Get Updates
Get notified of breaking news, exclusive insights, and must-see stories!

ಕರ್ನಾಟಕ ಸರ್ಕಾರಿ ವಿದ್ಯಾರ್ಥಿಗಳಿಗೆ 'ಚಪ್ಪಲಿ ಭಾಗ್ಯ' ಕರುಣಿಸಿದ ಸರ್ಕಾರ

ಗದಗ, ನವೆಂಬರ್ 13: ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಮತ್ತು ಶೂ-ಸಾಕ್ಸ್ ವಿತರಣೆ ಇದೆ. ಈ ಯೋಜನೆ ಇರುವಾಗಲೇ ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಬದಲಾಗಿ 'ಚಪ್ಪಲಿ ಭಾಗ್ಯ' ಸಿಕ್ಕಿದೆ. ಈ ವಿಷಯ ಇದೀಗ ಚರ್ಚೆಗೆ ಗ್ರಾಸವಾಗಿದೆ. ಶಾಲೆಯ ಅಧಿಕಾರಿಗಳು ಮಾತ್ರ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕೆಲವು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರಕಾರದಿಂದ ಪೂರೈಕೆಯಾಗುವ ಸಮವಸ್ತ್ರದಲ್ಲಿ ಶೂ, ಸಾಕ್ಸ್ ಬದಲಿಗೆ ಚಪ್ಪಲಿಗಳನ್ನು ನೀಡಲಾಗಿದೆ. ಈ ಕುರಿತು ಆ ಮಕ್ಕಳ ಪೋಷಕರು ಶಾಲಾ ಆಡಳಿತ ಮಂಡಳಿಗೆ ಮಂಡಳಿಗೆ ದೂರು ನೀಡಿದ್ದಾರೆ.

Karnataka Government School Students has Received Chappal Bhagya instead of Shoe Bhagya

ಕೆಲವು ವಾರ್ಡ್‌ಗಳ ಪೋಷಕರು ತಮ್ಮ ಮಕ್ಕಳಿಗೆ ಶೂಗಳ ಬದಲಾಗಿ ಚಪ್ಪಲಿಯನ್ನು ಬಯಸುತ್ತಾರೆ. ಹೀಗಾಗಿ ಚಪ್ಪಲಿ ನೀಡಿದ್ದೇವೆ ಎಂದು ಶಾಲೆಯ ಅಧಿಕಾರಿಗಳು ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಗದಗ ಜಿಲ್ಲೆಯ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ ಸಿಕ್ಕಿವೆ. ಆದರೆ ಲಕ್ಷ್ಮೇಶ್ವರ ತಾಲೂಕಿನ ಮೂರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂಗಳಿಗೆ ಬದಲಾಗಿ ಚಪ್ಪಲಿಗಳನ್ನು ವಿತರಣೆ ಮಾಡಲಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ನೀಡುವಂತೆ ಸರ್ಕಾರ ಆದೇಶಿಸಿದೆ. ಆದರೆ ಕೆಲವು ವಿದ್ಯಾರ್ಥಿಗಳು ಬಯಸಿದ ಕಾರಣ ಚಪ್ಪಲಿಗಳನ್ನು ನೀಡಲಾಗಿದೆ ಎಂದು ಆಯಾ ಶಾಲೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಚಪ್ಪಲಿ ವಿತರಣೆ ಇಲಾಖೆ ಗಮನಕ್ಕೆ ಬಂದಿಲ್ಲವೇ?

ರಾಜ್ಯ ಸರ್ಕಾರವು ದಸರಾ ಹಬ್ಬದ ರಜೆಗೂ ಮೊದಲು ವಿದ್ಯಾರ್ಥಿಗಳಿಗೆ ಶೂ-ಸಾಕ್ಷ್, ಸಮವಸ್ತ್ರ ವಿತರಿಸಲು ಆದೇಶಿಸಿತ್ತು. ಎಲ್ಲ ಶಾಲೆಗಳಿಗೆ ಈ ಬಗ್ಗೆ ನೋಟಿಸ್ ನೀಡಿತ್ತು. ಈ ಕುರಿತು ಶಾಲಾ ಅಭಿವೃದ್ಧಿ ವ್ಯವಸ್ಥಾಪನಾ ಸಮಿತಿ (ಎಸ್‌ಡಿಎಂಸಿ) ಸದಸ್ಯರನ್ನು ಪರಿಶೀಲಿಸುವಂತೆ ತಿಳಿಸಿದೆ.

Karnataka Government School Students has Received Chappal Bhagya instead of Shoe Bhagya

ಹೀಗಿದ್ದರೂ ಸಹಿತ ಲಕ್ಷ್ಮೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 2, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸ್ತಿಬಾನ, ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಂಚಲಾಪುರದಲ್ಲಿ ಈಗ ವಿದ್ಯಾರ್ಥಿಗಳಿಗೆ ಶೂಗಳ ಬದಲಾಗಿ ಚಪ್ಪಲಿ ನೀಡಲಾಗಿದೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆಯೇ?. ಸರ್ಕಾರ ಶೂ ನೀಡುವಂತೆ ಹೇಳಿದ್ದರೂ ಸಹಿತ ಆದೇಶ ಧಿಕ್ಕರಿಸಿ ನಿಯಮ ಪಾಲಿಸದೇ ಚಪ್ಪಲಿ ನೀಡಲಾಗಿದೆಯೇ? ಎಂಬುದು ಬಹಿರಂಗೊಳ್ಳಬೇಕಿದೆ.

ಶೂ-ಸಾಕ್ಸ್ ಬೇಕೆಂದ ಪೋಷಕರು

ಕೆಲವು ಮಕ್ಕಳು ನಾವು ಶೂಗಳು ಮತ್ತು ಸಾಕ್ಸ್‌ಗಳನ್ನು ನಿರೀಕ್ಷಿಸಿದ್ದೇವೆ. ಆದರೆ ನಮಗೆ ಸಿಕ್ಕಿದ್ದು ಚಪ್ಪಲಿಗಳು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳಿಗೂ ಶೂ-ಸಾಕ್ಸ್ ನೀಡುವಂತೆ ಶಿಕ್ಷಕರಿಗೆ ವಿನಂತಿಸಿದ್ದೇವೆ ಎಂದು ಪೋಷಕರು ತಿಳಿಸಿದ್ದಾರೆ.

ಒಂದು ಕುಟುಂಬದ ನಮ್ಮ ಮಕ್ಕಳು ಬೇರೆ ಬೇರೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಅದರಲ್ಲಿ ಚಿಕ್ಕವನಿಗೆ ಶೂ-ಸಾಕ್ಸ್‌ ಸಿಕ್ಕರೆ, ದೊಡ್ಡ ಮಗನಿಗೆ ಚಪ್ಪಲಿ ನೀಡಲಾಗಿದೆ. ಶಾಲೆಗಳ ಈ ನಡೆ ಇಬ್ಬರು ಮಕ್ಕಳ ಜಗಳಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಶೂ ಭಾಗ್ಯ ಘೋಷಿಸಿದರೂ ಸಹಿತ ವಿದ್ಯಾರ್ಥಿಗಳಿಗೆ ಚಪ್ಪಲಿ ಭಾಗ್ಯ ಕರುಣಿಸಿದ್ದು ಸರಿಯಲ್ಲ ಎಂದು ಕೃಷಿ ಕಾರ್ಮಿಕರು ಆಗಿರುವ ಇಬ್ಬರು ಮಕ್ಕಳ ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು.

ಮಕ್ಕಳು ಶಾಲೆಗಳಲ್ಲಿ ಮಧ್ಯಾಹ್ನದ ಊಟ ಮಾಡುವಾಗ ಹಾಗೂ ಇತರೆ ಸಮಯಗಳಲ್ಲಿ ಶೂ ತೆಗೆಯುವುದು ಕಷ್ಟವಾಗುತ್ತದೆ. ಹೀಗಾಗಿ ಚಪ್ಪಲಿ ಕೊಡಿಸಲು ಕೆಲವು ಫೋಷಕರು ಮನವಿ ಮಾಡಿದ್ದರು ಎಂದು ಲಕ್ಷ್ಮೇಶ್ವರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ನಿರ್ಮಲಾ ನರೇಗಲ್ ತಮ್ಮ ನಡೆ ಸಮರ್ಥಿಸಿಕೊಂಡರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+