ರಸ್ತೆಗಳನ್ನು ಸ್ವಚ್ಛಗೊಳಿಸುವ ಸ್ಮಾರ್ಟ್ ವಾಹನ: ವಿಡಿಯೋ ವೈರಲ್

ರಸ್ತೆಯಲ್ಲಿ ಕಸ ಗುಡಿಸುವುದು ತುಂಬಾ ಕಷ್ಟಕರವಾದ ಕೆಲಸ. ಇದು ಕಸ ಹಾಕಿದಷ್ಟು ಸುಲಭವಂತೂ ಅಲ್ಲವೇ ಅಲ್ಲ. ತಂತ್ರಜ್ಞಾನ ಎಷ್ಟೇ ಬೆಳೆದರೂ ಪ್ರತಿದಿನ ಪೌರಕಾರ್ಮಿಕರು ತಮ್ಮ ಕೈಗಳಲ್ಲಿ ಪೊರಕೆ ಹಿಡಿದು ರಸ್ತೆಯನ್ನು ಗುಡಿಸಿ ಸ್ವಚ್ಚಗೊಳಿಸುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲೊಂದು ವೈರಲ್ ವಿಡಿಯೋದಲ್ಲಿ ಕಸಗುಡಿಸುವ ಯಂತ್ರಯೊಂದನ್ನು ತೋರಿಸಲಾಗಿದೆ. ಇದನ್ನು ಕೈಯಿಂದ ತಳ್ಳಿಕೊಂಡು ಹೋಗಬೇಕಾಗಿಲ್ಲ. ಬದಲಿಗೆ ರಸ್ತೆಯಲ್ಲಿ ಓಡಿಸಿಕೊಂಡು ಹೋದರೆ ಸಾಕು.

ಹೌದು... ವೈರಲ್ ವಿಡಿಯೋದಲ್ಲಿ ಆಟೋದಂತೆ ಇರುವ ಮೂರು ಚಕ್ರದ ವಾಹನವಿದೆ. ಅದರ ಹಿಂಬದಿಯಲ್ಲಿ ನಾಲ್ಕು ಅಗಲವಾದ ಪುರಕೆಗಳನ್ನು ಕಟ್ಟಲಾಗಿದೆ. ಆ ಪೊರಕೆಗಳನ್ನು ಒಂದು ಚಕ್ರಕ್ಕೆ ಅಳವಡಿಸಲಾಗಿದ್ದು. ಆ ಚಕ್ರ ಸುತ್ತಿದಂತೆ ಪೊರಕೆಗಳು ನೆಲಕ್ಕೆ ತಾಗಿ ಕಸವನ್ನು ತಳ್ಳುತ್ತವೆ.

smart-vehicles-for-cleaning-roads-video-viral

ಈ ಮೂಲಕ ರಸ್ತೆಯ ಮೇಲೆ ಕಸ ಗುಡಿಸುತ್ತಾ ಚಾಲಕ ವಾಹನ ಚಲಾಯಿಸಿಕೊಂಡು ಹೋಗುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ನೋಡುಗರ ಗಮನ ಸೆಳೆದಿದೆ. ಇದರಲ್ಲಿ ಯಾವುದೇ ವ್ಯಕ್ತಿಯ ಶ್ರಮ ಇಲ್ಲ. ವಾಹನ ಚಲಾಯಿಸಲು ಒಬ್ಬ ಚಾಲಕನಿದ್ದರೆ ಸಾಕು. ಎಷ್ಟು ರಸ್ತೆಯನ್ನು ಬೇಕಾದರು ಸುಲಭವಾಗಿ ಗುಡಿಸಬಹುದು.

ಇದರಿಂದ ಕಾರ್ಮಿಕರ ಶ್ರಮವನ್ನು ಕಡಿಮೆ ಮಾಡಬಹುದು. ಜೊತೆಗೆ ಇದಕ್ಕಾಗಿ ಹೆಚ್ಚು ಪೌರಕಾರ್ಮಿಕರ ಅಗತ್ಯತೆ ಇರುವುದಿಲ್ಲ. ಈ ವಿಡಿಯೋವನ್ನು ಜನ ಮೆಚ್ಚಿಕೊಂಡಿದ್ದಾರೆ. ಇದನ್ನು ತಮ್ಮ ಸ್ಥಳಗಳಲ್ಲೂ ತರಬೇಕು, ಈ ಮೂಲಕ ಕಾರ್ಮಿಕರ ಶ್ರಮವನ್ನು ಕಡಿಮೆ ಮಾಡಬೇಕು ಅನ್ನೋ ಸಲಹೆಯನ್ನು ನೀಡಿದ್ದಾರೆ.

ವೀಡಿಯೋವನ್ನು ಇಲ್ಲಿ ವೀಕ್ಷಿಸಿ:-

ವಿಡಿಯೋಕ್ಕೆ ಪ್ರತಿಕ್ರಿಯೆ:-

ಈ ಬಗ್ಗೆ ಯೋಚಿಸಿದವರಿಗೆ ನಮ್ಮ ಸಲಾಮ್. ಏಕೆಂದರೆ ಇದು ರಸ್ತೆಗಳನ್ನು ಸ್ವಚ್ಛವಾಗಿಡಲು ಪರಿಣಾಮಕಾರಿ ಮಾರ್ಗವಾಗಿದೆ ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ.

ನಮ್ಮ ನಗರಗಳನ್ನು ಸ್ವಚ್ಛವಾಗಿಡುವ, ಅವುಗಳನ್ನು ಸುಂದರವಾಗಿ ಮತ್ತು ರಮಣೀಯವಾಗಿ ಕಾಣುವಂತೆ ಮಾಡುವ ಮತ್ತು ನೈರ್ಮಲ್ಯ ಸಮಸ್ಯೆಗಳನ್ನು ತಡೆಯುವ ಹಲವಾರು ಜನರಿಗೆ ಇದು ಸಹಕಾರಿಯಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+