ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದಗೌಡ ಅಕ್ರಮ ಕಟ್ಟಡ ವಿವಾದ ಮುಂದೂಡಿಕೆ

By Rajendra
|
Google Oneindia Kannada News

ಬೆಂಗಳೂರು, ಫೆ.11: ಅಕ್ರಮ ಕಟ್ಟಡ ನಿಮಣ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸದಾನಂದಗೌಡ ವಿರುದ್ಧ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.

ಪತ್ರಕರ್ತೆ ನಾಗಲಕ್ಷಿ ಬಾಯಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೈಲೇಂದ್ರಕುಮರ್ ಮತ್ತು ಕೆಂಪಣ್ಣ ಅವರ ವಿಭಾಗೀಯ ಪೀಠ ಸದಾನಂದಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ,ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಮತ್ತು ಬಿಡಿಎ, ಬಿಬಿಎಂಪಿ ಆಯುಕ್ತ ಪೊಲೀಸ್ ಕಮೀಷನರ್ ಅವರ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಗಡುವು ನೀಡಿ ವಿಚಾರಣೆಯನ್ನು ಮುಂದೂಡಿದರು.

ನಾಗಲಕ್ಷಿ ಬಾಯಿಯವರು ತಮ್ಮ ಅರ್ಜಿಯಲ್ಲಿ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಡಿ.ವಿ.ಸದಾನಂದಗೌಡ ಅವರು ಜಿ-ಕ್ಯಾಟಗರಿ ಸೈಟ್ ಪಡೆದಿದ್ದರು. ಈ ಜಾಗದ ಪಕ್ಷದಲ್ಲೇ ಶಾಸಕ ಜೀವರಾಜ್‌ಗೆ ಸೇರಿದ ಜಾಗವೂ ಇದೆ. ವಸತಿ ಉದ್ದೇಶಕ್ಕೆ ಸೈಟ್ ತೆಗೆದುಕೊಂಡು ಕಾನೂನು ಬಾಹಿರವಾಗಿ ಎರಡು ನಿವೇಶನಗಳನ್ನು ಒಂದುಗೂಡಿಸಿ ವಾಣಿಜ್ಯ ಕಟ್ಟಡ ಕಟ್ಟಿದ್ದು ಬಿಡಿಎ ನಿಯಮವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಅಲ್ಲದೇ ಈ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಬಿಡಿಎಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. (ಒನ್‍ಇಂಡಿಯಾ ಕನ್ನಡ)

English summary
In response to a petition filed by journalist KG Nagalakshmi Bai, the high court on Friday directed chief minister DV Sadananda Gowda, Bangalore Development Authority (BDA), and the state government to file their objections in two weeks
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X