350 ಮುಸ್ಲಿಮರಿಂದ ಲಕ್ನೋದಿಂದ ಅಯೋಧ್ಯೆಗೆ 6 ದಿನಗಳ ಪಾದಯಾತ್ರೆ
ಅಯೋಧ್ಯೆ ಫೆಬ್ರವರಿ 1: ಅಯೋಧ್ಯೆಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಮ್ ಲಲ್ಲಾಗೆ ನಮನ ಸಲ್ಲಿಸುವ ಸಲುವಾಗಿ ಆರು ದಿನಗಳ ಪಾದಯಾತ್ರೆಯನ್ನು ಪೂರ್ಣಗೊಳಿಸಿದ ಒಟ್ಟು 350 ಮುಸ್ಲಿಂ ಭಕ್ತರು ಬುಧವಾರ ಅಯೋಧ್ಯೆಗೆ ತಲುಪಿದ್ದಾರೆ.
ಹೌದು ಆರ್‌ಎಸ್ಎಸ್ (RSS) ಬೆಂಬಲಿತ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ಅಡಿಯಲ್ಲಿ ಗುಂಪು ಜನವರಿ 25 ರಂದು ಲಕ್ನೋದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು. ಈ ಗುಂಪು ಬುಧವಾರ ಅಯೋಧ್ಯೆ ತಲುಪಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ.

ಅಯೋಧ್ಯೆಯಿಂದ ಲಕ್ನೋಗೆ 6-ದಿನದ ಪ್ರಯಾಣ
'ಜೈ ಶ್ರೀ ರಾಮ್' ಘೋಷಣೆಗಳ ನಡುವೆ 350 ಮುಸ್ಲಿಂ ಭಕ್ತರ ಗುಂಪು ದಟ್ಟವಾದ ಮಂಜು ಮತ್ತು ತೀವ್ರ ಚಳಿಯ ನಡುವೆ ಕಾಲ್ನಡಿಗೆಯಲ್ಲಿ ಸುಮಾರು 150 ಕಿಮೀ ದೂರವನ್ನು ಕ್ರಮಿಸಿ ಅಯೋಧ್ಯೆಗೆ ತಲುಪಿತು. MRM ನ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಅವರು ರಾತ್ರಿಯಲ್ಲಿ ವಿಶ್ರಾಂತಿ ಪಡೆಯಲು ಪ್ರತಿ 25 ಕಿಲೋಮೀಟರ್‌ಗೆ ಪಾದಯಾತ್ರೆ ನಿಲ್ಲಿಸಿದರು ಮತ್ತು ಮರುದಿನ ಬೆಳಿಗ್ಗೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು.
ಆರು ದಿನಗಳ ಪಾದಯಾತ್ರೆಯಲ್ಲಿ ಭಖ್ತರ ಚಪ್ಪಲಿ ಸವೆದು ಮತ್ತು ಪಾದಗಳು ದಣಿದು ಹೋಗಿವೆ. ಎಲ್ಲಾ ಹವಮಾನ ಬದಲಾವಣೆಯನ್ನು ಅನುಭವಿಸುವ ಮೂಲಕ ಭಕ್ತರು ಅಯೋಧ್ಯೆಗೆ ತಲುಪಿ ಹೊಸದಾಗಿ ಪ್ರತಿಷ್ಠಾಪಿಸಲಾದ ರಾಮ್ ಲಲ್ಲಾ ವಿಗ್ರಹಕ್ಕೆ ನಮನ ಸಲ್ಲಿಸಿದರು.
ಕೋಮು ಸೌಹಾರ್ದತೆ ಉತ್ತೇಜಿಸುವ ಘಟನೆ
ಮುಸ್ಲಿಂ ಭಕ್ತರ ಅಯೋಧ್ಯೆ ಭೇಟಿ ಏಕತೆ, ಸಮಗ್ರತೆ, ಸಾಮರಸ್ಯ ಮತ್ತು ಸಾರ್ವಭೌಮತ್ವದ ಸಂದೇಶವನ್ನು ರವಾನಿಸುತ್ತದೆ ಎಂದು ಶಾಹಿದ್ ಸಯೀದ್ ಹೇಳಿದರು. ದರ್ಶನದ ನಂತರ, ಪ್ರಾಂತೀಯ ಸಂಯೋಜಕ ಶೇರ್ ಅಲಿ ಖಾನ್ ಮತ್ತು MRM ಸಂಚಾಲಕ ರಾಜಾ ರಯೀಸ್ ನೇತೃತ್ವದ ಗುಂಪು ಭಗವಾನ್ ರಾಮನು ಎಲ್ಲರಿಗೂ ಪೂರ್ವಜ ಎಂದು ಹೇಳಿದರು.

ಅಯೋಧ್ಯೆ ತಂಡ ತಿರುಪತಿಗೆ ಭೇಟಿ
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯ ಬಳಿಕ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ವಾರಾಂತ್ಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಭಕ್ತರ ನಿರ್ವಹಣೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಗೆ ಕಷ್ಟವಾಗುತ್ತಿದೆ. ಇದಕ್ಕಾಗಿ ತಿರುಮಲಕ್ಕೆ ಬರುವ ಭಕ್ತರ ವಿಚಾರದಲ್ಲಿ ಟಿಟಿಡಿ ಅನುಸರಿಸುತ್ತಿರುವ ಕಾರ್ಯವಿಧಾನ ಅಧ್ಯಾಯನ ಮಾಡಲು ಅಯೋಧ್ಯೆ ಟ್ರಸ್ಟ್ ತಿರುಪತಿಗೆ ಭೇಟಿ ನೀಡಲಿದೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಿ 10 ದಿನಗಳು ಕಳೆದಿವೆ. ಐದು ನೂರು ವರ್ಷಗಳ ಅಡೆತಡೆಗಳ ನಂತರ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಿತ್ತು. ಹೀಗಾಗಿ ರಾಮ ಮಂದಿರ ನಿರ್ಮಾಣದ ಕನಸುಕಂಡ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ ರಾಮನ ಆಶೀರ್ವಾದ ಪಡೆಯುತ್ತಿದ್ದಾರೆ.












Click it and Unblock the Notifications