಮಾಡಲು ಕೂಡ ಉದ್ಯೋಗಿಗಳಿಗೆ ಅವಕಾಶ ನೀಡಲಾಗುತ್ತದೆ. ಮನೆಯಿಂದ ಕೆಲಸ ಮಾಡುವ ಉದ್ಯೋಗಗಳನ್ನು ಕೂಡ ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಅರ್ಜಿಯ ಪ್ರಕ್ರಿಯೆ
ಈ ಅವಕಾಶಗಳಿಗಾಗಿ ಅರ್ಜಿ ಸಲ್ಲಿಸಲು, ಇನ್ಫೋಸಿಸ್ ಸಂಸ್ಥೆಯ ಆಯಾ ವೃತ್ತಿ ಪುಟಗಳಿಗೆ ಭೇಟಿ ನೀಡಿ ಮತ್ತು ಇನ್ಫೋಸಿಸ್ ವಿವರಿಸಿರುವ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಅನುಸರಿಸಿ. ನಿಮ್ಮ ಕೌಶಲ್ಯ ಮತ್ತು ಅನುಭವಗಳನ್ನು ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.












Click it and Unblock the Notifications