ನಾರಾಯಣ ಮೂರ್ತಿ ಮಾತು ಕೇಳಿ ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಏನಾಗುತ್ತೆ ಗೊತ್ತಾ? ಸಂಶೋಧಕರು ಹೊರಹಾಕಿದ ಭಯಾನಕ ಮಾಹಿತಿ ಏನು?
ದೇಶದ ಯುವಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ, ಹಾಗೇ ಹೃದಯ ಸಂಬಂಧಿ ರೋಗ ಮತ್ತು ಬೇರೆ ಬೇರೆ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದರೆ ಈ ರೀತಿ ಆಗಲು ಕಾರಣ ಏನು? ಎಂಬ ಹುಡುಕಾಟದಲ್ಲಿ ಮೊದಲಿಗೆ ಬರುವ ಮಾತೆಂದರೆ ಅದು ಕೆಲಸದ ಒತ್ತಡ. ಹೌದು, ಪರಿಸ್ಥಿತಿ ಹೀಗಿದ್ದಾಗ ನಾರಾಯಣ ಮೂರ್ತಿ ಅವರ ಮಾತು ಕೇಳಿ ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಏನಾಗುತ್ತೆ ಗೊತ್ತಾ?
ದಿನಕ್ಕೆ 24 ಗಂಟೆಯಾದರೆ ವಾರಕ್ಕೆ ಎಷ್ಟು ಗಂಟೆ ಹೇಳಿ? ಅದು 168 ಗಂಟೆ ಆಗಲಿದೆ. ಆದ್ರೆ ಹೀಗೆ 168 ಗಂಟೆ ಸಮಯದಲ್ಲಿ ಐಟಿ ದಿಗ್ಗಜ ನಾರಾಯಣ ಮೂರ್ತಿ ಅವರ ಸಲಹೆಯಂತೆ, ಯುವಕರು 70 ಗಂಟೆ ಕೆಲಸ ಮಾಡಿದ್ರೆ ಅವರಿಗೆ ಉಳಿಯುವುದು 98 ಗಂಟೆ ಕಾಲಾವಕಾಶ. ಇನ್ನು ಈ ಸಮಯದಲ್ಲಿ ದಿನಕ್ಕೆ 8 ಗಂಟೆಯಂತೆ ನಿದ್ದೆಯನ್ನು ಮೈನಸ್ ಮಾಡಿದರೆ ಬಾಕಿ ಉಳಿಯೋದು ಬರೀ 42 ಗಂಟೆ ಸಮಯ. ಹೀಗಿದ್ದಾಗ ಕೇವಲ 42 ಸಮಯದಲ್ಲಿ ಯುವಕ, ಯುವತಿಯರು ಕಚೇರಿಗೆ ಸಂಚಾರ ಮಾಡುವುದು ಹೇಗೆ? ಊಟ ಮಾಡುವುದು ಹೇಗೆ? ಈ ಒತ್ತಡದ ನಡುವೆ ಕುಟುಂಬಕ್ಕೆ ಸಮಯ ಕೊಡುವುದು ಹೇಗೆ? ಎಂಬ ಪ್ರಶ್ನೆಗಳು ಕಾಡುವಾಗ ಸಂಶೋಧಕರ ಮಾತು ಅಕ್ಷರಶಃ ಭಯ ಹುಟ್ಟಿಸುತ್ತಿದೆ.

70 ಗಂಟೆ ಕೆಲಸ ಮಾಡಿದರೆ ಏನಾಗುತ್ತೆ?
ಹೌದು, ನಾವು ಕೆಲಸ ಮಾಡುವುದು ಎಷ್ಟು ಮುಖ್ಯವೋ. ಹಾಗೇ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಆರೋಗ್ಯ ಇಲ್ಲದ ಜೀವನ, ಆರೋಗ್ಯವೇ ಇಲ್ಲದ ಹಣ ವ್ಯರ್ಥ ವ್ಯರ್ಥ. ಅಕಸ್ಮಾತ್ ಯುವ ಜನರು ವಾರಕ್ಕೆ 70 ಗಂಟೆ ಕೆಲಸ ಮಾಡುತ್ತಾರೆ ಅಂತಾ ಇಟ್ಟುಕೊಳ್ಳಿ, ಆಗ ಅವರು ಒಂದೇ ಕಡೆ ಕೂತಿರಬೇಕು. ಹೀಗೆ, ಗಂಟೆಗಳ ಸಮಯ ಒಂದೇ ಕಡೆ ಕೂತು ಐಟಿ ನೌಕರರು ಕೆಲಸ ಮಾಡಿದರೆ ಏನಾಗುತ್ತೆ ಗೊತ್ತಾ? ದೇಹದಲ್ಲಿನ ಬದಲಾವಣೆ ಏನು? ಒಂದೆ ಕಡೆ ಕೂರುವ ಜನರಿಗೆ ಎದುರಾಗುವ ಭಯಾನಕ ಕಾಯಿಲೆಗಳು ಯಾವುವು ಗೊತ್ತಾ?
ಸೊಂಟ ಢಮಾರ್.. ಸಕ್ಕರೆ ಕಾಯಿಲೆ ಬಂಪರ್!
ಅಂದಹಾಗೆ ಮನುಷ್ಯ ಎಷ್ಟು ಆಹಾರ ಸೇವನೆ ಮಾಡುತ್ತಾನೋ, ಅಷ್ಟೇ ಅದನ್ನು ಕರಗಿಸಿ ಶಕ್ತಿಯಾಗಿ ಪರಿವರ್ತನೆ ಮಾಡಬೇಕು. ಇಲ್ಲವಾದರೆ ತಾನು ತಿಂದ ಆಹಾರ ಕೊಬ್ಬಾಗಿ ಒಂದೆ ಕಡೆ ಶೇಖರಣೆಯಾಗುತ್ತದೆ. ಇದು ದೇಹವ ನಿಶಕ್ತಗೊಳಿಸಿ & ಕಾಯಿಲೆಗಳ ಕಾರ್ಖಾನೆಯಾಗಿ ಮಾಡುತ್ತದೆ. ಪರಿಸ್ಥಿತಿ ಹೀಗಿದ್ದಾಗ ತಜ್ಞರು ಮತ್ತು ವೈದ್ಯರು ಹೇಳುವಂತೆ ನೌಕರರು ತಾವು ಕೂತಿರುವ ಜಾಗದಿಂದ 30 ನಿಮಿಷಯಕ್ಕೆ ಒಮ್ಮೆ ಎದ್ದು ಓಡಾಡಬೇಕು. ಹೀಗೆ ಮಾಡದೇ ಇದ್ದರೆ, ರಕ್ತದೊತ್ತಡ ಸೇರಿದಂತೆ ಸಕ್ಕರೆ ಕಾಯಿಲೆ, ಸೊಂಟದ ಸುತ್ತ ಕೊಬ್ಬು ಶೇಖರಣೆಯು ಸೇರಿ ಹೃದಯ ಹಾಗೂ ಸೊಂಟಕ್ಕೆ ಒತ್ತಡ ಹೆಚ್ಚಾಗುತ್ತದೆ ಅಂತೆ.

70 ಗಂಟೆ ಕೆಲಸದ ಎಫೆಕ್ಟ್ ಏನು?
ವೈದ್ಯರು ಹೇಳ್ತಾರೆ ಕೂತ ಕಡೆಯಿಂದ ಪ್ರತಿ 30 ನಿಮಿಷಯಕ್ಕೆ ಒಮ್ಮೆ ಎದ್ದು ಓಡಾಡಬೇಕು ಅಂತ. ಆದರೆ ಐಟಿ ನೌಕರರು ಅಥವಾ ಯುವ ಸಮುದಾಯ ಬೇರೆ ಯಾವುದೇ ಉದ್ಯೋಗ ಮಾಡುವಾಗ ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಎದ್ದು ಓಡಾಡೋದಕ್ಕೆ ಆಗುತ್ತಾ? ಹೀಗೆ ಎದ್ದು ಓಡಾಡಲು 30 ನಿಮಿಷಯಕ್ಕೆ ಒಮ್ಮೆ ಅವಕಾಶ ಸಿಗುತ್ತಾ? ಎಂಬ ಡೌಟ್ ಕಾಡ್ತಿದೆ. ಇದು ಬಿಡಿ ಕೊರೊನಾ ಬಂದ ಬಳಿಕ ಅದೆಷ್ಟು ಯುವಕರು ಹೃದಯಾಘಾತಕ್ಕೆ ಬಲಿಯಾಗಿ ಜೀವ ಬಿಟ್ಟಿದ್ದಾರೆ ಹೇಳಿ? ಪರಿಸ್ಥಿತಿ ಹೀಗಿದ್ದಾಗ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ & ಜಗತ್ತಿನ ಐಟಿ ದಿಗ್ಗಜರಲ್ಲಿ ಒಬ್ಬರಾಗಿರುವ ನಾರಾಯಣ ಮೂರ್ತಿ ಅವರ ಸಲಹೆ ಕುರಿತಾಗಿ ಭಾರಿ ಚರ್ಚೆ ಶುರುವಾಗಿದೆ.
ಐಟಿ ದಿಗ್ಗಜ ಹೇಳಿದ್ದು ಏನು?
ನಾರಾಯಣ ಮೂರ್ತಿ ಅವರು ಹೇಳಿದ್ದು ಏನು ಅಂದ್ರೆ, ಭಾರತದ ಒಟ್ಟಾರೆ ಉತ್ಪಾದಕತೆಯ ಹೆಚ್ಚಿಸಲು ಯುವ ಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರಬೇಕು ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹೇಳಿದ್ದರು. ಈ ಕುರಿತು ಸಾಕಷ್ಟು ಚರ್ಚೆ ಶುರುವಾಗಿತ್ತು. ಅಲ್ಲದೆ ಈಗಿನ ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಒತ್ತಡ ಹಾಗೂ ಇದರಿಂದ ಉಂಟಾಗುತ್ತಿರುವ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚೆ ಜೋರಾಗಿತ್ತು. ಈಗ ಕೂಡ ಬಿಸಿಬಿಸಿ ಚರ್ಚೆ ಮುಂದುವರಿದಿದೆ.












Click it and Unblock the Notifications