ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸಿನ ಕೂಸು ಮಾರುತಿ ಕಾರು ರಸ್ತೆಗಿಳಿದಾಗ

By Prasad
|
Google Oneindia Kannada News

RC Bhargava, Suzuki Motors Chairman
ಕಣ್ಮುಂದಿರುವ ಗುರಿ ಹಿಮಾಲಯವನ್ನು ಮೀರಿ ನಿಂತಿತ್ತು. ಸಾಧಿಸಲು ಸಾಧ್ಯವೇ ಇಲ್ಲವೇನೋ ಎಂಬ ಸಂದೇಹವನ್ನು ಎಲ್ಲರ ಮನದಲ್ಲಿ ಹುಟ್ಟಹಾಕಿತ್ತು. ಆದರೆ, ಮಧ್ಯಮ ವರ್ಗದವರ ಕನಸು ನನಸಾಗಿಸಬೇಕೆಂಬ ಅಸಾಮಾನ್ಯ ತುಡಿತ, ಈ ಜಗದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಿಡಿತ ಅಸಾಧ್ಯವಾದುದನ್ನು ಸಾಧ್ಯವಾಗಿಸಿತ್ತು. ಆ ಕಲ್ಪನೆಯ ಕೂಸಿಗೆ ಜೀವ ಬಂದಿದ್ದು 1983ರಲ್ಲಿ. ಆ ಕೂಸಿಗೆ ಜೀವ ತುಂಬುತ್ತಿದ್ದಂತೆ ರಸ್ತೆಯ ಮೇಲೆ ಅಡ್ಡಾಡಲು ಅಲ್ಲ ಓಡಾಡಲು ಬಿಟ್ಟವರು ಸುಜುಕಿ ಮೋಟಾರ್ಸ್ ಕಂಪನಿಯ ಚುಕ್ಕಾಣಿ ಹಿಡಿದಿದ್ದ ಆರ್ ಸಿ ಭಾರ್ಗವ. ಮಾರುತಿ ಕಾರಿನ ಸ್ಟಿಯರಿಂಗ್ ವೀಲ್ ಪ್ರಥಮ ಬಾರಿಗೆ ಮಧ್ಯಮ ವರ್ಗದ ಜನರ ಕೈಗೆ ಬಂದಿತ್ತು. ಭಾರತದುದ್ದಗಲಕ್ಕೂ ಮಾರುತಿ ಹರಿದಾಡಿತ್ತು.

ಪ್ರಸ್ತುತ, ಕೇಂದ್ರ ಸರಕಾರದ ಮುಷ್ಠಿಯಿಂದ ಹೊರಬಂದಿರುವ ಸುಜುಕಿ ಮೋಟಾರ್ಸ್ ಕಂಪನಿ ಚೇರ್ಮನ್ ಆಗಿರುವ ಆರ್ ಸಿ ಭಾರ್ಗವ ಅವರು ಸರಕಾರದ ಹಿಡಿತದಲ್ಲಿದ್ದುಕೊಂಡೇ ಅಸಾಧ್ಯವಾದುದನ್ನು ಸಾಧಿಸಿದ ಅಪೂರ್ವ ಕಥಾನಕವನ್ನು ಪುಸ್ತಕದಲ್ಲಿ ಹಿಡಿದಿಡುತ್ತಿದ್ದಾರೆ. ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಸೀತಾ ಅವರೊಡನೆ ಮಾರುತಿ ಕಾರು ಹುಟ್ಟಿ ನಡೆದುಬಂದ ದಾರಿ, ಸ್ಪರ್ಧಾ ಜಗತ್ತಿನಲ್ಲಿ ಇತರ ಕಾರುಗಳೊಂದಿಗೆ ಸೆಣಸುತ್ತಿರುವ ರೋಚಕ ಕಥಾನಕವನ್ನು ಭಾರ್ಗವ ಹಿಡಿದಿಡುತ್ತಿದ್ದಾರೆ.

ಎರಡೇ ಎರಡು ವರುಷಗಳಲ್ಲಿ ಹಿಡಿದಿದ್ದನ್ನು ಸುಜುಕಿ ಮೋಟಾರ್ಸ್ ಕಾರ್ಪೊರೇಷನ್ ಸಾಧಿಸಬೇಕಿತ್ತು. ತಕ್ಕ ಭಾಗೀದಾರನನ್ನು ಹುಡುಕಿ, ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಂಡು, ಕರಾರುಪತ್ರಗಳಿಗೆ ಸರಕಾರಿ ಠಸ್ಸೆ ಒತ್ತಿಸಿಕೊಂಡು, ಫ್ಯಾಕ್ಟರಿ ಕಟ್ಟಿ, ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ನಿರ್ಮಿಸಿಕೊಂಡು, ಭಾರತದಲ್ಲಿ ಸೀಮಿತ ಮಾರುಕಟ್ಟೆಯಲ್ಲಿ ವರ್ಷಕ್ಕೆ ಒಂದು ಲಕ್ಷದಷ್ಟು ಕಾರುಗಳನ್ನು ಮಾರಾಟ ಮಾಡಬೇಕಾದ ಕಷ್ಟಸಾಧ್ಯವಾದ ಸವಾಲು ಭಾರ್ಗವ ಅವರ ಮುಂದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕ ವಲಯದ ಸಂಸ್ಥೆಯಾದ್ದರಿಂದ ಸರಕಾರಿ ವ್ಯವಸ್ಥೆಯೊಂದಿಗೆ ಗುದ್ದಾಡಬೇಕಿತ್ತು, ಸರಕಾರ ಮತ್ತು ಸುಜುಕಿ ಸಂಸ್ಥೆಯನ್ನು ಮೆಚ್ಚಿಸುವಂತೆ ಕಾರ್ಯ ನಿರ್ವಹಿಸಬೇಕಿತ್ತು.

ಅಬ್ಬಬ್ಬ, ಇದೆಲ್ಲ ಕೇವಲ ಎರಡೇ ಎರಡು ವರ್ಷಗಳಲ್ಲಿ ಸಾಧ್ಯವಾದದ್ದಾದರೂ ಹೇಗೆ? ಸವಾಲುಗಳಾದರೂ ಎಂಥವು? ದಾರಿಯಲ್ಲಿದ್ದ ಎಲ್ಲ ಹಂಪ್ಸುಗಳನ್ನು ಜಿಗಿದು ನಾಗಾಲೋಟದಲ್ಲಿ ಸಾಗಿದ್ದ ಪರಿ ಎಂಥದು? ಕನಸಿನ ಕೂಸು ಹುಟ್ಟುತ್ತಲೇ ಓಡಾಡಿದಾಗ ಅಂತರಾಳದಲ್ಲಿ ಹುದುಗಿದ್ದ ಸಂತಸ ಪುಟಿದೆದ್ದಾದರೂ ಹೇಗೆ? ನಾನಾ ಕಂಪನಿಗಳಿಂದ ಹಲವಾರು ಬಗೆಯ ಮಾಡೆಲ್ಲುಗಳು ಆಕರ್ಷಿಸುತ್ತಿವೆ. ಇವೆಲ್ಲಗಳ ನಡುವೆ ಮಾರುತಿ ಎಂಬ ಕೂಸು ತಲೆಯೆತ್ತುವಂತೆ ಬೆಳೆದುನಿಂತಿದ್ದಾದರೂ ಹೇಗೆ?

ಹಲವಾರು ಪ್ರಶ್ನಗಳಿಗೆ ಉತ್ತರ ಮತ್ತು ಭಾರ್ಗವ ಆ ಹಂತದಲ್ಲಿ ತೋರಿದ ಅಸಾಮಾನ್ಯ ಛಲ, ವೃತ್ತಿ ಚಾಣಾಕ್ಷತೆ, ನಿರ್ವಹಣಾ ನೈಪುಣ್ಯತೆಯ ಬಗ್ಗೆ ತಿಳಿಯಬೇಕೆಂದರೆ ನೀವು ಇನ್ನೂ ಕೆಲಕಾಲ ಕಾಯಬೇಕು. ಆದರೆ, ಕಾರುಗಳಿಗೆ ಮುಂಗಡ ಬುಕ್ ಮಾಡುವಂತೆ ಹೊರಬರಲಿರುವ ಪುಸ್ತಕಕ್ಕಾಗಿ ಈಗಲೇ ಬುಕ್ ಮಾಡಬಹುದು. ಈಗಲೇ ಕಾಯ್ದಿರಿಸಿದರೆ ವಿಶೇಷ ರಿಯಾಯಿತಿ ದರದಲ್ಲಿ The Maruti Story ನಿಮ್ಮ ಓದಿಗೆ ದಕ್ಕಲಿದೆ.

Pre-order Now at a Special Price. - The Maruti Story by R C. Bhargava @ 30% discount

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X