ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತರು ಇಲ್ಲಿ ಬ್ರಾಹ್ಮಣರಾಗುತ್ತಾರೆ!

By Mrutyunjaya Kalmat
|
Google Oneindia Kannada News

Dalits turn Brahmins
ತುಮಕೂರು, ಮಾ.22 : ಜಾತಿ ವ್ಯವಸ್ಥೆಗೆ ಸೆಡ್ಡು ಹೊಡೆದು ದಲಿತರು ಜನಿವಾರ ಧರಿಸುವ ಮೂಲಕ ಬ್ರಾಹ್ಮಣರಾಗುವ ವಿಶಿಷ್ಟ ಆಚರಣೆಯೊಂದು ಕುಣಿಗಲ್ ತಾಲ್ಲೂಕಿನ ಉಜ್ಜಿನಿ ಗ್ರಾಮದಲ್ಲಿ ಇಂದಿಗೂ ಸಹ ಮುಂದುವರೆದಿದೆ.

ಉಜ್ಜನಿ ಗ್ರಾಮದ ಜೌಡೇಶ್ವರಿ ಜಾತ್ರೆಗಾಗಿ ಕಂಬ ಹಾಕಲಾಗಿದ್ದು, ಕಂಬ ಹಾಕುತ್ತಿದ್ದಂತೆಯೇ ಆರು ಮಂದಿ ದಲಿತರು ಬ್ರಾಹ್ಮಣರಾಗಿ ಪರಿವರ್ತನೆ ಹೊಂದುತ್ತಾರೆ. ದಲಿತರು ಬ್ರಾಹ್ಮಣರಂತೆಯೇ ಜನಿವಾರ ಧರಿಸಿ ಬ್ರಾಹ್ಮಣರಂತೆ ಸಂಸ್ಕಾರ, ಕಟ್ಟು ಪಾಡುಗಳನ್ನು ಪಾಲಿಸಲು ಆರಂಭಿಸುತ್ತಾರೆ. ಈ ಆಚರಣೆ ಉಜ್ಜಿನಿ ಗ್ರಾಮದಲ್ಲಿ ಸುಮಾರು 8 ಶತಮಾನಗಳಿಂದಲೂ ಮುಂದುವರೆಸಿಕೊಂಡು ಬಂದಿದೆ. 21 ದಿನಗಳ ಕಾಲ ದಲಿತರ ಜನಾಂಗದ ಆರು ಮಂದಿ ಬ್ರಾಹ್ಮಣರಾಗಿರುತ್ತಾರೆ.

ಈ ಆರು ಜನಿವಾರ ಬ್ರಾಹ್ಮಣರು ಹೆಬ್ಬಾರಮ್ಮನಿಗೆ ಪೂಜೆ ಸಲ್ಲಿಸಿದ ನಂತರ ಇವರು ನೀಡಿದ ಪ್ರಸಾದವನ್ನು ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು, ಸ್ವೀಕರಿಸುತ್ತಾರೆ. ದಲಿತ ಜನಾಂಗ ಬ್ರಾಹ್ಮಣರಾಗಿ ಪರಿವರ್ತನೆಯಾಗದಿದ್ದರೆ ಈ ಗ್ರಾಮದಲ್ಲಿ ಚೌಡೇಶ್ವರಿ ಜಾತ್ರೆ ನಡೆಯುವುದಿಲ್ಲ.

ಹಿನ್ನೆಲೆ:
800 ವರ್ಷಗಳ ಹಿಂದೆ ಉಜ್ಜಿನಿ ಗ್ರಾಮದ ಬ್ರಾಹ್ಮಣ ಯುವತಿಯೊಬ್ಬಳನ್ನು ದಲಿತ ಯುವಕ ಬ್ರಾಹ್ಮಣನೆಂದು ಸುಳ್ಳು ಹೇಳಿ ಮದುವೆಯಾಗಿರುತ್ತಾನೆ. ಇವರ ದಾಂಪತ್ಯಕ್ಕೆ ಐದು ಮಂದಿ ಮಕ್ಕಳು ಜನಿಸಿರುತ್ತಾರೆ. ಆದರೆ, ಕೊನೆಗೊಂದು ದಿನ ಯುವತಿಗೆ ತಾನು ಮದುವೆಯಾಗಿರುವುದು ದಲಿತ ಯುವಕನನ್ನು ಎಂಬ ಸತ್ಯ ತಿಳಿಯುತ್ತಿದ್ದಂತೆಯೇ ಮನನೊಂದು ಅಗ್ನಿ ಪ್ರವೇಶ ಮಾಡುವ ನಿರ್ಧಾರ ಮಾಡುತ್ತಾಳೆ.

ಆಗ ಮಕ್ಕಳು ಮತ್ತು ಗಂಡನ ಮನವಿಯಿಂದಾಗಿ ತನ್ನ ಐದು ಮಂದಿ ಮಕ್ಕಳು ಜಾತ್ರೆ ಸಂದರ್ಭದಲ್ಲಿ ಬ್ರಾಹ್ಮಣರಾಗಿ ಪರಿವರ್ತನೆ ಹೊಂದಿ ನೀತಿ, ನಿಯಮ ಪಾಲಿಸಬೇಕೆಂದು ಶಾಪ ಕೊಡುತ್ತಾಳೆ. ಇದರಿಂದಾಗಿ 6 ಮಂದಿ ದಲಿತರು ಬ್ರಾಹ್ಮಣರಾಗಿ ಪರಿವರ್ತನೆ ಹೊಂದುತ್ತಾರೆ. 6 ಮಂದಿ ದಲಿತರು ಹೆಬ್ಬಾರಮ್ಮನ ಪ್ರತೀಕವನ್ನು ಹೊತ್ತು ಅಗ್ನಿ ಕುಂಡದ ಮೇಲೆ ನಡೆಯುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X