ಬೆಹೆನ್.. ಬೆಹೆನ್.. ಎನ್ನುತ್ತಲೆ ಹಿಂದೂ ಯುವತಿಯನ್ನು ಬುಟ್ಟಿಗೆ ಬೀಳಿಸಿಕೊಂಡ ಯುವಕ

ಗದಗ ಜನವರಿ 30: ಬೆಹೆನ್ (ತಂಗಿ).. ಬೆಹೆನ್.. ಎನ್ನುತ್ತಲೆ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಬುಟ್ಟಿಗೆ ಬೀಳಿಸಿಕೊಂಡ ಘಟನೆ ಗದಗದಲ್ಲಿ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಲವ್ ಜಿಹಾದ್ ಆರೋಪಗಳ ನಡುವೆಯೇ ಈ ಸುದ್ದಿ ಹೊರಬಿದ್ದಿದೆ. ಗದಗದ ಬೆಟಗೇರಿಯ ಮಂಜುನಾಥ ನಗರದ 19 ವರ್ಷದ ಹಿಂದೂ ಯುವತಿಯನ್ನು ವಿವಾಹಿತ ಮುಸ್ಲಿಂ ಯುವಕನೊಬ್ಬ ಅಪಹರಿಸಿದ್ದಾನೆ. ಈತ ಯುವತಿಯನ್ನು ಬೆಹೆನ್ (ತಂಗಿ).. ಬೆಹೆನ್.. ಎಂದು ಕರೆಯುತ್ತಿದ್ದನು. ಇದರಿಂದಾಗಿ ಮನೆಯರು ಈತನ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಯುವಕ ಯುವತಿಯನ್ನು ಪಠಾಯಿಸಿದ್ದಾನೆ ಎಂದು ದೂರಲಾಗಿದೆ.

Love Jihad in Gadag: Muslim youth kidnapped a Hindu girl in the name of love...

ಮಾತ್ರವಲ್ಲದೆ ಈತನಿಗೆ ಇನ್ನೂ ಕೆಲ ಹಿಂದೂ ಯುವತಿಯರೊಂದಿಗೆ ಸಂಪರ್ಕವಿದೆ ಎನ್ನಲಾಗುತ್ತಿದೆ. ಅವರೊಂದಿಗೂ ಈತ ಪ್ರೇಮದ ನಾಟಕವಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಆರೋಪಿಗೆ ಈಗಾಗಲೇ ಮದುವೆಯಾಗಿದೆ. ಹೀಗಿರುವಾಗ ಮತ್ತೋರ್ವ ಹಿಂದೂ ಯುವತಿ ಜೊತೆಗೆ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ ಎಂದು ಪೋಷಕರು ದೂರಿದ್ದಾರೆ.

ಮಗಳು ಕಾಣದಾಗಿ ಪೋಷಕರು ಮರುಕ ವ್ಯಕ್ತಪಡಿಸಿದ್ದಾರೆ. ತಂಗಿ ತಂಗಿ ಎನ್ನುತ್ತಿದ್ದ ಯುವಕನ ಮೋಸದ ಜಾಲಕ್ಕೆ ತಮ್ಮ ಮಗಳು ಬಲಿಯಾದಳು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಸದ್ಯ ಮಗಳನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆದರೆ ಪೊಲೀಸರು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ದೂರು ದಾಖಲಿಸಿದ್ದಾರೆ. ಆರೋಪಿ ಅಮೀರ್ ಜನವರಿ 16ರಂದು ಯುವತಿಯನ್ನು ಅಪಹರಣ ಮಾಡಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಇದು ಲವ್ ಜಿಹಾದ್ ಪ್ರಕರಣವಾಗಿದ್ದು ತಮ್ಮ ಮಗಳನ್ನು ಹುಡುಕಿ ಕೊಡಿ ಎಂದು ಪೋಷಕರು ಎಸ್ಪಿಗೆ ಮನವಿ ಮಾಡಿದ್ದಾರೆ. ಆದರೆ ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ದೂರು ನೀಡಿ ಒಂದು ವಾರ ಕಳೆದರೂ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ. ಲವ್ ಜಿಹಾದ್ ದೂರು ನೀಡಿದರೂ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಮಗಳ ಬಗ್ಗೆ ಕೇಳಿದರೆ ಕಾರು ಬಾಡಿಗೆ ಮಾಡಿಕೊಂಡು ನಾವು ನೀವು ಸೇರಿಕೊಂಡು ಮಗಳ ಬಗ್ಗೆ ಪತ್ತೆ ಹಚ್ಚೋಣ ಎನ್ನುತ್ತಿದ್ದಾರೆ. ಜೊತೆಗೆ ಈ ಪ್ರಕರಣ ಬೇಧಿಸಲು ಪೊಲೀಸರು ತಮ್ಮ ಬಳಿ ಹಣದ ಬೇಡಿಕೆ ಕೂಡ ಇಟ್ಟಿದ್ದಾರೆ ಎನ್ನುವ ಆರೋಪಗಳನ್ನು ಪೋಷಕರು ಮಾಡಿದ್ದಾರೆ.

ಈ ಬಗ್ಗೆ ಯುವತಿ ತಂದೆ ಅಸಮಾಧಾನ ಹೊರಹಾಕಿದ್ದಾರೆ. ''ನಾವು ಬಡವರು. ಹಣ ಕೇಳಿದರೆ ಎಲ್ಲಂದ ತರೋಣ. ನಮ್ಮ ಮಗಳಿಗೆ ಏನಾದರು ಆದರೆ ಏನು ಗತಿ. ನಮ್ಮ ಮನಗೆ ಮುದ್ದಿನ ಮಗಳು ಅವಳು. ನಮಗೆ ತುಂಬಾ ಭಯವಾಗುತ್ತಿದೆ. 'ಮಗಳೇ ನೀ ಎಲ್ಲಿದ್ದಿ ಬಾರಮ್ಮ.... ನೀನಿಲ್ಲದೆ ನಾವು ಹೇಗೆ ಇರೋದು'' ಎಂದು ತಂದೆ ಕಣ್ಣೀರು ಹಾಕಿದ್ದಾರೆ.

ಮಗಳನ್ನು ಅಪಹರಣ ಮಾಡಲಾಗಿದೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಪೋಷಕರು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾರೆ. ಮಗಳು ಅನ್ಯ ಜಾತಿಯವನೊಂದಿಗೆ ಅದರಲ್ಲೂ ವಿವಾಹಿತನೊಂದಿಗೆ ಹೋದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ತಂದೆ ತಾಯಿ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಷಯದಿಂದ ನೊಂದು ನಾನು ನನ್ನ ಹೆಂಡತಿ ಆತ್ಮಹತ್ಯೆಗೆ ಯತ್ನಿಸಿದ್ದೆವು. ಸಂಬಂಧಿಕರು ನಮ್ಮನ್ನು ತಡೆದರು ಎಂದು ಯುವತಿ ತಂದೆ ಅಳಲು ತೋಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+