ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಗೆ ಬರಾಕ್ ಒಬಾಮಾ ತಣ್ಣನೆಯ ಸಂದೇಶ

By Prasad
|
Google Oneindia Kannada News

Barack Obama
ಮುಂಬೈ, ಅ. 6 : ಶಾಂತಿಯನ್ನು ಕದಡುವ, ಅಮಾಯಕರನ್ನು ಕೊಲ್ಲುವ ಉಗ್ರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಇದು ಭಯೋತ್ಪಾದಕರಿಗೆ ನನ್ನ ಸ್ಪಷ್ಟ ಸಂದೇಶ ಎಂದು ನಾಲ್ಕು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿರುವ ಅಮೆರಿಕಾದ 44ನೇ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ತಾಜ್ ಹೊಟೇಲ್ ಎದುರಿರುವ ಗೇಟ್ ವೇ ಆಫ್ ಇಂಡಿಯಾದ ಎದುರಿಗೆ ಮಾಧ್ಯಮವನ್ನುದ್ದೇಶಿಸಿ ಸರಿಯಾಗಿ ಮಧ್ಯಾಹ್ನ 2.30ಕ್ಕೆ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಭಾಷಣ ಮಾಡಿದ ಒಬಾಮಾ, 2008ರ ನವೆಂಬರ್ 26ರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ಯಾವುದೇ ಮಾತನ್ನು ಹೇಳಲಿಲ್ಲ.

ಉಗ್ರರ ದಾಳಿಗೆ ಅಂದು ಮಡಿದ ವಿವಿಧ ದೇಶಗಳ ನಾಗಕರಿಕನ್ನು, ಜನರನ್ನು ಕಾಪಾಡಲು ಸೆಣಸಿದ ಭದ್ರತಾ ಸಿಬ್ಬಂದಿಗಳನ್ನು, ಹಲವರ ಪ್ರಾಣ ಉಳಿಸಿದ ಹೀರೋಗಳನ್ನು, ಮಡಿದವರ ಕುಟುಂಬದವರನ್ನು, ಹೊಟೇಲ್ ಸಿಬ್ಬಂದಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಬರಾಕ್ ಒಬಾಮಾ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಭಾರತ ಮತ್ತು ಅಮೆರಿಕ ದೇಶಗಳೆರಡು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದಷ್ಟೇ ಹೇಳಿದರು.

ಉಗ್ರರು ಜನರನ್ನು ಹತ್ಯೆಗೈದಿದ್ದನ್ನು, ತಾಜ್ ಹೊಟೇಲಿನ ಕಿಟಕಿಗೆ ಹತ್ತಿಕೊಂಡ ಬೆಂಕಿ ಆ ರಾತ್ರಿಯ ಆಗಸವನ್ನು ಬೆಳಗಿದ್ದನ್ನು ನಾವು ಅಮೆರಿಕಾದವರೆಲ್ಲ ನೋಡಿದ್ದೇವೆ. ನಾವೆಲ್ಲ ದೇವರ ಮಕ್ಕಳು, ಎರಡೂ ರಾಷ್ಟ್ರಗಳ ನಾಗರಿಕರಿಗೆ ಸುಭದ್ರತೆ ಒದಗಿಸಲು ನಾವಿಬ್ಬರೂ ಸಹಕಾರ ಒದಗಿಸಬೇಕಿದೆ. ಇದು ಸ್ಪಷ್ಟ ನಿರ್ಧಾರದಿಂದ ಮಾತ್ರ ಸಾಧ್ಯ ಎಂದು ಅವರು ನುಡಿದರು.

ಅವರಿಗೆ ನೀಡಿದ ಭವ್ಯ ಸ್ವಾಗತ, ಅಭೂತಪೂರ್ವ ಭದ್ರತೆ, ಎರಡು ವರ್ಷಗಳ ಹಿಂದಿನ ದಾಳಿಯ ಆಘಾತದಿಂದ ಹೊರಬಂದಿದ್ದನ್ನು ಶ್ಲಾಘಿಸಿದ ಒಬಾಮಾ, ಮುಂಬೈ ನಗರ ಒಂದು ಡೈನಾಮಿಕ್ ನಗರ, ಇದು ದೃಢವಿಶ್ವಾಸ, ಆಶಾವದ ಮತ್ತು ಶಕ್ತಿಯ ಸಂಕೇತ ಎಂದು ಹೊಗಳಿದರು. ಭಾಷಣಕ್ಕೂ ಮೊದಲು ಮುಂಬೈ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿ, ಎಡಚರಾಗಿರುವ ಒಬಾಮಾ ಗೆಸ್ಟ್ ಬುಕ್ಕಿನಲ್ಲಿ ಸಹಿ ಮಾಡಿದರು. ಬರಾಕ್ ಒಬಾಮಾ ಮತ್ತು ಮಿಷೆಲ್ ಒಬಾಮಾರನ್ನು ತಾಜ್ ಹೊಟೇಲಿನೆದುರಿಗೆ ತಾಜ್ ಗ್ರೂಪ್ ನ ಚೇರ್ಮನ್ ರತನ್ ಟಾಟಾ ಬರಮಾಡಿಕೊಂಡರು.

English news:
American President Barack Obama said that US and India stand together in the fight against global terror. The perpetrators of the 26/11 attacks should be punished. He also called the Hotel Taj, a major site of the 26/11 attacks, a symbol of the strength and resilience of the Indian people.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X