ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಬಿಜೆಪಿಗೆ ಮಾದರಿ, ದಿಲ್ಲೀಲೂ ಗೃಹಲಕ್ಷ್ಮಿ ಮಾದರಿ ಸ್ಕೀಂ

ನವದೆಹಲಿ: ಕರ್ನಾಟಕದಲ್ಲಿ ಐದು ಗ್ಯಾರಂಟಿ ಸ್ಕೀಂ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, ಎಲ್ಲವನ್ನೂ ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿದೆ. ಸದಾ ಒಂದಲ್ಲೊಂದು ರೀತಿ ಈ ಯೋಜನೆಗಳನ್ನು ಪ್ರತಿಪಕ್ಷ ಬಿಜೆಪಿ ವಿರೋಧಿಸುತ್ತಲೇ ಇದೆ. ಆದರೆ, ಈ ಯೋಜನೆಗಳು ಬಿಜೆಪಿ ಆಧಿಕಾರದಲ್ಲಿರೋ ಬೇರೆ ರಾಜ್ಯಗಳಿಗೂ ಮಾದರಿಯಾಗಿದ್ದು, ಇದೀಗ ಬಿಜೆಪಿ ಆಡಳಿತ ಇರೋ ಮುಖ್ಯಮಂತ್ರಿ ರೇಖಾ ಗುಪ್ತಾ ಸರಕಾರವೂ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ಹೊಸದೊಂದು ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಕರ್ನಾಟಕದಲ್ಲಿ ಅರ್ಹ ಗೃಹಿಣಿಯರಿಗೆ 2 ಸಾವಿರ ರೂ. ನೀಡಿದರೆ, ದೆಹಲಿಯಲ್ಲಿ 2500 ರೂ. ನೀಡಲಾಗುತ್ತಿದ್ದು, ಉಳಿತಾಯ ಮಾಡಲೂ ಪ್ರೇರೇಪಿಸುತ್ತಿದೆ.

ಮಹಿಳೆಯರಿಗೆ ಆರ್ಥಿಕ ಬೆಂಬಲದ ಜೊತೆಗೆ ಉಳಿತಾಯವನ್ನೂ ಪ್ರೋತ್ಸಾಹಿಸಲು ಗೃಹಲಕ್ಷ್ಮಿ ಮಾದರಿ ಸ್ಕೀಂ ಜಾರಿಗೊಳಿಸಲು ದೆಹಲಿ ಸರಕಾರ ಸಜ್ಜಾಗಿದೆ. 'ದೆಹಲಿ ಲಕ್ಷ್ಮಿ' ಯೋಜನೆ ಎಂದು ಕರೆಯಲ್ಪಡುವ ಈ ಸ್ಕೀಂ ಮುಂದಿನ ತಿಂಗಳು ರಕ್ಷಾಬಂಧನದ ವೇಳೆ ಜಾರಿಗೊಳ್ಳುವ ನಿರೀಕ್ಷೆ ಇದ್ದು, ಸುಮಾರು 21ರಿಂದ 60 ವರ್ಷದ ಅರ್ಹ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಈ ಮೊದಲಿದ್ದ ಸಮೃದ್ಧಿ ಯೋಜನೆಯ ಹೊಸ ವಿಧಾನ ಇದಾಗಲಿದೆ.

Karnataka

ದಿಲ್ಲಿಯಲ್ಲಿಯೇ ಕಳೆದ ಹತ್ತು ವರ್ಷಗಳಿಂದ ವಾಸಿಸುತ್ತಿರುವವರನ್ನು ಅರ್ಹರೆಂದು ಗುರುತಿಸಲಾಗುತ್ತಿದೆ. 2500 ರೂ. ನೀಡಿದರೂ ಮಹಿಳೆಯರು ಕೇವಲ ಸಾವಿರ ರೂ. ಮಾತ್ರ ವಿತ್ ಡ್ರಾ ಮಾಡಬಹುದಾಗಿದ್ದು, ಉಳಿದ ಮೊತ್ತ ಅಂದ್ರೆ 1,500 ರೂ ಆರ್ಡಿ ಖಾತೆಗೆ ಜಮಾ ಆಗಲಿದೆ. ಆರ್‌ಡಿ ಖಾತೆಗೆ ಹೋಗುವ ಮೊತ್ತ ಮೂರು ವರ್ಷಗಳ ನಂತರ ಬಡ್ಡಿ ಸಮೇತ ಫಲಾನುಭವಿಗಳ ಖಾತೆಗೆ ಸಂದಾಯವಾಗಿದೆ.

ದೆಹಲಿ ಬಿಜೆಪಿ ಸರಾಕರದ ಈ ಯೋಜನೆ ಕೇವಲ ಮಹಿಳೆಯರ ಕೈಗೆ ದುಡ್ಡು ಕೊಡುವುದನ್ನು ಮಾತ್ರವಲ್ಲ, ಬದಲಾಗಿ ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡುವುದನ್ನೂ ಪ್ರೋತ್ಸಾಹಿಸಲಿದೆ. ಈಗಾಗಲೇ ಇಂಥದ್ದೇ ಬೇರೆ ಯೋಜನೆಗಳ ಫಲಾನುಭವಿಗಳಾಗಿದ್ದು, ಆದಾಯ ತೆರಿಗೆ ಕಟ್ಟುತ್ತಿರುವವರು, ಪೆನ್ಷನ್ ಪಡೆಯುತ್ತಿರುವವರು, ಕುಟುಂಬದಲ್ಲಿ ನಾಲ್ಕು ಚಕ್ರ ವಾಹನವಿದ್ದರೆ, ಸರಕಾರಿ ನೌಕರರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಕುಟುಂಬದಲ್ಲಿ ಯಾರಾದಾರೂ ಅಪರಾಧಿಗಳಾಗಿದ್ದರೆ, ವಾರ್ಷಿಕ ಆದಾಯ 2.5 ಲಕ್ಷಕ್ಕಿಂತಲೂ ಮೀರಿದ್ದರೂ ದಿಲ್ಲಿ ಲಕ್ಷ್ಮಿ ಯೋಜನೆಗೆ ಕುಟುಂಬರ ಹಿರಿಯ ಸದಸ್ಯೆ ಅರ್ಹರಾಗಿರುವುದಿಲ್ಲ.

ಮಹಾರಾಷ್ಟ್ರ ಬಿಜೆಪಿ ಸರಕಾರದಲ್ಲೂ ಇಂಥದ್ದೇ ಯೋಜನೆ

ಕರ್ನಾಟಕದ ಜನಪ್ರಿಯ ಗೃಹಲಕ್ಷ್ಮಿ ಯೋಜನೆಯಂತೆ ಮಹಾರಾಷ್ಟ್ರ ಬಿಜೆಪಿ ಸರಕಾರವೂ ಲಡ್ಕಿ ಬಹಿನ್ ಯೋಜನೆಯನ್ನು ಜಾರಿಗೊಳಿಸಿದೆ. ಇದರಡಿಯಲ್ಲಿ 21 ವರ್ಷದಿಂದ 65 ವರ್ಷದ ಅರ್ಹ ಮಹಿಳೆಯರು ತಿಂಗಳಿಗೆ 1,500 ರೂ ಆರ್ಥಿಕ ಸಹಾಯ ಪಡೆಯಲಿದ್ದಾರೆ. ಜುಲೈ 2024ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಂತರ ಈ ಯೋಜನೆ ಜಾರಿಗೊಂಡಿದ್ದು, ಕಳೆದ ತಿಂಗಳು ಅರ್ಹರಿಗೆ ಮಾತ್ರ ಯೋಜನೆ ತಲುಪುವಂತೆ ಇ-ಕೆವೈಸಿ ಕಡ್ಡಾಯ ಮಾಡಿತ್ತು. ಆಗ ಸಾವಿರಾರು ಸಂಖ್ಯೆಯಲ್ಲಿ ಪುರುಷರೂ ಈ ಯೋಜನೆಯ ಫಲಾನುಭವಿಗಳಾಗಿದ್ದು ಬೆಳಕಿಗೆ ಬಂದಿತ್ತು. ತೆರಿಗೆ ಕಟ್ಟುವವರೂ ಈ ಯೋಜನೆಯ ಲಾಭ ಪಡೆದಿದ್ದರು. ಒಟ್ಟಾರೆ ಸುಮಾರು 9 ದಶಲಕ್ಷ ಮಂದಿ ಈ ಯೋಜನೆಗೆ ಅನರ್ಹರೆಂದು ಮಹಾ ಸರಕಾರ ಇತ್ತೀಚೆಗೆ ಗುರುತಿಸಿದೆ.

ಪ್ರತಿಪಕ್ಷಗಳ ವಿರೋಧ

ಕರ್ನಾಟಕದಲ್ಲಿಯೂ ಮಹಾರಾಷ್ಟ್ರ ಸರಕಾರದಂತೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಹರನ್ನು ಗುರುತಿಸಲು ಇ-ಕೆವೈಸಿ ಕಡ್ಡಾಯಗೊಳಿಸಿತ್ತು. ಈ ಪರಿಶೀಲನೆಯಲ್ಲಿ ಸುಮಾರು 3.89 ಲಕ್ಷ ಅನರ್ಹರು ಯೋಜನೆಯಿಂದ ಹೊರಗುಳಿಯಬೇಕಾಯಿತು. ಅದರಲ್ಲಿ ತೆರಿಗೆ ಪಾವತಿದಾರರೂ ಇದ್ದರು. ಇದಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರೋಧ ವ್ಯಕ್ತಪಡಿಸಿದ್ದರು. ಮಹಿಳೆಯರ ಸ್ವಾವಲಂಬನೆಗಾಗಿ ಜಾರಿಗೊಳಿಸಿದ ಯೋಜನೆ ಬಗ್ಗೆ ಕಾಂಗ್ರೆಸ್ ಸರಕಾರ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ.

ಈ ಯೋಜನೆಯ ಭವಿಷ್ಯದ ಬಗ್ಗೆ ಮಹಿಳೆಯರು ಆತಂಕಗೊಳ್ಳುವಂತಾಗಿದೆ ಎಂದು ಆರೋಪಿಸಿದ್ದರು. ಆದರೆ, ಅಂಥದ್ದೇ ಪರಿಶೀಲನೆ ಮೂಲಕ ಮಹಾರಾಷ್ಟ್ರ ಬಿಜೆಪಿ ಸರಕಾರವೂ ಅರ್ಹರಿಗೆ ಮಾತ್ರ ಈ ಯೋಜನೆಯ ಲಾಭ ಪಡೆಯುವಂತೆ ಮಾಡಿತ್ತು. ಇದೀಗ ಕರ್ನಾಟಕದ ಈ ಮಾದರಿಯ ಯೋಜನೆಯನ್ನು ದಿಲ್ಲಿ ಸರಕಾರವೂ ಜಾರಿಗೊಳಿಸಲೂ ಮುಂದಾಗಿದ್ದು, ಮಹಿಳೆಯರ ಸ್ವಾವಲಂಬನೆಗೆ, ಗೌರವಯುತ ಜೀವನ ನಡೆಸಲು ಹಾಗು ಭದ್ರತೆಗಾಗಿ ಈ ಯೋಜನೆ ನೆರವಾಗಲಿದೆ ಎಂಬುವುದು ಸಾಬೀತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+