ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನ್ರಿ ಕಾಗೇರಿ, ಮಕ್ಕಳಾಯ್ತು, ಈಗ ಶಿಕ್ಷಕರಿಲ್ಲ ಅಂತೀರಾ?

By Mahesh
|
Google Oneindia Kannada News

Government Schools teachers scarcity
ಬೆಂಗಳೂರು, ಡಿ.7: ರಾಜಕೀಯ ದ್ವೇಷ, ಕಚ್ಚಾಟದ ನಡುವೆ ಸದನದಲ್ಲಿ ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರಿಲ್ಲ ಎಂಬ ಮಹತ್ವದ ವಿಷಯ ಪ್ರತಿಧ್ವನಿಸಿ, ಕೋಲಾಹಲಕ್ಕೆ ಕಾರಣವಾಯಿತು.

ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಏಕೆ ಆಗಿಲ್ಲ ಎಂದು ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ ಅವರು ಪ್ರಶ್ನಿಸಿದರು. ಎರಡು ವರ್ಷದಿಂದ ಶಿಕ್ಷಕರ ನೇಮಕಾತಿ ಆಗಿಲ್ಲ ಎಂಬುದನ್ನು ಒಪ್ಪಿಕೊಂಡ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಹುದ್ದೆಗಳನ್ನು ಭರ್ತಿ ಮಾಡಲು ತಾಂತ್ರಿಕ ದೋಷ ಎದುರಾಗಿದೆ ಎಂದು ಸಬೂಬು ಹೇಳಿದು.

ಈ ಸಮಯದಲ್ಲಿ ಎದ್ದು ನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡರು. ಒಂದು ಕಡೆ ಮಕ್ಕಳ ಕೊರತೆ ಎಂದು ಶಾಲೆ ಮುಚ್ಚುತ್ತೀರಾ, ಇನ್ನೊಂದೆಡೆ ಶಿಕ್ಷಕರ ಕೊರತೆ ಎಂದು ಹೇಳುತ್ತೀರಾ ನಿಮ್ಮ ಉದ್ದೇಶವೇನು? ಸರ್ಕಾರಿ ಶಾಲೆಗಳನ್ನು ಸಂಪೂರ್ಣ ಬಂದ್ ಮಾಡಲು ಯೋಜನೆ ಹಾಕಿಕೊಂಡಿದ್ದೀರಾ, ಹೇಗೆ? ಎಂದು ಪ್ರಶ್ನಿಸಿದರು.

ಮಾತು ಮುಂದುವರೆಸಿ, ನಾನು ಉಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಹಳ್ಳಿಗೊಂದು ಶಾಲಾ ಕಟ್ಟಡ, ಶಾಲೆಗೊಬ್ಬ ಶಿಕ್ಷಕ ನೀತಿಯನ್ನು ಕಡ್ಡಾಯಗೊಳಿಸಿದ್ದೆ. ಆದರೆ, ಈಗ ಕೊರತೆ ನೆಪವೊಡ್ಡಿ ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಹುನ್ನಾರ ಮಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಈ ಸಮಯದಲ್ಲಿ ಬಿಜೆಪಿ ಶಾಸಕರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ಹೆಚ್ಚಾಯಿತು. ಸದನದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಹೆಚ್ಚಿನ ಅವಕಾಶ ನೀಡುವುದಾಗಿ ಸಭಾಪತಿ ಬೋಪಯ್ಯ ಅವರು ಹೇಳಿದ ನಂತರ ಶಾಸಕರು ತಣ್ಣಗಾದರು.

English summary
Karnataka Assembly winter session: Siddaramaiah takes on Education minister Vishweshwar Hegde Kageri and alleges 'It seems that the Sadananda Gowda Government is decided to close all government schools in Karnataka' after students now schools facing scarcity of teachers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X