ದಲಿತರ ಬಿಬಿಎಂಪಿ ಅಧಿಕಾರಿಗಳ ಆಕ್ರಮಣ: ಮೇಯರ್ ಗೆ ದೂರು

ಬೆಂಗಳೂರು ಡಿಸೆಂಬರ್ 20: ಕೃಷ್ಣರಾಜಪುರಂ ವಿಧಾನಸಭಾ ಕ್ಷೇತ್ರದ ವಿಜ್ಞಾನ ನಗರ ವಾರ್ಡ್ ವ್ಯಾಪ್ತಿಯ ಬಸವ ನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ದಲಿತರಿಗೆ ಸೇರಿದ ಆಸ್ತಿಯೊಂದರ ಮೇಲೆ ನಗರಸಭಾ ಸದಸ್ಯ ಮತ್ತವರ ಪಟಾಲಂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಅತಿಕ್ರಮಣ ನಡೆಸಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇಂದು ಬಿಬಿಎಂಪಿ ಮುಖ್ಯ ಕಚೇರಿಯ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಬಿಬಿಎಂಪಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ ವೆಂಕಟಸ್ವಾಮಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಮುಖಂಡರುಗಳೂ ಭಾಗವಹಿಸಿದ್ದರು.

ಎಸ್ ಮನೋಹರ್ ಎಂಬ ದಲಿತ ಮುಖಂಡರಿಗೆ ಸೇರಿದ ಸದರಿ ಜಮೀನಿಗೆ ಬಿಬಿಎಂಫಿ ಅಧಿಕಾರಿಗಳು ರಾಜಕಾಲೂವೆ ಮತ್ತು ಈ ಆಸ್ತಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ದಲಿತರ ಆಸ್ತಿಯೆನ್ನುವ ಏಕೈಕ ಕಾರಣಕ್ಕೆ ಈ ಆಕ್ರಮಣ ನಡೆಸಲಾಗಿದೆ ಎಂದರು ಆರೋಪಿಸಿದರು.

BBMP member torture on Dalits Basavanagar, KR Puram condemned

ರಾಜಕಾಲುವೆ ಮೇಲೆ ನಿರ್ಮಿಸಿರುವ ಇತರ ಕಟ್ಟಡಗಳನ್ನು ಹೊರತುಪಡಿಸಿ ಈ ದಲಿತರ ಆಸ್ತಿಗೆ ನುಗ್ಗಿ ಎಸ್ ಮನೋಹರ್ ಅವರಿಂದ ಲಕ್ಷಾಂತರ ಹಣ ವಸೂಲಿ ಮಾಡುವ ಹುನ್ನಾರ ನಡೆಸಲಾಗಿದೆ. ರಾಜಕಾಲುವೆಯ ಮೂಲ ಹೊರತಪಡಿಸಿ ಹೊಸದಾಗಿ ಸದರಿ ಭೂಮಿಯ ಮೇಲೆ ಮಾರ್ಕ್ ಮಾಡಿ ದಲಿತರ ಆಸ್ತಿಯನ್ನು ನಾಶಪಡಿಸಲಾಗಿದೆ.

ಈ ಅತಿಕ್ರಮಣ ನಡೆಸಿರುವ ಬಿಬಿಎಂಪಿ ಅಧಿಕಾರಿಗಳಾದ ಸಹಾಯಕ ಇಂಜಿನೀಯರ್ ಮಲ್ಲಿಕಾರ್ಜುನ್ ಮತ್ತು ರಘು ಇವರನ್ನು ಈ ಕೂಡಲೇ ಸೇವೆಯಿಂತ ಅಮಾನತ್ತುಗೊಳಿಸಿ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ದೂರಿನ ಅನ್ವಯ ಬಂಧಿಸಿ ಜೈಲಿಗೆ ಹಾಕಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ. ಇಲ್ಲವಾದರೆ ನಮ್ಮ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+