Video: ₹12,000 ಕೋಟಿ ವೆಚ್ಚದ ಎಕ್ಸ್‌ಪ್ರೆಸ್‌ವೇನಲ್ಲಿ ಬೃಹತ್ ಗುಂಡಿಗಳು: ಮೋದಿ ಉದ್ಘಾಟಿಸಿದ 2 ತಿಂಗಳಲ್ಲೇ ರಿಪೇರಿ ಬೇಕಾ?
ನವದೆಹಲಿ: ದೇಶದ ಬಹುನಿರೀಕ್ಷೆಯ ಯೋಜನೆಯೊಂದರಲ್ಲಿ ಕಳಪೆ ಕಾಮಗಾರಿ ಪತ್ತೆಯಾಗಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದ ಎಕ್ಸ್‌ಪ್ರೆಸ್‌ವೇಯನ್ನು ಎರಡು ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು. ಇದೀಗ ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೃಹತ್ ತಗ್ಗುಗುಂಡಿಗಳು ಬಿದ್ದಿವೆ. ಸದ್ಯ ಈ ವಿಚಾರ ಕೇಂದ್ರ ಸರ್ಕಾರದ ಆಡಳಿತ, ಗುಣಮಟ್ಟದ ಕಾಮಗಾರಿಗಳ ಮೇಲೆ ಅನುಮಾನ ಮೂಡುವಂತೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ಪ್ರೆಸ್‌ವೇ ರಸ್ತೆಗುಂಡಿ ವಿಡಿಯೋ ವೈರಲ್ ಆಗುತ್ತಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವತಿಯಿಂದ ನಡೆದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಡೆಹ್ರಾಡೋನ್‌ವರೆಗೆ ಒಟ್ಟು 213 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಕ್ಸ್‌ಪ್ರೆಸ್ ವೇ ನಿರ್ಮಿಸಲಾಗಿದೆ. ಕಳೆದ ಏಪ್ರಿಲ್ 14ರಂದು ಪ್ರಧಾನಿ ಮೋದಿಯವರು ಈ ಹೆದ್ದಾರಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದರು. ಇನ್ನೇನು ಸಂಚಾರ ಸುಗಮವಾಯಿತು ಎಂದುಕೊಂಡಿದ್ದ ವಾಹನ ಸವಾರರಿಗೆ ಈ ರಸ್ತೆಗುಂಡಿಗಳು ದಿಗ್ಭ್ರಮೆಗೊಳಿಸಿವೆ.

ಭೂಮಿ ಕುಸಿತವಾದಾಗ ಕಂಡು ಬರುವ ದೃಶ್ಯದಂತೆ ಈ ಎಕ್ಸ್‌ಪ್ರೆಸ್‌ವೇನಲ್ಲಿ ಎರಡು ಬೃಹತ್ ಗುಂಡಿಗಳು ಬಿದ್ದಿವೆ. ಒಂದು ವೇಳೆ ಇದನ್ನು ಗಮನಿಸದೇ ಸ್ಪೀಡಾಗಿ ಬರುವ ವಾಹನಗಳು ಈ ಗುಂಡಿಗೆ ಇಳಿದರೆ ದೊಡ್ಡ ಮಟ್ಟದ ಅಪಾಘತ ಸಂಭವಿಸುವ ಸಾಧ್ಯತೆ ಇರುತ್ತದೆ. ಅಷ್ಟರ ಮಟ್ಟಿಗೆ ಹೊಸ ರಸ್ತೆಯಲ್ಲಿ ರಸ್ತೆಗುಂಡಿ ನಿರ್ಮಾಣವಾಗಿದೆ. ಇದನ್ನು ಕಂಡು ಸಾರ್ವಜನಿಕರು ದೂರು ನೀಡಿದ್ದಾರೆ. ಕೆಲವರು ವಿಡಿಯೋ ಮಾಡಿ, ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿ ವಿಶ್ವ ದರ್ಜೆಯ ರಸ್ತೆ ಮೂಲಸೌರ್ಯ ಯೋಜನೆ ಎಂದು ಕೊಂಡಾಡಿದ್ದರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
12000 ಕೋಟಿ ವೆಚ್ಚದ ಕಾಮಗಾರಿ ಕಳಪೆ! ಭ್ರಷ್ಟಾಚಾರ?
ಎಕ್ಸ್‌ಪ್ರೆಸ್ ಎಂದರೆ ಅಲ್ಲಿ ಗಂಟೆಗೆ ಕನಿಷ್ಠ 100 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಇಷ್ಟು ವೇಗದಲ್ಲಿ ಬರುವ ವಾಹನಗಳು ಈ ರಸ್ತೆಗುಂಡಿಗೆ ಇಳಿಸಿದರೆ ಸರಣಿ ಅಪಘಾತವಾಗುವ, ಸಾಕಷ್ಟು ಜನರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ. ಗುಣಮಟ್ಟದ ಕಾಮಗಾರಿ ನಡೆಸಬೇಕಾದ ಅಧಿಕಾರಿಗಳು, ಗುತ್ತಿಗೆದಾರರು ಬರೋಬ್ಬರಿ 12000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಯೋಜನೆಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಕಳಪೆ ಕಾಮಗಾರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇವರಿಂದಾಗಿ ಅಮಾಯಕ ಜನರ ಜೀವಗಳು ಬಲಿಯಾಗಬೇಕಾಗುತ್ತದೆ. ಸರ್ಕಾರ ಇಂತಹ ಯೋಜನೆಗಳ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಉದ್ಘಾಟನೆಯಾದ ಹೆದ್ದಾರಿಗೆ 90 ದಿನದಲ್ಲಿ ರಿಪೇರಿ ಬೇಕಾ?
ವಿಷಯ ತಿಳಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಎಕ್ಸ್‌ಪ್ರೆಸ್‌ನಲ್ಲಿ ನಿಂತು ವಾಹನಗಳಿಗೆ ಎಚ್ಚರಿಕೆಯಿಂದ ಸಾಗುವಂತೆ ಸೂಚನೆ, ಸಿಗ್ನಲ್ ನೀಡುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಮಳೆಗಾಲ ಮೊದಲೇ ಈ ರೀತಿ ಆಗಿದ್ದಕ್ಕೆ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ. NHAIನ ದೋಷ ಹೊಣೆಗಾರಿಕೆ ಷರತ್ತು ಎಲ್ಲಿದೆ? ಯೋಜನೆಯ ಪ್ರಮಾಣ ಪತ್ರಕ್ಕೆ ಯಾರು ಸಹಿ ಹಾಕಿದ್ದಾರೆ? ಇದೀಗ ಓಪನ್ ಆಗಿರುವ ಹೆದ್ದಾರಿ ದುರಸ್ತಿಗೆ ಹಣ ಯಾರು ಪಾವತಿಸುತ್ತಿದ್ದಾರೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. 12,000 ಕೋಟಿ ವೆಚ್ಚದ ರಸ್ತೆಗಳಿಗೆ 90 ದಿನಗಳಲ್ಲಿ ರಿಪೇರಿ ಅಗತ್ಯವಿದೆ ಎಂದರೆ ಕಾಮಗಾರಿ ಗುಣಮಟ್ಟವನ್ನು ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ಜನರು ಜನಪ್ರತಿನಿಧಿಗಳನ್ನು, ಹೆದ್ದಾರಿ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Kar liya “Viksit Bharat” ka pehla stress test.
— Sincere Dibya (@TheSincereDude) July 2, 2026
₹12,000 crore. 213 km. Inaugurated by PM Modi himself on 14th April with full pomp.
Not even 3 months in, and the “world-class” Delhi-Dehradun Expressway already has cracked slabs, leaking joints and potholes eating the road, even… pic.twitter.com/DyJgMzJTk0













Click it and Unblock the Notifications