Narayana Murthy: ಪತ್ನಿ, ಮಗಳು, ಮೊಮ್ಮಕ್ಕಳೊಂದಿಗೆ ಬೀದಿಗೆ ಬಂದ ನಾರಾಯಣಮೂರ್ತಿ-ಕಾರಣ ಏನು?
ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಪತ್ನಿ ಸುಧಾ ಮೂರ್ತಿ, ಮಗಳು ಅಕ್ಷತಾ ಮೂರ್ತಿ ಮತ್ತು ಮೊಮ್ಮಕ್ಕಳ ಜೊತೆ ಯಾವುದೇ ಭದ್ರತೆಯಿಲ್ಲದೆ ಬೆಂಗಳೂರಿನ ರಸ್ತೆ ಬದಿಯಲ್ಲಿ ಅಡ್ಡಾಡುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಇವರ ಈ ಸರಳತೆಯ ಬಗ್ಗೆ ಯಾವ ರೀತಿ ಪ್ರತಿಕ್ರಿಯೆಗಳು ಹೇಗೆ ವ್ಯಕ್ತವಾಗಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು, ತಮ್ಮ ಪತ್ನಿ, ಪತ್ನಿ ಸುಧಾ ಮೂರ್ತಿ ಮತ್ತು ಮಗಳು, ಬ್ರಿಟನ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರೊಂದಿಗೆ ಬೆಂಗಳೂರಿನ ರಸ್ತೆ ಬದಿಯ ಸ್ಟಾಲ್‌ನಲ್ಲಿ ಪುಸ್ತಕಗಳನ್ನು ಪರಿಶೀಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷಯ ಮೂರ್ತಿ ಅವರ ಪುತ್ರಿಯರಾದ ಅನುಷ್ಕಾ ಮತ್ತು ಕೃಷ್ಣ ಅವರ ಮೊಮ್ಮಗಳು ಸಹ ಈ ವೀಡಿಯೊದಲ್ಲಿ ಕಂಡುಬಂದಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಎಂಆರ್ ಗುರುಪ್ರಸಾದ್ ಎನ್ನುವರು ತಮ್ಮ ಟ್ವೀಟ್ ಖಾರೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ತಮ್ಮ ಅನಿಸಿಕೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. "ಯುಕೆ ಪ್ರಧಾನು ರಿಷಿ ಸುನಕ್ ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನ ರಾಘವೇಂದ್ರ ಮಠದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಯಾವುದೇ ಭದ್ರತೆಯಿಲ್ಲದೆ ಬೆಂಗಳೂರಿನಲ್ಲಿ ಸುತ್ತಾಡಿರುವ ಈ ದೃಶ್ಯವೇ ಅವರ ಸರಳತೆಗೆ ಸಾಕ್ಷಿ," ಎಂದು ಬರೆದುಕೊಂಡಿದ್ದಾರೆ.
UK PM Rishi Sunak's wife and kids spotted at Raghavendra Mutt in Bengaluru, accompanied by Infosys Founder Narayanamurthy. Their simplicity shines through, with no security in sight. pic.twitter.com/WxIAvHh40w
— M.R. Guru Prasad (@GuruPra18160849) February 26, 2024
ಇನ್ನು ಇತ್ತೀಚೆಗಷ್ಟೇ ವಿಮಾನದಲ್ಲಿ ನಾರಾಯಣ ಮೂರ್ತಿಯವರು ಒಬ್ಬ ಸಾಮಾನ್ಯ ವ್ಯಕ್ತಿಯ ಜೊತೆ ಕುಳಿತು ಪ್ರಯಾಣ ಮಾಡಿದ್ದು, ಈ ವಿಡಿಯೋವೂ ಕೂಡ ಭಾರೀ ವೈರಲ್ ಆಗಿತ್ತು. ಅಲ್ಲದೆ ಅವರ ಪಕ್ಕದಲ್ಲಿ ಕುಳಿತಿದ್ದ ಉದ್ಯಮಿಯು ನಾರಾಯಣ ಮೂರ್ತಿಯವರಿಂದ ಕೆಲವರು ಸಲಹೆಗಳನ್ನು ಕೂಡ ಪಡೆದಿದ್ದರು ಎಂದು ವರದಿಯಾಗಿತ್ತು.












Click it and Unblock the Notifications