ತಾವು ಓದಿದ ಸರ್ಕಾರಿ ಶಾಲೆಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಅನುದಾನ ಎಷ್ಟು ಗೊತ್ತಾ?-ಮಾಹಿತಿ, ವಿವರ
ಮೈಸೂರು, ಮಾರ್ಚ್, 01: ಸಿಎಂ ಸಿದ್ದರಾಮಯ್ಯ ಅವರು ತಾವು ಓದಿದ ಸರ್ಕಾರಿ ಶಾಲೆ ಸೇರಿದಂತೆ ಇನ್ನಿತರ ಶಲೆಗಳಿಗೂ ಅನುದಾನ ನೀಡಿದ್ದಾರೆ. ಹಾಗಾದರೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಿಎಂ ಸಿದ್ದರಾಮಯ್ಯನವರು ತಾವು ಪ್ರಾಥಮಿಕ ಶಿಕ್ಷಣ ಪಡೆದ ತಲ್ಲೂಕಿನ ಕುಪ್ಪೇಗಾಲ ಹಾಗೂ ಸಿದ್ದರಾಮನಹುಂಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಲಾ 10 ಲಕ್ಷ ರೂಪಾಯಿ ವೈಯಕ್ತಿಕ ನೆರವು ನೀಡಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಶಾಲೆಗಳ ಅಭಿವೃದ್ದಿಗೆ "ನನ್ನ ಶಾಲೆ, ನನ್ನ ಜವಾಬ್ದಾರಿ" ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಶಾಲೆಗಳಲ್ಲಿ ಓದಿದ ಹಳೇ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಜವಾಬ್ದಾರಿಯನ್ನು ವಹಿಸಲಾಗುತ್ತಿದೆ. ಇನ್ನು ಈ ಯೋಜನೆ ಆರಂಭಕ್ಕೆ ಸಿಎಂ ಸಿದ್ದರಾಮಯ್ಯನವರೇ ತಾವು ಓದಿದ ಶಾಲೆಗಳಿಗೆ ದೇಣಿಗೆ ನೀಡಿದ್ದು, ಮಾರ್ಚ್ 7ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಡಿಡಿಪಿಐ ಎಚ್.ಕೆ.ಪಾಂಡು ತಿಳಿಸಿದ್ದಾರೆ ಅಂತಾ ವರದಿಯಾಗಿದೆ.
10ನೇ ವರ್ಷದವರೆಗೂ ಸಿದ್ದರಾಮಯ್ಯ ಅವರು ಶಾಲೆಗೆ ಹೋಗಿರಲಿಲ್ಲ. ಸಿದ್ದರಾಮನಹುಂಡಿಯಿಂದ 1.5 ಕಿಲೋ ಮೀಟರ್ ದೂರವಿರುವ ಕುಪ್ಪೇಗಾಲ ಶಾಲೆಗೆ 5ನೇ ತರಗತಿವರೆಗೆ ನೇರವಾಗಿ ಪ್ರವೇಶ ಪಡೆದ ಅವರು, 7ನೇ ತರಗತಿವರೆಗೂ ಇಲ್ಲಿಯೇ ಶಿಕ್ಷಣ ಪಡೆದಿದ್ದರು ಎಂದು ತಿಳಿಸಿದರು.
2015-16ರಲ್ಲಿ ಶಾಲೆಗೆ 1 ಹೆಕ್ಟೇರ್ ಜಾಗದಲ್ಲಿ 8 ಕೊಠಡಿ, 2 ಶೌಚಾಲಯ ಹಾಗೂ ಕಾಂಪೌಂಡ್ ಸೇರಿ ಹೊಸ ಕಟ್ಟಡ ಕಟ್ಟಿಸಿಕೊಟ್ಟು ಉನ್ನತೀಕರಿಸಿದ್ದರು. ಇದೀಗ 10 ಲಕ್ಷ ರೂಪಾಯಿ ವೈಯಕ್ತಿಕ ನೆರವು ನೀಡುತ್ತಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ನೆರವಿನಿಂದ ಸ್ಮಾರ್ಟ್ ಕ್ಲಾಸ್‌ಗಳನ್ನು ನಡೆಸಲು ಅನುಕೂಲವಾಗುವಂತೆ ಸ್ಮಾರ್ಟ್ ಸಿಟಿ, ಪ್ರೋಜೆಕ್ಟರ್ ತರಲಾಗುವುದು. ಕುರ್ಚಿ, ಮೇಜು ಸೇರಿದಂತೆ ಅಗತ್ಯ ಪರಿಕರಗಳನ್ನು ಖರೀದಿಸಲಾಗುವುದು ಎಂದರು.












Click it and Unblock the Notifications