Infosys recruitment: ಮಾರ್ಚ್ 9ಕ್ಕೆ ಬೆಂಗಳೂರಿನಲ್ಲಿ ವಾಕ್-ಇನ್ ಇಂಟರ್‌ವ್ಯೂವ್, ವಿವರ
ಬೆಂಗಳೂರು, ಫೆಬ್ರವರಿ 29: ಅತ್ಯುತ್ತಮ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವ ಗುರಿ ಹೊಂದಿರುವ ಬೃಹತ್ ಐಟಿ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ (Infosys) ಕಂಪನಿಯು ಮುಂದಿನ 9 ರಂದು ಬೆಂಗಳೂರಿನಲ್ಲಿ ವಾಕ್-ಇನ್ ಇಂಟರ್‌ವ್ಯೂವ್ ಆಯೋಜಿಸಿದೆ.
ಇನ್ಫೋಸಿಸ್ ಲಿಮಿಟೆಡ್ ಮಾರ್ಚ್ 9 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ವಾಕ್-ಇನ್ ನೇಮಕಾತಿ ಕಾರ್ಯಕ್ರಮ ನಡೆಸಲಿದೆ. ಫೆಬ್ರವರಿ 3 ರಂದು ಚೆನ್ನೈನಲ್ಲಿ ಹಾಗೂ ಹೈದರಾಬಾದ್‌ನಲ್ಲಿ ಜನವರಿ 6 ರಂದು ಇನ್ಫೋಸಿಸ್‌ನ ಮೂರನೇ ನೇಮಕಾತಿ ಕಾರ್ಯ ನಡೆದಿದೆ. ಇದೀಗ ಮೂರನೇ ಕಾರ್ಯ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಆಸಕ್ತರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಇನ್ಫೋಸಿಸ್‌ನಲ್ಲಿ ನಾಲ್ಕು ಪ್ರಮುಖ ಒಪ್ಪಂದಗಳಡಿ ಖಾಲಿಯಾದ ಹಲವು ಹುದ್ದೆಗಳ ಭರ್ತಿ ಮಾಡಲು ನೇಮಕಾತಿ ಅಭಿಯಾನ ಆಯೋಜಿಸಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಸಂಭಾವ್ಯ ಅಭ್ಯರ್ಥಿಗಳನ್ನು ಸೂಚಿಸುವಂತೆ ಕಂಪನಿಯು ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದೆ.
ಈ ದಾಖಲೆಗಳ ಸಮೇತ ಹಾಜರಾಗಿ
ಬೆಂಗಳೂರಿನ ನೇಮಕಾತಿಯಲ್ಲಿ ಅಭ್ಯರ್ಥಿಗಳು ತಮ್ಮ ಇತ್ತೀಚಿನ ರೆಸ್ಯೂಮ್ ಎರಡು ಪಾಸ್‌ಪೋರ್ಟ್ ಸೈಜ್‌ನ ಫೋಟೊ ಹಾಗೂ ಗುರುತಿನ (ID) ಚೀಟಿ ಸಮೇತ ನಿಗದಿತ ದಿನಾಂಕದಂದು ಹಾಜರಾಗಬೇಕಿರುತ್ತದೆ.
ಕ್ರೀಯಾಶೀಲ ಹಾಗೂ ವೃತ್ತಿಪರ ಪ್ರತಿಭಾನಿತ್ವತ ಅಭ್ಯರ್ಥಿಗಳನ್ನು ಹುಡುತ್ತಿದ್ದೇವೆ. ಮಾನದಂಡಗಳನ್ನು ಪೂರೈಸುವ ಮತ್ತು ಹೊಸ ಅವಕಾಶಗಳನ್ನು ಹುಡುಕುತ್ತಿರುವ ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ನೆಟ್‌ವರ್ಕ್‌ನ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ ಎಂದು ಇನ್ಫೋಸಿಸ್ ತಿಳಿಸಿದೆ.

ಈ ಅನುಭವಿಗಳಿಗೆ ಅವಕಾಶ
ವಿವರವಾಗಿ ನೋಡುವುದಾದರೆ ಬೆಂಗಳೂರು ಇನ್ಫೋಸಿಸ್ 3-9 ವರ್ಷಗಳ ಅನುಭವದೊಂದಿಗೆ ಜಾವಾ/ಡಾಟ್‌ನೆಟ್/ಮೇನ್‌ಫ್ರೇಮ್/ಸರ್ವೀಸ್‌ನೌ ಡೆವಲಪರ್‌ನಲ್ಲಿ ಕೌಶಲ್ಯ ಹೊಂದಿರುವ ವೃತ್ತಿಪರರ ನೇಮಕಾತಿಗೆ ಮನಸ್ಸು ಮಾಡಿದೆ.
ಈ ಮಧ್ಯೆ ಇನ್ಫೋಸಿಸ್ ಷೇರುಗಳು ಬುಧವಾರದಂದು ಬಿಎಸ್‌ಇಯಲ್ಲಿ ಪ್ರತಿ ಷೇರಿಗೆ 1,670.10 ರೂ.ಗೆ ಕೊನೆಗೊಂಡಿದ್ದರೆ, ಮಂಗಳವಾರದ ರೂ.1,664.75 ರಿಂದ ಶೇ.0.32 ರಷ್ಟು ಹೆಚ್ಚಾಗಿದೆ ಎಂದು ವರದಿ ಆಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಇನ್ಫೋಸಿಸ್ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ 7.3 ಶೇಕಡಾ ಕುಸಿತವನ್ನು 6,106 ಕೋಟಿ ರೂ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ರೂ 6,586 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ ಎಂದು ಐಟಿ ದೈತ್ಯ ಎಕ್ಸ್‌ಚೇಂಜ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ.
ಕಳೆದ ವರ್ಷ ಉದ್ಯೋಗಿಗಳ ವಜಾಗೊಳಿಸಿದ್ದ ಕಂಪನಿಗಳ ಪಟ್ಟಿಗೆ ಸೇರಿದ್ದ ಇನ್ಫೋಸಿಸ್, ಈಗ ನೇಮಕಾತಿಗೆ ಮುಂದಾಗಿದೆ. ಅನುಭವ ಅಭ್ಯರ್ಥಿಗಳು ಕೂಡಲೇ ಪರಿಶೀಲಿಸಿ ನಿಗದಿತ ದಿನಾಂಕದಂದು ಸಂದರ್ಶನದಲ್ಲಿ ಪಾಲ್ಗೊಳ್ಳಬೇಕಿದೆ.












Click it and Unblock the Notifications