ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆ ನಮಾಜು: ಮುಸ್ಲಿಮರಿಗೆ ಜಯ, ಹಿಂದೂಗಳಿಗೆ ಸೋಲು

By Mahesh
|
Google Oneindia Kannada News

Valley Park Middle School Toronto
ಟೊರಾಂಟೋ ಜು 6: ಇಲ್ಲಿನ ನಾರ್ತ್‌ಯಾರ್ಕ್ ಉಪ ನಗರದಲ್ಲಿರುವ ವ್ಯಾಲಿ ಪಾರ್ಕ್ ಮಿಡ್ಲ್ ಸ್ಕೂಲ್‌ನಲ್ಲಿ ಪ್ರತಿ ಶುಕ್ರವಾರ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಅವಕಾಶ ನೀಡಿತ್ತಿರುವುದನ್ನು ಟೊರೊಂಟೋ ಡಿಸ್ಟ್ರೀಕ್ ಸ್ಕೂಲ್ ಬೋರ್ಡ್ ಸಮರ್ಥಿಸಿಕೊಂಡಿದೆ. ಈ ಮೂಲಕ ಹಿಂದೂಗಳ ಪ್ರತಿಭಟನೆ ಬೆದರಿಕೆ ಬೆಲೆ ಕಳೆದುಕೊಂಡಿದೆ.

ಶಾಲೆಯಲ್ಲಿರುವ 400 ಮುಸ್ಲಿಂ ವಿದ್ಯಾರ್ಥಿಗಳಿಗೆ ಮಸೀದಿಯಿಂದ ವಿಶೇಷವಾಗಿ ಆಹ್ವಾನಿಸಲಾಗಿರುವ ಇಮಾಮ್ ಒಬ್ಬರು ಪ್ರತಿ ಶುಕ್ರವಾರ 40 ನಿಮಿಷಗಳ ಪ್ರಾರ್ಥನೆ ಮಾಡಿಸುತ್ತಾರೆ. ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದವು.

ಆದರೆ, ಇದಕ್ಕೆ ಬೆಲೆ ಕೊಡದ ಆಡಳಿತ ಮಂಡಳಿ, ನಮಾಜ್ ವ್ಯವಸ್ಥೆ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಎಲ್ಲೆಡೆ ಈ ವ್ಯವಸ್ಥೆಯಿದೆ. ಶಾಲಾ ಮಕ್ಕಳ ಹಾಜರಾತಿ ಮೇಲೂ ನಾವು ಕಣ್ಣಿಡಬೇಕಿದೆ. ಎಂದು ಟಿಡಿಎಸ್‌ಬಿ ಹೇಳಿದೆ. ಈ ಶಾಲೆಯಲ್ಲಿ ಶೇ 90 ವಿದ್ಯಾರ್ಥಿಗಳು ಮುಸ್ಲಿಂಗಳಾಗಿರುವುದು ವಿಶೇಷ.

ಜಾತ್ಯತೀತವಾಗಿ ಶಿಕ್ಷಣ ನೀಡುವುದು ಶಾಲೆಯ ಜವಾಬ್ದಾರಿಯಾಗಿದೆ. ಟಿಡಿಎಸ್‌ಬಿ ಶಾಲೆಗಳಲ್ಲಿ ಹಲಾಲ್ (ಮುಸ್ಲಿಂ ಧರ್ಮದ ಪ್ರಕಾರ ವಧೆ ಮಾಡಲಾದ ಪ್ರಾಣಿಯ ಮಾಂಸ ) ಮಾಂಸವನ್ನು ನೀಡುತ್ತಿರುವುದು ಸರಿಯಲ್ಲ. ಎಲ್ಲ ಹಿಂದೂ ವಿದ್ಯಾರ್ಥಿಗಳಿಗೂ ಹಲಾಲ್ ಮಾಡದ ಮಾಂಸವನ್ನು ನೀಡುವುದಾಗಿ ಶಾಲೆ ಭರವಸೆ ನೀಡಬೇಕು ಎಂದು ಹಿಂದೂ ಸಂಘಟನೆ ಮುಖ್ಯಸ್ಥ ರಾನ್ ಬ್ಯಾನರ್ಜಿ ಹೇಳಿದ್ದಾರೆ.

English summary
Toronto District School Board has defended allowing The Toronto board has allowed Friday afternoon prayer services for Muslim students in Valley Park Middle School cafeteria without public consultations. Hindu group has said it will protest outside school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X