ಇಲ್ಲಿ ಕುಡುಕರು ಮೊಬೈಲ್ ಟವರ್ ಏರಿ ರಾದ್ಧಾಂತ ಮಾಡಿದರೆ, ನ್ಯೂಯಾರ್ಕಲ್ಲಿ ಆ್ಯಂಟೆನಾ ಏರಿದ ಪ್ರೇಮಿಗಳೀಗ ಪೊಲೀಸರ ಅತಿಥಿ!

ನ್ಯೂಯಾರ್ಕ್: ಕರ್ನಾಟಕದಲ್ಲಿ ಕುಡುಕರು, ಪ್ರೀತಿಸಿದ ಪ್ರೇಮಿ ಸಿಗಲಿಲ್ಲವೆಂದು ಮೊಬೈಲ್ ಟವರ್, ಎತ್ತರದ ಬ್ಯುಲ್ಡಿಂಗ್ ಹತ್ತಿ ಹುಚ್ಚಾಟ ಮಾಡುವುದು ನೋಡಿದ್ದೇವೆ. ಹರಸಾಹಸ ಮಾಡಿ ಅಗ್ನಿ ಶಾಮಕ ಸಿಬ್ಬಂದಿಯೋ ಅಥವಾ ಸ್ಥಳೀಯರು ಅವರನ್ನು ಇಳಿಸಿ, ನಿರಾಳವಾಗುತ್ತಾರೆ. ಇಂಥ ಘಟನೆ ನಡೆಯೋದು ಭಾರತದಲ್ಲಿ ಮಾತ್ರ ಅಂದು ಕೊಂಡರೆ ತಪ್ಪು. ಅಮೆರಿಕದಲ್ಲಿಯೂ ಅಂಥದ್ದೇ ಘಟನೆಯೊಂದು ವರದಿಯಾಗಿದ್ದು, ಲವ್ ಪ್ರಪೋಸ್‌ಗಾಗಿ ಅಪಾಯಕಾರಿ ಆ್ಯಂಟೆನಾ ಹತ್ತಿದ ಜೋಡಿಯೊಂದು ಇದೀಗ ಪೊಲೀಸರ ಅತಿಥಿಯಾಗಿದೆ.

ನ್ಯೂಯಾರ್ಕ್‌ನ ಪ್ರಸಿದ್ಧ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಆ್ಯಂಟೆನಾ ತುತ್ತತುದಿಗೇರಿದ ಇಬ್ಬರು 'ಪ್ರೀತಿಯ ಶಕ್ತಿ' (power of love) ಎಂಬ ಸಂದೇಶವಿರುವ ಬ್ಯಾನರ್ ಹಾಕಿದ್ದಾರೆ. ಮಂಗಳವಾರ ಈ ಘಟನೆ ನಡೆದಿದ್ದು, 'ಅಧಿಕಾರದ ವ್ಯಾಮೋಹವನ್ನು ಪ್ರೀತಿಯ ಶಕ್ತಿ ಗೆದ್ದಾಗ, ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ.' ಎಂಬ ಸಂದೇಶವುಳ್ಳ ಬ್ಯಾನರ್ ಹಾಕಿ, ಕೆಳಗಿಳಿಯುತ್ತಾ, ಪರಸ್ಪರ ಅಪ್ಪಿಕೊಂಡು, ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಯಾವುದೇ ರಕ್ಷಣೆ ಇಲ್ಲದೇ ಆ್ಯಂಟೇನಾ ತುದಿಗೇರಿದ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Climber Couple Arrested

ಕಪ್ಪು ಬಟ್ಟೆ ಮತ್ತು ಮಾಸ್ಕ್ ಧರಿಸಿದ್ದ ಈ ಇಬ್ಬರ ಬಳಿ ಯಾವುದೇ ಸುರಕ್ಷತಾ ಸಲಕರಣಗಳು ಇರಲಿಲ್ಲ. ಸುದ್ದಿ ವಾಹಿನಿಯ ಡ್ರೋನ್ ಕ್ಯಾಮರಾದಲ್ಲಿ ಈ ಇಬ್ಬರ ಹುಚ್ಚಾಟದ ದೃಶ್ಯ ಸೆರೆಯಾಗಿದೆ. ಈ ಗಗನಚುಂಬಿ ಕಟ್ಟಡದ ಆ್ಯಂಟೆನಾದ ಕಿರಿದಾದ ಅಂಚಿನಲ್ಲಿ ಬ್ಯಾಲೆನ್ಸ್ ಮಾಡುತ್ತಾ, ಪರಸ್ಪರ ಚುಂಬಿಸಿಕೊಂಡಿದ್ದಾರೆ. ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಈ ಕಟ್ಟಡದ ಆ್ಯಂಟೆನಾವು ಸುಮಾರು 1,454 ಅಡಿ (443 ಮೀಟರ್) ಎತ್ತರದಲ್ಲಿದೆ.

ಗಗನ ಚುಂಬಿ ಕಟ್ಟಡ ಹತ್ತಿ, ಭಾವಟ ಪ್ರದರ್ಶಿಸಿ ಲವ್ ಪ್ರಪೋಸ್ ಮಾಡಿಕೊಂಡ ಈ ಜೋಡಿ ಅಪಾಯಕಾರಿ ಜಾಲರಿಯಂಥ ರಚನೆ ಮೇಲೆ ನಿಂತಿತ್ತು. ಅಪ್ಪಿ ತಪ್ಪಿ ಜಾರಿ ಬಿದ್ದಿದ್ದರೆ ದೇಹ ಪೂರ್ತಿ ಚೂರು ಚೂರು ಆಗುತ್ತಿತ್ತು. ಅಷ್ಟೇ ಅಲ್ಲ ನಂತರ ಸ್ವಲ್ಪ ಕೆಳಗಿಳಿದು ಅಲ್ಲಿಯೇ ಮಂಡಿಯೂರಿ ಕುಳಿತು, ಪರಸ್ಪರ ಚುಂಬಿಸಿ, ಈ ಜೋಡಿ ಅಪ್ಪಿಕೊಂಡಿದೆ. ಉಂಗುರವನ್ನೂ ಬದಲಾಯಿಸಿಕೊಂಡು ಸೆಲ್ಫೀ ತೆಗೆದುಕೊಂಡಿದೆ.

"ಯುರೋಪ್‌ಗೆ ಮರುಕ, ಭಾರತಕ್ಕೆ ಅವಮಾನವೇ?"; ಪಾಶ್ಚಿಮಾತ್ಯ ಮಾಧ್ಯಮಗಳಿಗೆ ಪೋಲೆಂಡ್ ಮಹಿಳೆ ತರಾಟೆ

ಈ ಐತಿಹಾಸಿಕ 'ಆರ್ಟ್ ಡೆಕೊ' ಆಫೀಸ್ ಟವರ್‌ ಕೆಳಗೆ ಓಡಾಡುತ್ತಿದ್ದವರು ಈ ಘಟನೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಗ್ಲ್ಯಾಸ್ಗೋ (ಸ್ಕಾಟ್‌ಲ್ಯಾಂಡ್) ನಿಂದ ಬಂದಿದ್ದ ಪ್ರವಾಸಿ ಜೊನಾಥನ್ ರೋಮನ್ ಈ ಘಟನೆ ಬಗ್ಗೆ ಮಾತನಾಡಿ, 'ಇದು ಹುಚ್ಚುತನದ ಪರಮಾವಧಿ. ಯಾವುದೋ ಸಿನಿಮಾ ನೋಡಿದಂತೆ ಅನಿಸಿತು,' ಎಂದಿದ್ದಾರೆ. ಅವರು ಮತ್ತು ಅವರ 15 ವರ್ಷದ ಮಗ ಕಟ್ಟಡದ ವೀಕ್ಷಣಾ ವೇದಿಕೆಗೆ (Observation platform) ಹೋಗಲು ಟಿಕೆಟ್ ಪಡೆದಿದ್ದರು. ಆದರೆ ಆ್ಯಂಟನಾ ಹತ್ತಿದ ಜೋಡಿ ಸಲುವಾಗಿ ಕಟ್ಟಡದ ರಸ್ತೆಯನ್ನೇ ಮುಚ್ಚಲಾಗಿತ್ತು. ಆದಾಗ್ಯೂ, ರೋಮನ್ 'ಈ ದೃಶ್ಯ ವೀಕ್ಷಣಾ ವೇದಿಕೆಗೆ ಎರಡನೇ ಬಾರಿ ಹೋಗುವುದಕ್ಕಿಂತ ಹೆಚ್ಚು ರೋಮಾಂಚನಕಾರಿಯಾಗಿತ್ತು,' ಎಂದಿದ್ದಾರೆ.

ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಕಟ್ಟುನಿಟ್ಟಿನ ಭದ್ರತೆ ಇರುವ ಹೈ ಪ್ರೊಫೈಲ್ ಕಟ್ಟಡದ ಆ್ಯಂಟೆನಾವನ್ನು ಈ ಜೋಡಿ ಹೇಗೆ ತಲುಪಿತು ಎಂಬುವುದೇ ಊಹೆಗೆ ನಿಲುಕದ್ದು. ಇಲ್ಲಿಗೆ ಬರುವ ಪ್ರವಾಸಿಗರನ್ನು ಸಂಪೂರ್ಣ ತಪಾಸಣೆ ಮಾಡಲಾಗುತ್ತದೆ. ದೊಡ್ಡ ಪ್ಯಾಕೇಜ್‌ಗಳು, ಕ್ರೀಡಾ ಪರಿಕರ, ವೇಷಭೂಷಣಗಳು ಅಥವಾ ಮಾಸ್ಕ್‌ಗಳಂತಹ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಕಟ್ಟಡದ ಕಚೇರಿಯೊಂದರಲ್ಲಿ ಕೆಲಸ ಮಾಡುವ ಜೆಸ್ಸಿಕಾ ಕಪ್ಲಾನ್, ಇಷ್ಟೆಲ್ಲಾ ಭದ್ರತೆ ಇದ್ದರೂ ಆ ಟವರ್ ಹೇಗೆ ಏರಿದ್ದಾರೆಂಬುವುದು ಊಹಿಸುವುದೂ ಅಸಾಧ್ಯ. ಪೊಲೀಸರು ಮಧ್ಯಾಹ್ನ 1 ಗಂಟೆಯ ನಂತರ ಇಬ್ಬರನ್ನೂ ವಶಕ್ಕೆ ಪಡೆದರು. ಸದ್ಯಕ್ಕೆ ಆರೋಪಿಗಳ ಹೆಸರನ್ನು ಬಹಿರಂಗಗೊಳಿಸಿಲ್ಲ. ಪೊಲೀಸರ ಪ್ರಕಾರ, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ವಯಸ್ಸು, ಹಿಂದಿನ ಸಂಬಳ ಮುಖ್ಯವಲ್ಲ ಎಂದ ಸಂಸ್ಥಾಪಕ: 'ನಿಮ್ಮ HR ಮೊದಲು ರಿಪ್ಲೈ ಮಾಡಲಿ' ಎಂದು ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
ವಯಸ್ಸು, ಹಿಂದಿನ ಸಂಬಳ ಮುಖ್ಯವಲ್ಲ ಎಂದ ಸಂಸ್ಥಾಪಕ: 'ನಿಮ್ಮ HR ಮೊದಲು ರಿಪ್ಲೈ ಮಾಡಲಿ' ಎಂದು ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

102 ಮಹಡಿಯ ಈ ಕಟ್ಟಡದ ಸಾರ್ವಜನಿಕ ವಲಯಕ್ಕಿಂತ ಸಖತ್ ಎತ್ತರದಲ್ಲಿರುವ ಆ್ಯಂಟೆನಾವನ್ನು ಈ ಜೋಡಿ ಹೇಗೆ ತಲುಪಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡದ ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ. ಇದಕ್ಕೆ ಮುನ್ನವೂ ಕೆಲವು ಸಾಹಸಿಗಳು ಅನುಮತಿಯಿಲ್ಲದೆ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಆ್ಯಂಟೆನಾ ಮತ್ತು ಇತರ ಭಾಗಗಳನ್ನು ಏರಿದ್ದರು. 2023ರಲ್ಲಿ ನಟ ಮತ್ತು ಸಂಗೀತಗಾರ ಜೇರೆಡ್ ಲೆಟೊ ಅವರಿಗೆ ಮಾತ್ರ ಪ್ರವಾಸದ ಪ್ರಚಾರಕ್ಕಾಗಿ 86ನೇ ಮಹಡಿಯಿಂದ ಆ್ಯೆಂಟೆನಾ ಬೇಸ್‌ ತನಕ ಅಧಿಕೃತವಾಗಿ ಏರಲು ಅನುಮತಿ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+