Infosys: ಮನೆಯಲ್ಲಿರುವ ಕೆಲವು ಉದ್ಯೋಗಿಗಳಿಗೆ ಕಚೇರಿ ಬರಲು ಸೂಚನೆ
ಬೆಂಗಳೂರು, ನವೆಂಬರ್ 01: ಭಾರತೀಯ ಪ್ರಮುಖ ಐಟಿ ದಿಗ್ಗಜ (ಸಾಫ್ಟವೇರ್) ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ (Infosys Compay) ಕಂಪನಿಯು ಕೋವಿಡ್ 19 ಸಾಂಕ್ರಾಮಿಕ ಕಾಲದಲ್ಲಿ ಜಾರಿಗೆ ತಂದಿದ್ದ ವರ್ಕ್ ಫ್ರಂ ಹೋಮ್ ಪದ್ಧತಿಯನ್ನು ಮಾರ್ಪಡಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಇನ್ಫೋಸಿಸ್ ಕಂಪನಿಯು ತನ್ನ ಕೆಲವು ಉದ್ಯೋಗಿಗಳನ್ನು ತಿಂಗಳಿಗೆ 10 ದಿನ ಕಚೇರಿಯಿಂದ ಕೆಲಸ ಮಾಡುವಂತೆ ಕೇಳಿದೆ. ಈ ಬಗ್ಗೆ ಬುಧವಾರದ ಕಂಪನಿಯ ಆಪ್ತ ಮೂಲಗಳು ಮಾಹಿತಿ ನೀಡಿವೆ. ಚ್ಚಿನ ದಕ್ಷತೆ, ಉತ್ತಮ ಸಹಯೋಗ, ಸಹಕಾರದ ಕಾರಣಗಳನ್ನು ಉಲ್ಲೇಖಿಸಿ ಕಂಪನಿ ಹೀಗೆ ಒಂದು ತಿಂಗಳಲ್ಲಿ ಹತ್ತು ದಿನ ಕಚೇರಿಯಲ್ಲಿ ಕೆಲಸ ಮಾಡಲು ಆದ್ಯತೆ ನೀಡಲು ನಿರ್ಧರಿಸಿದೆ.

ಈ ಮೂಲಕ ಕೋವಿಡ್ ವೇಳೆ ಜಾರಿಗೆ ಬಂದಿದ್ದ 'ರಿಮೋಟ್ ವರ್ಕ್' ನೀತಿಗಳನ್ನು ಜಗತ್ತಿನ ಬೇರೆ ದೇಶಗಳ ಕಂಪನಿಗಳು ಬದಲಾಯಿಸಿವೆ. ಕೆಲ ಕಂಪನಿಗಳು ವಾರದಲ್ಲಿ ಮೂರು ಕಚೇರಿ, ಉಳಿದ ದಿನ ಮನೆಯಿಂದ ಮಾಡಲು ಅವಕಾಶ ನೀಡಿದ್ದರ ಮಧ್ಯೆ ಇನ್ಫೋಸಿಸ್‌ನ ಈ ಸುದ್ದಿ ಹೊರ ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮಾಸಿಕ 10 ದಿನದ ಕೆಲಸ ಎಲ್ಲರಿಗೂ ಅನ್ವಯಿಸಲ್ಲ
ಇನ್ಫೋಸಿಸ್ ಕಂಪನಿಯವರು ಈ ವಿಚಾರ ಕುರಿತು ಪ್ರತಿಕ್ರಿಯಿಸಲು ಮನಸು ಮಾಡಿಲ್ಲ ಎನ್ನಲಾಗಿದೆ. ಇದೇ ನವೆಂಬರ್ 20 ರಿಂದ ಜಾರಿಗೆ ಬರಲಿರುವ ಬದಲಾವಣೆಯ ಬಗ್ಗೆ ಇ-ಮೇಲ್ ಮೂಲಕ ಕೆಲವು ಸಿಬ್ಬಂದಿಗೆ ಸಂದೇಶ ರವಾನಿಸಲಾಗಿದೆ. ಆದರೆ ಈ ತಿಂಗಳಲ್ಲಿ ಹತ್ತು ದಿನ ಕಚೇರಿಯಿಂದ ಕೆಲಸ ಮಾಡಬೇಕು ಎಂದಬ ಕ್ರಮವು ಇನ್ಫೋಸಿಸ್‌ನ ಎಲ್ಲ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ ಅಂತಲೂ ವರದಿ ಆಗಿದೆ.
ನಮ್ಮ ಕಂಪನಿಯು ಸದಾ ಉದ್ಯೋಗಿಗಳೊಂದಿಗೆ ಹೊಂದಿಕೊಳ್ಳಲು ಬಯಸುತ್ತದೆ. ಪ್ರತಿ ತ್ರೈಮಾಸಿಕದಲ್ಲಿ, ಪ್ರತಿ ವಾರ ನಾವು ಹೆಚ್ಚು ಹೆಚ್ಚು ಉದ್ಯೋಗಿಗಳನ್ನು ಕ್ಯಾಂಪಸ್‌ಗೆ ಹಿಂತಿರುಗಿಸುತ್ತಿದ್ದೇವೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಅಕ್ಟೋಬರ್ 12ರಂದು ಕಾನ್ಫರೆನ್ಸ್ ಕರೆಯಲ್ಲಿ ಇನ್ಫೋಸಿಸ್ CEO ಸಲಿಲ್ ಪರೇಖ್ ತಿಳಿಸಿದ್ದರು.

ಚರ್ಚೆಯಾದ 70 ಗಂಟೆ ಕೆಲಸದ ಹೇಳಿಕೆ
ಇತ್ತೀಚೆಗೆ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು ಯುವ ಭಾರತೀಯರನ್ನು ದೇಶದ ಅಭಿವೃದ್ಧಿಗಾಗಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಒತ್ತಾಯಿದ್ದರು. ಅವರ ಈ ಹೇಳಿಕೆ ಕೆಲವು ವಿವಾದಕ್ಕೂ ಕಾರಣವಾಗಿತ್ತು.
ಐಟಿ ಕಂಪಿಗಳಲ್ಲಿ ಮತ್ತೊಂದು ದೊಡ್ಡ ಕಂಪನಿಯಾಗಿರುವ ಹಾಗೂ ಪ್ರತಿ ಸ್ಪರ್ಧಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಈಗಾಗಲೇ ವಾರದಲ್ಲಿ ಐದು ದಿನಗಳವರೆಗೆ ಕಚೇರಿಯಿಂದಲೇ ಕೆಲಸ ಮಾಡುವಂತೆ ತನ್ನ ಉದ್ಯೋಗಿಗಳಿಗೆ ತಿಳಿಸಿದೆ.












Click it and Unblock the Notifications