Adani: ಸೌರ ಕ್ಷೇತ್ರದಲ್ಲಿ ಭಾರತದ ಸಾಧನೆ; ವಿಶ್ವದ 6ನೇ ಅತಿದೊಡ್ಡ ತಯಾರಕನಾಗಿ ಅದಾನಿ ಸೋಲಾರ್ ಕಂಪನಿ
ನವದೆಹಲಿ: ಅದಾನಿ ಸಮೂಹದ ಪ್ರಮುಖ ಸೋಲಾರ್ ಕಂಪನಿಯು ಜಾಗತಿಕವಾಗಿ 'ವುಡ್ ಮೆಕೆಂಜಿಯ 2026'ರ ಸೋಲಾರ್ ಫೋಟೊವೋಲ್ಟಾಯಿಕ್ (ಪಿವಿ) ಮಾಡ್ಯೂಲ್ ಉತ್ಪಾದಕರ ಶ್ರೇಯಾಂಕದಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಈ ಉತ್ಪಾದಕರ ಪಟ್ಟಿಯಲ್ಲಿ ಪಟ್ಟ ಗಿಟ್ಟಿಸಿಕೊಂಡ ಭಾರತದ ಮೊದಲ ಮತ್ತು ಏಕೈಕ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದೇ ಪಟ್ಟಿಯಲ್ಲಿ ವರ್ಷಗಳ ಹಿಂದೆ ಕಂಪನಿಯು ಎಂಟನೇ ಸ್ಥಾನದಲ್ಲಿತ್ತು, ಇದೀಗ ಕಂಪನಿಯು ಇದೀಗ ಆರನೇ ಸ್ಥಾನಕ್ಕೆ ಏರಿದೆ.
48 ಸೋಲಾರ್ ಮಾಡ್ಯೂಲ್ ತಯಾರಕರನ್ನು ವಿಶ್ಲೇಷಿಸಿ ವುಡ್ ಮೆಕೆಂಜಿ ಪ್ರಸಕ್ತ ವರ್ಷದ ಸಮೀಕ್ಷೆಯನ್ನು ಪ್ರಕಟಿಸಿದೆ. ಉತ್ಪಾದನಾ ಸಾಮರ್ಥ್ಯ, ತಂತ್ರಜ್ಞಾನದ ಪ್ರಬುದ್ಧತೆ, ಆರ್ಥಿಕ ಕಾರ್ಯಕ್ಷಮತೆ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳಂತಹ ಮಾನದಂಡಗಳ ಆಧಾರದ ಮೇಲೆ ಅದಾನಿ ಸೋಲಾರ್‌ಗೆ 'ಗ್ರೇಡ್ ಎ' ಶ್ರೇಯಾಂಕ ನೀಡಲಾಗಿದೆ. ಈ ಪಟ್ಟಿಯಲ್ಲಿ ಚೀನಾದ ಕಂಪನಿಗಳು ಅಗ್ರ ಆರು ಸ್ಥಾನಗಳನ್ನು ಕಾಯ್ದುಕೊಂಡಿವೆ.

ಉತ್ಪಾದನಾ ಸಾಮರ್ಥ್ಯದಲ್ಲಿ ಭಾರೀ ಬೆಳವಣಿಗೆ
ಭಾರತವು ದೇಶೀಯ ಸೋಲಾರ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2014ರಲ್ಲಿ 2.5 ಗಿಗಾವ್ಯಾಟ್ (GW) ಗಿಂತ ಕಡಿಮೆಯಿದ್ದ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು 2026ರ ವೇಳೆಗೆ 170 ಗಿಗಾವ್ಯಾಟ್ ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ದೇಶೀಯ ಸೋಲಾರ್ ಸೆಲ್ ಉತ್ಪಾದನಾ ಸಾಮರ್ಥ್ಯವು 27 ಗಿಗಾವ್ಯಾಟ್ ತಲುಪಿದೆ. ದೇಶದಲ್ಲಿ ಸೋಲಾರ್ ಮಾಡ್ಯೂಲ್ ತಯಾರಿಸುವ ಕಂಪನಿಗಳ ಸಂಖ್ಯೆ 2021ರಲ್ಲಿ 21 ಇದ್ದದ್ದು, ಇಂದು ಸುಮಾರು 100ಕ್ಕೆ ಹೆಚ್ಚಾಗಿದೆ.
ಅದಾನಿ ಸೋಲಾರ್ ತನ್ನ ಗುಜರಾತ್‌ನ ಮುಂದ್ರಾದಲ್ಲಿರುವ ಸಂಯೋಜಿತ ಉತ್ಪಾದನಾ ಸೌಲಭ್ಯವನ್ನು 10 ಗಿಗಾವ್ಯಾಟ್ ವಾರ್ಷಿಕ ಸಾಮರ್ಥ್ಯಕ್ಕೆ ವಿಸ್ತರಿಸುವ ಹಂತದಲ್ಲಿದೆ. ಕಂಪನಿಯು ಸದ್ಯ 2 ಗಿಗಾವ್ಯಾಟ್ ಇಂಗೋಟ್ ಮತ್ತು ವೇಫರ್ ಸಾಮರ್ಥ್ಯದೊಂದಿಗೆ, ತಲಾ 4 ಗಿಗಾವ್ಯಾಟ್ ಸೌರಕೋಶ ಮತ್ತು ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ನಿರ್ವಹಿಸುತ್ತಿದೆ. ಇಂಗೋಟ್‌ಗಳು, ವೇಫರ್‌ಗಳು, ಸೋಲಾರ್ ಸೆಲ್‌ಗಳು ಮತ್ತು ಅಂತಿಮ ಮಾಡ್ಯೂಲ್‌ಗಳನ್ನು ಒಳಗೊಂಡ ಸಮಗ್ರ ಕಾರ್ಯಾಚರಣೆಯನ್ನು ಅದಾನಿ ಸೋಲಾರ್ ಹೊಂದಿದೆ. ಬ್ಲೂಮ್‌ಬರ್ಗ್‌ಎನ್‌ಇಎಫ್ (BloombergNEF) ತನ್ನ 2026ರ ಎರಡನೇ ತ್ರೈಮಾಸಿಕದಲ್ಲಿ ಕಂಪನಿಯನ್ನು 'ಟಿಯರ್-1' ತಯಾರಕ ಎಂದು ಗುರುತಿಸಿದೆ.
ವುಡ್ ಮೆಕೆಂಜಿಯವರ ವರದಿಯ ಪ್ರಕಾರ, ಚೀನಾದ ತಯಾರಕರು ಜಾಗತಿಕ ಶ್ರೇಯಾಂಕದಲ್ಲಿ ಪ್ರಾಬಲ್ಯ ಮುಂದುವರಿಸಿದ್ದರೂ, ಭಾರತ, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರದ ಕಂಪನಿಗಳು ಜಾಗತಿಕವಾಗಿ ಮಾರುಕಟ್ಟೆಯನ್ನು ವೈವಿಧ್ಯಗೊಳಿಸುವಲ್ಲಿ ಪ್ರಮುಖ ಕೊಡುಗೆ ನೀಡುತ್ತಿವೆ. ಭಾರತವು ಕಳೆದ ವರ್ಷ ಅಮೆರಿಕವನ್ನು ಹಿಂದಿಕ್ಕಿ, ವಾರ್ಷಿಕ ಸೋಲಾರ್ ಸಾಮರ್ಥ್ಯ ಹೆಚ್ಚಳದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿ ಹೊರ ಹೊಮ್ಮಿದೆ. ದೇಶದಲ್ಲಿ ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವು 155 ಗಿಗಾವ್ಯಾಟ್ ಗಡಿ ದಾಟಿಸಿದೆ.
ಅದಾನಿ ಕಂಪನಿಯು ಸೌಶಕ್ತಿ, ಪವನ ವಿದ್ಯುತ್ ಉತ್ಪಾದನೆಯಲ್ಲಿ ಭಾರತಾದ್ಯಂತ ಅಪಾರ ಹೂಡಿಕೆ ಮಾಡಿದೆ. ವಾರ್ಷಿಕ ಇಂತಿಷ್ಟು ಗುರಿ ಹಾಕಿಕೊಂಡು ಅದನ್ನು ಸಾಧಿಸುವತ್ತ ನಿರತವಾಗಿದೆ.












Click it and Unblock the Notifications