ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಧ್ವಜ ಎಡಿಟ್ ಮಾಡಿ ಫೋಟೋ ಹಂಚಿಕೊಂಡ ಕಿಡಿಗೇಡಿ
ರಾಯಚೂರು ಜನವರಿ 25: ರಾಮ ಮಂದಿರ ಬಗ್ಗೆ ಅವಹೇಳನ ಸ್ಟೇಟಸ್ ಹಾಕಿಕೊಂಡ ಯುವಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆ ಮುಂದೆ ಭಜನೆ ಮಾಡಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಗಬ್ಬೂರಿನಲ್ಲಿ ನಡೆದಿದೆ.
ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಯುವಕ ಸೈಯದ್ ಇಸಾರ್ ನಿಂದ ಈ ಕೃತ್ಯ ನಡೆದಿದೆ. ಈತ ರಾಮ ಮಂದಿರ ಮೇಲೆ ಪವರ್ ಆಫ್ ಇಸ್ಲಾಂ ಎಂದು ಬರಹವನ್ನು ಎಡಿಟ್ ಮಾಡಿದ್ದಾನೆ. ಬಳಿಕ ವಾಟ್ಸಾಪ್, ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ವೀಡಿಯೋ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆದ ನಂತರ ಸ್ಟೇಟಸ್ ಡಿಲೀಟ್ ಮಾಡಿದ್ದಾನೆ. ಕೆರಳಿದ ಹಿಂದೂ ಕಾರ್ಯಕರ್ತರು ಗಬ್ಬೂರು ಠಾಣೆ ಮುಂದೆ ಭಜನೆ ಮಾಡಿ ಆಕ್ರೋಶಗೊಂಡರು.

ಅಯೋಧ್ಯದಲ್ಲಿ ರಾಮಮಂದಿರ ಉದ್ಘಾಟನೆಯೊಂದಿದೆ. ಸೈಯದ್ ಇಸಾರ್ ಎಂಬ ಮುಸ್ಲಿಂ ಯುವಕ ಲೋಕಾರ್ಪಣೆಯಾದ ರಾಮಮಂದಿರ ಮೇಲೆ ಪಾಕಿಸ್ತಾನ ಧ್ವಜ ಹಾರಾಡುವ ಸ್ಟೇಟಸ್ ಹಾಕಿಕೊಂಡಿದ್ದಾನೆ. ಪಾಕಿಸ್ತಾನ ಧ್ವಜ ಎಡಿಟ್ ಮಾಡಿ ಸ್ಟೇಟಸ್ ಹಾಕಿ ಕೋಮುಸೌಹಾರ್ದತೆ ಕದಡುವ ಯತ್ನ ಮಾಡಿದ್ದಾನೆ. ಈತನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯ ಮುಂದೆ ಹಿಂದೂ ಕಾರ್ಯಕರ್ತರು ಭಜನೆ ಮಾಡಿದರು.
ಪರಸ್ಥಿತಿ ಗಂಭೀರತೆ ಪಡೆಯುತ್ತಿದ್ದಂತೆ ಯುವಕ ಸೈಯದ್ ಇಸಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನಗಳ ಹಿಂದೆ ಗದಗದಲ್ಲೂ ಇದೇ ಘಟನೆ
ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟದ ಚಿತ್ರ ನಿರ್ಮಿಸಿ ಕಿಡಿಗೇಡಿಯೊಬ್ಬ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ತಾಜುದ್ದೀನ್ ದಫೇದಾರ್ ಎಂಬಾತ ಕಿಡಿ ಹೊತ್ತಿಸುವಂತಹ ಕೆಲಸ ಮಾಡಿದ್ದನು. ಈತ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿರುವಂತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಈ ಘಟನೆ ಆಕ್ರೋಶಕ್ಕೆ ಗುರಿಯಾಗಿತ್ತು.
ಈ ಘಟನೆ ವಿರುದ್ಧ ಕೂಡಲೆ ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ಹೊರಹಾಕಿದ್ದರು, ತಪ್ಪಿತಸ್ತನನ್ನು ಬಂಧಿಸುವಂತೆ ಹಾಗೂ ಕೂಡಲೆ ಕ್ರಮಕ್ಕೆ ಒತ್ತಾಯಿಸಿದ್ದರು. ಗಜೇಂದ್ರಗಡ ಪೊಲೀಸರು ತಾಜುದ್ದೀನ್ ದಫೇದಾರ್ ಎಂಬಾತವನ್ನು ಬಂಧಿಸಿದ್ದಾರೆ. ಈ ಘಟನೆ ಬೆನ್ನಲ್ಲೆ ಪಟ್ಟದಲ್ಲಿ ಬಿಗಿವಿನ ವಾತಾವರಣ ನಿರ್ಮಾಣವಾಗಿತ್ತು ಪೊಲೀಸ್ ಠಾಣೆಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ತಡರಾತ್ರಿ ತೆರಳಿ ಯುವಕನಿಗೆ ತರಾಟೆ ತೆಗೆದುಕೊಂಡಿದ್ದರು. ಯುವಕನ ವಿರುದ್ಧ ದೂರು ದಾಖಲಾಗಿದೆ.












Click it and Unblock the Notifications