Rahul Gadhi: ಮೆಗಾ ರೋಡ್ ಶೋ ಬಳಿಕ ವಯನಾಡ್ ಅಭ್ಯರ್ಥಿ 'ರಾಗಾ' ನಾಮಪತ್ರ ಸಲ್ಲಿಕೆ
ನವದೆಹಲಿ, ಏಪ್ರಿಲ್ 03: ಬೃಹತ್ ರೋಡ್ ಶೋ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಸಂಸದ ಮತ್ತು ಅಭ್ಯರ್ಥಿ ರಾಹುಲ್ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸಿದರು.
ಪ್ರಸಕ್ತ ಲೋಸಕಭಾ ಚುನಾವಣೆಯಲ್ಲಿ ಕೇರಳದ ವಯನಾಡ್ ಕ್ಷೇತ್ರದಿಂದ ಕಣಕ್ಕಿಳಿದಿರುವ ರಾಹುಲ್ ಗಾಂಧಿ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಕ್ಷೇತ್ರದಾದ್ಯಂತ ಮೆಗಾ ರೋಡ್ ಶೋ ನಡೆಸಿದರು. ನಾಮಪತ್ರ ಸಲ್ಲಿಕೆ ವೇಳೆ ಸಹೋದರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಸಾಥ್ ನೀಡಿದರು.

ಏಳು ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯ
ಕಳೆದ ಬಾರಿ ರಾಹುಲ್ ಗಾಂಧಿ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಇದೇ ವಯನಾಡ್ ಕ್ಷೇತ್ರದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ರಾಹುಲ್ ಗಾಂಧಿ ವಯನಾಡ್‌ನಲ್ಲಿನ ಮುಪ್ಪೈನಾಡ್ ಗ್ರಾಮಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ, ಕಲ್ಪೆಟ್ಟಾ ತನಕ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿದರು. ಅಲ್ಲಿಂದ ಮೆಗಾ ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರ ಜೊತೆಗೆ ರಾಹುಲ್ ಗಾಂಧಿ ಪ್ರಚಾರ ನಡೆಸಿದರು.
ವಯನಾಡಿಗೆ ಬರುತ್ತಿದ್ದಂತೆ ರಾಹುಲ್ ಗಾಂಧಿಯವರುನ್ನು ಯುಡಿಎಫ್ ಮುಖಂಡರು ಮತ್ತು ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು ಕಲ್ಪೆಟ್ಟಾದಲ್ಲಿ ಸ್ವಾಗತಿಸಿದರು. ಸಹೋದರಿ ಪ್ರಿಯಾಂಕಾ ಗಾಂಧಿ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.
ಹೆಲಿಕಾಪ್ಟರ್ ಮೂಲಕ ಬಂದಿಳಿದ 'ರಾಗಾ'
ಹೆಲಿಕಾಪ್ಟರ್‌ನಲ್ಲಿ ಇಂದು ಬೆಳಗ್ಗೆ 10.30ರ ಸುಮಾರಿಗೆ ಕಣ್ಣೂರಿನಿಂದ ವಯನಾಡಿನ ವಯಾನಂದ್ ಗ್ರಾಮ ಮುಪ್ಪೈನಾಡ್‌ನಲ್ಲಿರುವ ಹೆಲಿಪ್ಯಾಡ್ ಗೆ ಬಂದಿಳಿದರು. ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಹೆಲಿಪ್ಯಾಡ್ ಸುತ್ತಮುತ್ತ ಬೆಳಗ್ಗೆಯಿಂದಲೇ ಕಾಯುತ್ತಿದ್ದರು.

ಅಲ್ಲಿಂದ ರಸ್ತೆಯ ಮೂಲಕ ಕಲ್ಪೆಟ್ಟಾ ಹೊಸ ಬಸ್ ನಿಲ್ದಾಣಕ್ಕೆ ಪ್ರಯಾಣಿಸಿದರು, ಬೆಳಗ್ಗೆ 11.30 ರಾಹುಲ್ ಗಾಂಧಿಯವರ ರೋಡ್ ಆರಂಭವಾಯಿತು. ನೂರಾರು ಯುಡಿಎಫ್ ಕಾರ್ಯಕರ್ತರು ರೋಡ್‌ಶೋಗೆ ಸಾಲುಗಟ್ಟಿ ನಿಂತಿದ್ದರು. ತೆರೆದ ವಾಹನದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರು ಕೈ ಬೀಸುತ್ತಾರೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
'ರಾಗಾ' ಪರ 'ಮೋದಿ' ವಿರುದ್ಧ ಘೋಷಣೆ
ರಸ್ತೆ ಬದಿ ಸೇರಿದ್ದ ಸಾವಿರಾರು ಜನರತ್ತ ರಾಹುಲ್ ಗಾಂಧಿಯವರು ಕೈ ಬೀಸುತ್ತಾ ಸಾಗಿದರು. ಅಭಿಮಾನಿಗಳು ರಾಹುಲ್ ಗಾಂಧಿ ಪರ ಘೋಷಣೆ ಕೂಗಿದರು. ಜೊತೆಗೆ 'ಡೌನ್ ಡೌನ್ ನರೇಂದ್ರ ಮೋದಿ' ಅಂತಲೂ ಘೋಷಣೆ ಕೂಗಿದ್ದು ಕೇಳಿ ಬಂತು.
ಮೆರವಣಿಗೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್, ದೀಪಾ ದಾಸ್, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಎಐಸಿಸಿ ಉಸ್ತುವಾರಿ ಕನ್ಹಯ್ಯಾ ಕುಮಾರ್, ಕೆಪಿಸಿಸಿ ಹಂಗಾಮಿ ಅಧ್ಯಕ್ಷ ಎಂಎಂ ಹಾಸನ್ ರಾಹುಲ್ ಗಾಂಧಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮತ್ತಿತರು ಮುಖಂಡರು ಜೊತೆಗೆ ಇದ್ದರು.
ವಯನಾಡ್‌ನಲ್ಲಿ 2019ರ ಚುನಾವಣೆಯಲ್ಲಿ ಇದೇ ರಾಹುಲ್ ಗಾಂಧಿಯವರು ಒಟ್ಟು 7,06,367 ಮತ ಗಳಿಸುವ ಮೂಲಕ ಪ್ರತಿಸ್ಪರ್ಧಿ ಸಿಪಿಐ ಅಭ್ಯರ್ಥಿಯನ್ನು ಸೋಲಿಸಿದರು. ಕೇರಳದಲ್ಲಿ ವಯನಾಡ್ ಕ್ಷೇತ್ರಕ್ಕೂ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ.












Click it and Unblock the Notifications