• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ಸಿಗೆ ದಲಿತರೆಂದರೆ ಮತ ಬ್ಯಾಂಕ್ ಅಷ್ಟೇ: ನಾರಾಯಣಸ್ವಾಮಿ

|

ಚಿಂಚೋಳಿ, ಮೇ 7: '70 ವರ್ಷಗಳಿಂದ ಕಾಂಗ್ರೆಸ್ ಪಕ್ಷದವರು ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ದಲಿತರು ಕಾಂಗ್ರೆಸ್ ಪಕ್ಷದಲ್ಲಿ ಜೀತದಾಳಿನ ಪರಿಸ್ಥಿತಿಯಲ್ಲಿದ್ದಾರೆ' ಎಂದು ಛಲವಾದಿ ಸಂಘಟನಾ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಚಿಂಚೋಳಿ ಪಟ್ಟಣದ ಚಂದಾಪುರದಲ್ಲಿ ಮಾಜಿ ಶಾಸಕ ಉಮೇಶ ಜಾಧವ ಅವರ ನಿವಾಸದಲ್ಲಿ ಮಂಗಳವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀತ ಪದ್ಧತಿ ಹೋಗಲಾಡಿಸುತ್ತೇವೆ ಎಂದು ಹೇಳುವ ಕಾಂಗ್ರೆಸ್ ಪಕ್ಷದಲ್ಲಿಯೇ ದಲಿತರು ಜೀತದಾಳಿನ ಪರಿಸ್ಥಿತಿಯಲ್ಲಿದ್ದಾರೆ ಎಂದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೆ ಅಲ್ಲಿ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡು ರಾಜಕೀಯ ಮಾಡುತ್ತಾರೆ ಹೊರತು ಅವರ ಅಭಿವೃದ್ಧಿಗಾಗಿ ಶ್ರಮಿಸುವುದಿಲ್ಲ. ಕಾಂಗ್ರೆಸ್ ನಲ್ಲಿ ದಲಿತರು ಜೀತ ಪದ್ಧತಿ ಇದ್ದ ಪರಿಸ್ಥಿಯನ್ನು ಕಂಡ ನಾನು ಎಲ್ಲಾ ಸಮುದಾಯದ ಅಭಿವೃದ್ದಿಗೆ ಶ್ರಮಿಸುವ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಜತೆಗೆ ಕಾಂಗ್ರೆಸ್‍ನಲ್ಲಿದ್ದ ನಮ್ಮ ಸಮುದಾಯದ ಜನರನ್ನು ಬಿಜೆಪಿ ತರಲಾಗುತ್ತಿದೆ ಎಂದರು.

ಹಾಗೆಯೇ ಉಮೇಶ ಜಾಧವ ಅವರು ಜೀತ ಪದ್ಧತಿಗೆ ಧಿಕ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಈಗ ಇಲ್ಲಿ ಉಪಚುನಾವಣೆಯಲ್ಲಿ ಅವರ ಪುತ್ರ ಅವಿನಾಶ ಜಾಧವ ಅವರಿಗೆ ಬಿಜೆಪಿ ಅಭ್ಯರ್ಥಿ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿನ ಜೀತ ಪದ್ಧತಿ ಹೋಗಲಾಡಿಸಲು ಹಾಗೂ ಚಿಂಚೋಳಿ ಕ್ಷೇತ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಅವರಿಗೆ ಹೆಚ್ಚಿನ ಮತಗಳು ನೀಡುವುದರ ಮೂಲಕ ಅಭಿವೃದ್ಧಿಗೆ ಮುಂದಾಗೋಣ ಎಂದರು.

ಹೈದರಬಾದ್ ಕರ್ನಾಟಕ ಹಿಂದುಳಿಯಲು ಖರ್ಗೆ ಕಾರಣ: ವಿ ಸೋಮಣ್ಣ

ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ ದಲಿತರು ಇದಕ್ಕೆ ಕಿವಿ ಕೊಡಬಾರದು ನರೇಂದ್ರ ಮೋದಿಯವರು ಇರುವವರೆಗೂ ಸಂವಿಧಾನ ಬದಲಾಗಲ್ಲ ಎಂದು ಖುದ್ದು ನರೇಂದ್ರ ಮೋದಿಯವರೆ ಹೇಳಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಲ್ಲ ಸಾಂದರ್ಭಿಕಾಗಿ ತಿದ್ದುಪಡಿ ಮಾಡುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಶಾಸಕರ ಮೇಲೆ ಕೆ.ಸಿ.ವೇಣುಗೋಪಾಲ್ ಅಸಮಾಧಾನ!

ಸಂವಿಧಾನ ಬಗ್ಗೆ ಗೌರವ ತೋರಿಸುವಂತೆ ನಾಟಕ ಮಾಡುವ ಕಾಂಗ್ರೆಸ್ ನವರು ಇಲ್ಲಿ ತನಕ ಸುಮಾರು 88 ಬಾರಿ ತಿದ್ದುಪಡಿ ಮಾಡಿದ್ದಾರೆ ಇದರ ಬಗ್ಗೆ ಮಾತನಾಡಲಿ ನೋಡೋಣ ಎಂದರು.

ಯತ್ನಾಳ್ ಜೋಕರ್, ಜಾಧವ್ ಗೋಮುಖವ್ಯಾಘ್ರ:ದಿನೇಶ್ ಗುಂಡೂರಾವ್ ವಾಗ್ದಾಳಿ

ಮುಖಂಡರಾದ ರವಿಚಂದ್ರ ಕಾಂತಿಕಾರ, ಅಂಬರಾವ ಅಸ್ಟಗಿ, ಆಕಾಶ ಕೊಳ್ಳೂರ, ನ್ಯಾಯವಾದಿ ಮಾಣಿಕರಾವ ಗುಲಗುಂಜಿ, ಮಹಾಂತೇಶ ಕಟ್ಟಿಮನಿ, ರಾಮಚಂದ್ರ ಜಾಧವ, ಶ್ರೀನಿವಾಸ ಇದಲಾಯಿ ಇದ್ದರು.

English summary
From past 70 years Congress party is using Dalits as vote banks said Chalavadi organisation state spokesperson Narayanaswamy. He was campaigning for Avinash Jadhav, BJP candidate of Chincholi By election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X