• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಶಾನ ಜಾಗಕ್ಕೆ ಆಗ್ರಹಿಸಿ ತಾಲೂಕು ಕಚೇರಿ ಮುಂದೆ ದಲಿತ ಕುಟುಂಬಗಳ ಅನಿರ್ದಿಷ್ಟಾವಧಿ ಪ್ರತಿಭಟನೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು,ನವೆಂಬರ್‌ 18: ಜಿಲ್ಲೆಯ ಅಜ್ಜಂಪುರ ತಾಲೂಕಿನ ದಲಿತ ಕುಟುಂಬಗಳು ತಮ್ಮ ಸಮುದಾಯದವರಿಗೆ ಸ್ಮಶಾನದ ಜಾಗ ಗುರುತು ಮಾಡದ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ.

ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಸಮೀಪದ ಎ.ಕೆ.ಕಾಲೋನಿಯ ದಲಿತ ಸಮುದಾಯಕ್ಕೆ ಈವರೆಗೂ ಸ್ಮಶಾನದ ಜಾಗ ನಿಗದಿ ಮಾಡಿರಲಿಲ್ಲ. ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅಂತ್ಯಸಂಸ್ಕಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಹೀಗಾಗಿ ಎ.ಕೆ.ಕಾಲೋನಿಯ ದಲಿತ ಕುಟುಂಬಗಳು ಅಜ್ಜಂಪುರ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಹತ್ತಾರು ವರ್ಷಗಳಿಂದ ದಲಿತರಿಗೆ ಸರ್ಕಾರ ಸ್ಮಶಾನದ ಜಾಗ ಗುರುತು ಮಾಡಿಕೊಟ್ಟಿಲ್ಲ. ಹಲವು ವರ್ಷಗಳಿಂದ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ದಲಿತ ಕುಟುಂಬಗಳು ಅಜ್ಜಂಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಕೂತು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪ್ರತಿಭಟನೆಗೆ ಕುಳಿತ ದಲಿತ ಕುಟುಂಬಗಳು ಸರ್ಕಾರ ಸ್ಮಶಾನದ ಜಾಗ ನೀಡುವವರೆಗೂ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆಯೇ ಎರಡು ಕಡೆ ಜಾಗ ಗುರುತು ಮಾಡಿದ್ದರು. ಆದರೆ, ಯಾವ ಅಧಿಕಾರಿಯೂ ಸ್ಥಳ ಪರಿಶೀಲನೆ ಮಾಡದೆ ಕಾಲ ಹರಣ ಮಾಡಿದ್ದಾರೆ. ದಲಿತ ಸಮುದಾಯದಲ್ಲಿ ಯಾರಾದರೂ ಸಾವಿಗೀಡಾದರೆ ಮಣ್ಣು ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಕೂಡಲೇ ಅಧಿಕಾರಿಗಳು ಸ್ಮಶಾನದ ಜಾಗ ಮಂಜೂರು ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಶಾಲೆಗೆ ತೆರಳಿದ್ದ ಏಳನೇ ತರಗತಿ ವಿದ್ಯಾರ್ಥಿನಿ ನಿಗೂಢ ನಾಪತ್ತೆ

ಹಾಸನ: ಶಾಲೆಗೆ ತೆರಳಿದ್ದ ಏಳನೇ ತರಗತಿ ವಿದ್ಯಾರ್ಥಿನಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದಲ್ಲಿ ನಡೆದಿದೆ.

Dalit Families Protest In front Of Ajjampura Taluk Office For Demanding Graveyard Space

ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ನಿವಾಸಿ ಕುಮಾರ್ ದಂಪತಿ ಸಾಕುಮಗಳು ನಂದಿತಾ(13) ಕಾಣೆಯಾದ ಬಾಲಕಿ ಎಂದು ಗುರುತಿಸಲಾಗಿದೆ. ಅಣತಿ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ನೆಲೆಸಿದ್ದ ವಿದ್ಯಾರ್ಥಿನಿ ನವೆಂಬರ್ 7ರ ಸಂಜೆ 4 ಗಂಟೆಗೆ ಶಾಲೆ ಮುಗಿಸಿ ವಾಪಸ್‌ ಆಗುವ ವೇಳೆ ನಾಪತ್ತೆಯಾಗಿದ್ದಾಗಿದ್ದಾಳೆ.

ಇನ್ನು ಅಣತಿ ಗ್ರಾಮದ ಗಿರೀಶ್ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದಿರುವ ಬಗ್ಗೆ ಪೋಷಕರ ದೂರು ದಾಖಲಿಸಿದ್ದಾರೆ. ಕುಮಾರ್ ದಂಪತಿ ತಮಗೆ ಮಕ್ಕಳಿಲ್ಲದ ಕಾರಣ ಸಂಬಂಧಿಕರ ಮಗಳನ್ನು ದತ್ತು ಪಡೆದು ಸಾಕಿಕೊಂಡಿದ್ದರು. ಇದೀಗ ಮಗಳ ನಿಗೂಢ ನಾಪತ್ತೆಯಿಂದ ಪೋಷಕರು ಆತಂಕಗೊಂಡಿದ್ದಾರೆ. ಘಟನೆ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Dalit families protest in front of Ajjampura taluk office for demanding graveyard space and 7th standard student missing in Hassan district Channarayapatna news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X