ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ಬರೆ ಹಾಕಿದ ಲಾಲು

By Staff
|
Google Oneindia Kannada News

Lalu slams Rahul
ರಾಮಪುರ್, (ಉತ್ತರ ಪ್ರದೇಶ), ಮೇ. 11 : ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತ್ಯಾತೀತ ವ್ಯಕ್ತಿ ಎಂದು ಪ್ರಮಾಣಪತ್ರ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಲೂಧಿಯಾನಾದಲ್ಲಿ ನಡೆದ ಎನ್ ಡಿಎ ಸಮಾವೇಶದಲ್ಲಿ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡ ನಿತೀಶ್ ಕುಮಾರ್ ಜಾತ್ಯಾತೀತ ವ್ಯಕ್ತಿಯೇ ಎಂದು ಲೇವಡಿ ಮಾಡಿದರು.

ನಿತೀಶ್ ಕುಮಾರ್ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅಂತಹ ವ್ಯಕ್ತಿಯನ್ನು ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಪ್ರಶಂಸನೀಯವಾಗಿ ಮಾತನಾಡಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ ಲಾಲು, ಕೋಮುಶಕ್ತಿಗಳೊಂದಿಗೆ ಗುರುತಿಸಿಕೊಂಡಿರುವ ನಿತೀಶ್ ಕುಮಾರ್ ಜಾತ್ಯಾತೀತ ವ್ಯಕ್ತಿ ಆಗಲು ಹೇಗೆ ಸಾಧ್ಯ ಎಂದರು.

ಉತ್ತರ ಪ್ರದೇಶದ ರಾಮಪುರ್ ಲೋಕಸಭೆ ಕ್ಷೇತ್ರಕ್ಕೆ ಪ್ರಚಾರಕ್ಕೆ ತೆರಳುತ್ತಿದ್ದ ಸಮಯದಲ್ಲಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ನಿತೀಶ್ ಕುಮಾರ್ ಸರಳ ವ್ಯಕ್ತಿಯಲ್ಲ. ನಂಬಲರ್ಹ ವ್ಯಕ್ತಿಯೂ ಅಲ್ಲ. ಅಂಥ ಮುಖಂಡರ ಮೇಲೆ ನಂಬಿಕೆ ಇಡುವುದು ಎಷ್ಟು ಸರಿ. ಕಾಂಗ್ರೆಸ್ ಪಕ್ಷದ ನಾಯಕರಿಗೆ ನಿತೀಶ್ ಕುಮಾರ್ ಸರಿಯಾಗಿ ಬುದ್ದಿ ಕಲಿಸಿದ್ದಾರೆ ಎಂದು ಲಾಲು ಟೀಕಿಸಿದರು.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಎನ್ ಡಿಎ ಸಮಾವೇಶದಲ್ಲಿ ಪಾಲ್ಗೊಳ್ಳಲು ನಿತೀಶ್ ಕುಮಾರ್ ನಿರಾಕರಿಸಿದ್ದರು. ನರೇಂದ್ರ ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನಿತೀಶ್ ಕುಮಾರ್ ಅವರನ್ನು ತನ್ನತ್ತ ಸೆಳೆದುಕೊಳ್ಳಲು ತಂತ್ರ ರೂಪಿಸಿತ್ತು. ಅದರ ಭಾಗವಾಗಿ ರಾಹುಲ್ ಪತ್ರಿಕಾಗೋಷ್ಠಿ ಕರೆದು ನಿತೀಶ್ ಕುಮಾರ್ ಅವರನ್ನು ಮನಬಂದಂತೆ ಹೊಗಳಿದ್ದರು. ಇದು ಲಾಲು ಅವರ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಮೊದಲೇ ಬಿಹಾರದಲ್ಲಿ ತನ್ನ ವಿರುದ್ಧ ಅಭ್ಯರ್ಥಿ ನಿಲ್ಲಿಸಿದ್ದ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ಲಾಲು, ರಾಹುಲ್ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು. ಈವರೆಗಿನ ಸಿಟ್ಟನ್ನು ಲಾಲು ಇಂದು ತೀರಿಸಿಕೊಂಡಂತಾಯಿತು.

(ಏಜೆನ್ಸೀಸ್)

ಎನ್ ಡಿಎ ಬಿಡಲ್ಲ. ಯುಪಿಎ ಸೇರಲ್ಲ, ನಿತೀಶ್
ನಿತೀಶ್ ವಿರುದ್ಧದ ಹೇಳಿಕೆಗೆ ಬೆಲೆತೆತ್ತ ಮೊಯ್ಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X