ಬೆಂಗಳೂರು ವಿವಿ ಕಸದ ಮೌಲ್ಯ 5 ಕೋಟಿ ರು!

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಳಪಡುವ ಕಾಲೇಜುಗಳ ಲೈಬ್ರರಿ ಹಾಗೂ ಇತರೆಡೆಗಳ ಕಸದ ಸಂಗ್ರಹ ಮಾಡಿದರೆ ಸುಮಾರು 5 ಕೋಟಿ ರು.ಗೂ ಅಧಿಕ ಬೆಲೆ ಬಾಳುತ್ತದೆ ಎಂದು ಇಂಜಿನಿಯರ್ ಪುಟ್ಟಸ್ವಾಮಿ ಅವರು ಹೇಳುತ್ತಾರೆ.
ಜ್ಞಾನ ಭಾರತಿ ಹಾಗೂ ಸೆಂಟ್ರಲ್ ಕಾಲೇಜು ಆವರಣದಲ್ಲಿ ಸಿಗುವ ಕಸದ ಮೊತ್ತ ಕೋಟ್ಯಾಂತರ ಬೆಲೆ ಬಾಳುತ್ತದೆ. ಇಂಜಿನಿಯರಿಂಗ್ ಕಾಲೇಜುಗಳ ಇ ತ್ಯಾಜ್ಯ, ಪ್ರಯೋಗಶಾಲೆಗಳ ತ್ಯಾಜ್ಯಗಳು ಈ ಪಟ್ಟಿಗೆ ಸೇರುತ್ತದೆ.
ಯುವಿಸಿಇ ಹಾಸ್ಟೆಲ್ ನಲ್ಲಿ ಮುರಿದ ಕುರ್ಚಿ, ಚೇರುಗಳ ರಾಶಿಯಿದೆ. ಮೆಕ್ಯಾನಿಕಲ್ ವಿಭಾಗದಲ್ಲಿ ತುಕ್ಕು ಹಿಡಿದ ಯಂತ್ರಗಳು, ಕಾಲೇಜುಗಳ ಧೂಳು ಹೀಗೆ ಅನೇಕ ರೀತಿ ಕಸಗಳ ಸಂಗ್ರಹಿತ ಮೊತ್ತ 5 ಕೋಟಿ ರು ತೂಗುತ್ತದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications