Rahul Gandhi: ಸ್ಮೃತಿ ಇರಾನಿ ಚಾಲೆಂಜ್ ಸ್ವೀಕರಿಸುತ್ತಾರಾ ರಾಹುಲ್ ಗಾಂಧಿ..? ಮತ್ತೆ ಏನಿದು ಹೊಸ ವಿಷಯ!
ಲಕ್ನೋ, ಏಪ್ರಿಲ್. 10: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದಿಂದ 2024 ರ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಈಗ ಮತ್ತೊಂದು ಅಪ್‌ಡೇಟ್ ಸಿಕ್ಕಿದ್ದು, ಉತ್ತರಪ್ರದೇಶದ ಅಮೇಥಿ ಕ್ಷೇತ್ರದಲ್ಲೂ ರಾಹುಲ್ ಗಾಂಧಿಗೆ ಕಾಂಗ್ರೆಸ್ ಟಿಕೆಟ್ ನೀಡಬಹುದು ಎಂಬ ಚರ್ಚೆ ನಡೆಯುತ್ತಿದೆ.
ಅಮೇಥಿ ಮತ್ತು ರಾಯ್‌ಬರೇಲಿಯ ನಿರ್ಣಾಯಕ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಕಾಂಗ್ರೆಸ್ ಇನ್ನೂ ಏನು ಮಾತನಾಡಿಲ್ಲ. ಬೇರೆ ಬೇರೆ ಪ್ಲಯಾನ್ ಮಾಡುತ್ತಿರುವ ಕಾರಣ ಈ ಕ್ಷೇತ್ರದಿಂದ ಅತ್ಯಂತ ಪ್ರಭಾವಿ ಮತ್ತು ಪ್ರಮುಖ ನಾಯಕರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದೆ. ಇದೇ ಕಾರಣಕ್ಕೆ ಹಿಂದಿನ ಗಾಂಧಿ ಕುಟುಂಬದ ಭದ್ರಕೋಟೆಯಾದ ಅಮೇಥಿಯಲ್ಲಿ ರಾಹುಲ್ ಗಾಂಧಿ ಮತ್ತೆ ರಾಜಕೀಯ ಹೋರಾಟಕ್ಕೆ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳು ಹರಡಿವೆ.

ಮತ್ತೊಮ್ಮೆ ರಾಹುಲ್ ಗಾಂಧಿ Vs ಸ್ಮೃತಿ ಇರಾನಿ!
ಕೇಂದ್ರ ಸಚಿವೆ ಮತ್ತು ಹಾಲಿ ಸಂಸದೆ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿಯವರಿಗೆ ಅಮೇಥಿ ಅಲ್ಲಿ ನಿಲ್ಲುವ ಮೂಲಕ ನನ್ನ ಸವಾಲನ್ನು ಸ್ವೀಕರಿಸಿ ಎಂದು ಪದೇ ಪದೇ ಪಂದ್ಯ ಒಡುತ್ತಲೇ ಇದ್ದಾರೆ. ಅದು ಕೂಡ ತಮ್ಮ 'ಇಂಡಿಯಾ ಬ್ಲಾಕ್' ಒಕ್ಕೂಟದ ಇತರ ನಾಯಕರ ಬೆಂಬಲ ತೆಗೆದುಕೊಳ್ಳಬಾರದು ಎಂದೂ ಕೂಡ ಹೇಳಿದ್ದಾರೆ.
ಎಲ್ಲರ ಬಾಯಲ್ಲೂ ಸ್ಮೃತಿ ಇರಾನಿ ಸವಾಲನ್ನು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಎದುರಿಸಲಿದೆಯೇ ಎಂಬ ಪ್ರಶ್ನೆ ಎದ್ದು ಕಾಣುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ ಎನಿಸಿದೆ. ಆದರೆ, ಕೆಲವು ಸೂಚನೆಗಳು ಗಾಂಧಿ ವಂಶಸ್ಥರು ತಮ್ಮ ಭದ್ರಕೋಟೆ ಅಮೇಥಿಗೆ ಮರಳುವ ಸಾಧ್ಯತೆಯ ಬಗ್ಗೆ ಸುಳಿವು ನೀಡುತ್ತವೆ.
ಏಪ್ರಿಲ್ 26 ರಂದು ಮೊದಲ ಹಂತದಲ್ಲಿ ಕೇರಳದ ವಯನಾಡಿನಲ್ಲಿ ಮತದಾನ ಮುಗಿಯಲಿದೆ. ಇದಾದ ನಂತರವೇ ಕಾಂಗ್ರೆಸ್ ಅಮೇಥಿಗೆ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆಯಿದೆ. ಅಮೇಥಿಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗುವುದರೊಂದಿಗೆ ಮೇ 3 ರವರೆಗೆ ಚುನಾವಣಾ ಪ್ರಚಾರ ನಡೆಯಲಿದೆ. ಕೇರಳದಲ್ಲಿ ಸ್ಥಳೀಯ ಪ್ರಾತಿನಿಧ್ಯದ ಮಹತ್ವವನ್ನು ಪರಿಗಣಿಸಿ ಈ ವಿಳಂಬ ಕೂಡ ಕಾಂಗ್ರೆಸ್‌ನ ಕಾರ್ಯತಂತ್ರವಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಕೇವಲ ರಾಜಕೀಯ ಅವಕಾಶವಾದವನ್ನು ಮೀರಿ ಈ ಪ್ರದೇಶಕ್ಕೆ ರಾಹುಲ್ ಗಾಂಧಿಯವರ ಕನೆಕ್ಷನ್ ಅನ್ನು ಒತ್ತಿಹೇಳುವ ಮೂಲಕ ವಯನಾಡ್ ಮೇಲೆ ಗಮನ ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ. ವಯನಾಡ್‌ಗೆ ಆದ್ಯತೆ ನೀಡುವ ಮೂಲಕ, ಪಕ್ಷವು ಗರಿಷ್ಠ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದೆ. ರಾಹುಲ್ ಗಾಂಧಿಯವರ 2019 ರ ಗೆಲುವನ್ನು ಮತ್ತೆ ಪಡೆಯಲು ಕಾಂಗ್ರೆಸ್ ಕಾಯುತ್ತಿದೆ.

ವಯನಾಡ್‌ನಲ್ಲಿ ನಾಮಪತ್ರ, ಅಮೇಥಿಯಲ್ಲಿ ಗುಸುಗುಸು!
ರಾಹುಲ್ ಗಾಂಧಿ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಅಮೇಥಿಯ ಕಾಂಗ್ರೆಸ್ ಪಾಳಯದಲ್ಲಿ ಗುಸುಗುಸು ಜೋರಾಗಿದೆ. ಸ್ಥಳೀಯ ಭಾವನೆಗಳಿಗೆ ಅನುಗುಣವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಪುನರ್‌ರಚಿಸಲಾಗಿದ್ದು, ಬೂತ್ ಮಟ್ಟದಲ್ಲಿ ಪಕ್ಷವನ್ನು ಸೂಕ್ಷ್ಮವಾಗಿ ಸಂಘಟಿಸಲಾಗುತ್ತಿದೆ.
ಅಮೇಥಿಯಲ್ಲಿ 2002-2003ರ ಅವಧಿಯಲ್ಲಿ ಪ್ರಿಯಾಂಕಾ ಗಾಂಧಿಯವರ ಮೈಕ್ರೊಮ್ಯಾನೇಜ್‌ಮೆಂಟ್ ಅನ್ನು ನೆನಪಿಸುವ ತಂತ್ರವನ್ನು ಕಾರ್ಯಗತಗೊಳಿಸಲಾಗುತ್ತಿದೆ. ಸುಮಾರು 8680 "ಪೂರ್ವ ಪ್ರಮುಖ್" ಅಧಿಕಾರಿಗಳು ಅಮೇಥಿಯ 876 ಗ್ರಾಮಗಳಾದ್ಯಂತ ಪ್ರಚಾರದ ಮೇಲ್ವಿಚಾರಣೆ ಮಾಡುತ್ತಾರೆ. ತಳಮಟ್ಟದಲ್ಲಿ ಹೆಚ್ಚು ಬೆಂಬಲ ಪಡೆಯುವ ಗುರಿಯಿಂದ ಮನೆ ಮನೆಗೆ ಪ್ರಚಾರಕ್ಕೆ ಆದ್ಯತೆ ನೀಡಲಾಗುತ್ತಿದೆ.
ಇನ್ನು, ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಲಾಭವಾಗಲಿದೆ ಎಂದು ಕಾಂಗ್ರೆಸ್‌ನ ಆಂತರಿಕ ಸಮೀಕ್ಷೆಗಳು ಸೂಚಿಸಿವೆ. ಅಮೇಥಿಯಲ್ಲಿ ಜನರು ಹಾಲಿ ಸಂಸದರ ವಿರುದ್ಧ ಬೇಸರಗೊಂಡಿರುವುದರಿಂದ ಆಂತರಿಕ ಸಮೀಕ್ಷೆಯು ಪಕ್ಷಕ್ಕೆ 80 ಪ್ರತಿಶತದಷ್ಟು ಗೆಲುವಿನ ಆಶಾಭಾವನೆ ನೀಡಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.












Click it and Unblock the Notifications