ಸುಂದರ 'ಬೆಂಗಳೂರು ಜೀವನ'ಕ್ಕಾಗಿ ಮಾರ್ಗದರ್ಶಿ
ಎರಡು ಮೂರು ದಶಕಗಳ ಹಿಂದೆ ಬೆಂಗಳೂರಿನ ಜೀವನ ಹೇಗಿತ್ತು, ಈಗ ಹೇಗಿದೆ? ಎಂದು ಮೂರ್ನಾಲ್ಕು ದಶಕಗಳಿಂದ ಬೆಂಗಳೂರಿನಲ್ಲಿ ಜೀವಿಸುತ್ತಿರುವ ಯಾರಾದರೂ ಹಿರಿಯ ನಾಗರಿಕನನ್ನು ಕೇಳಿನೋಡಿ. ಕೂಡಲೆ, ಗತಕಾಲದ ವೈಭವದ ನೆನಪಿನ ಅಂಗಳಕ್ಕೆ ಜಿಗಿದುಬಿಡುತ್ತಾರೆ. ಹಾಗೆಯೆ, ವಾಸ್ತವಕ್ಕೆ ಬಂದಾಗ ಚಿಂತೆಯ ಗೆರೆಗಳು ಹಣೆಯಲ್ಲಿ ಮೂಡಿರುತ್ತವೆ.
"ಅಂದು ಬೆಂಗಳೂರು ಎಷ್ಟು ಅಂದವಾಗಿತ್ತು ಗೊತ್ತಾ" ಎಂದೇ ಅವರು ಮಾತು ಆರಂಭಿಸುತ್ತಾರೆ. ಹೇರಳವಾದ ಮರಗಳು, ವಿರಳವಾದ ವಾಹನ ದಟ್ಟಣೆ, ಕುಡಿಯಲು ಸಾಕಷ್ಟು ನೀರು, ಹೀರಲು ಸ್ವಚ್ಛವಾದ ಗಾಳಿ. ಈಗಿನ ಹಾಗೆ ಫ್ಲೈ ಓವರುಗಳ ಅಗತ್ಯವೇ ಇರಲಿಲ್ಲ, ಇಂದಿನಂತೆ ಗಗನಚುಂಬಿ ಅಪಾರ್ಟ್‌ಮೆಂಟುಗಳೂ ಇರಲಿಲ್ಲ. ಸ್ವಲ್ಪ ಹಣವಿದ್ದವರಿಗೆ ಆಸ್ತಿ ಕೊಳ್ಳುವುದು ಅಷ್ಟು ಕಷ್ಟಕರವೂ ಆಗಿರಲಿಲ್ಲ ಎಂದು ಮಾತಿನ ಲಹರಿಗೆ ಇಳಿಯುತ್ತಾರೆ.
ಆದರೆ, ಇಂದಿನ ಬೆಂಗಳೂರು ಹೇಗಿದೆ? ಆಸ್ತಿ ಕೊಳ್ಳುವ ಕನಸು ಕಾಣುವುದಿರಲಿ, ಇದ್ದ ಆಸ್ತಿಯನ್ನು ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ. ಕುಡಿಯುವ ನೀರು, ಉಸಿರಾಡಿಸುವ ಗಾಳಿಯ ಬಗ್ಗೆ ಚಿಂತನೆ ಮಾಡಿದಾಗ, ಸುಂದರ ಜೀವನದ ಕನಸು ಕಟ್ಟಿಕೊಂಡು ಬಂದವರಿಗೆ, ಬೆಂಗಳೂರಿನಿಂದ ಜಾಗ ಖಾಲಿ ಮಾಡುವುದೇ ಒಳ್ಳೆಯದು ಎಂಬ ಚಿಂತನೆ ಮನದಲ್ಲಿ ಮೂಡುತ್ತದೆ.

ಇನ್ನು ಗಾಳಿಯಷ್ಟೇ ಹರಡಿಕೊಂಡಿರುವ ಭ್ರಷ್ಟಾಚಾರ, ಆಕಾಶಕ್ಕೆ ಏಣಿ ಹಾಕಿರುವ ಆಸ್ತಿಪಾಸ್ತಿ ಬೆಲೆ, ಕಟ್ಟಬೇಕಾಗಿರುವ ಅಗಾಧ ತೆರಿಗೆ, ಕೈಗೆಟುಕದ ಮನೆಗಳು, ಆರೋಗ್ಯವನ್ನು ಕೆಡಿಸುತ್ತಿರುವ ವಾಯುಮಾಲಿನ್ಯ, ಗುಡ್ಡದಂತೆ ಬೆಳೆಯುತ್ತಿರುವ ಕಸ ವಿಲೇವಾರಿ ಸಮಸ್ಯೆ ಅನೇಕರ ಬದುಕನ್ನು ದುಸ್ತರವಾಗಿಸಿರುವುದು ನಿಜ. ಇಂದು ಆಧಾರ ಅಥವಾ ರೇಷನ್ ಕಾರ್ಡ್ ಪಡೆಯಬೇಕಾದರೆ ಎಷ್ಟು ಕಷ್ಟ ಎನ್ನುವುದು ಅನುಭವಿಸಿದವರಿಗೇ ಗೊತ್ತು.
ಇರಲಿ, ಈ ಎಲ್ಲ ಸಮಸ್ಯೆಗಳ ಜೊತೆಗೆ ಸಾಕಷ್ಟು ಅನುಕೂಲತೆಗಳನ್ನು ಕೂಡ ನಮಗೆ ಬೆಂಗಳೂರು ಮಾಡಿಕೊಟ್ಟಿದೆ ಎನ್ನುವುದನ್ನು ನಾವು ಮರೆಯಬಾರದು. ಆದರೆ, ಆ ಅನುಕೂಲಗಳನ್ನು ನಮಗೆ ಅನುಕೂಲವಾಗುವಂತೆ ಹೇಗೆ ಬಳಸಿಕೊಳ್ಳಬೇಕು ಎಂದು ಅನೇಕರಿಗೆ ತಿಳಿದಿರುವುದಿಲ್ಲ. ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಗೊಣಗಿಕೊಳ್ಳುವ ಬದಲು ಇರುವುದನ್ನೇ ಸದ್ಬಳಕೆ ಮಾಡುವುದು ಹೇಗೆಂದು ತಿಳಿಯುವುದು ಹಿತಕರವಲ್ಲವೆ?
ಬೆಂಗಳೂರು ನೀಡಿರುವ ಎಲ್ಲ ಸವಲತ್ತುಗಳ ಬಗ್ಗೆ ಸರಿಯಾಗಿ ತಿಳಿಸುವ ಕೈಪಿಡಿಯೇ ಸಿಟಿಜನ್ ಮ್ಯಾಟರ್ಸ್ ಸುದ್ದಿಪತ್ರಿಕೆ ತಂದಿರುವ 'ಬೆಂಗಳೂರು ಜೀವನ - ಜಾಣ ಹಾದಿ' ಎಂಬ ಪುಸ್ತಕ. ಬೆಂಗಳೂರನ್ನು ಮತ್ತು ತಮ್ಮ ಜೀವನವನ್ನು ಪ್ರೀತಿಸುವ ಪ್ರತಿಯೊಬ್ಬರು ಕೊಳ್ಳಬೇಕಾದ ಪುಸ್ತಕವಿದು. ಈ ಮಾರ್ಗದರ್ಶಿಯನ್ನು ಸೂಕ್ತವಾಗಿ ಬಳಸಿಕೊಂಡರೆ ಬೆಂಗಳೂರು ಜೀವನ ಸುಂದರವಾಗುವುದರಲ್ಲಿ ಸಂದೇಹವೇ ಇಲ್ಲ.
ಈ ಪುಸ್ತಕದಲ್ಲಿ ಏನೇನಿದೆ?
* ಆಧಾರ ಕಾರ್ಡ್ ಪಡೆಯುವುದು ಹೇಗೆ ಎಂಬುದರಿಂದ ನಾವು ಬಳಸುವ ಜೀವರಕ್ಷಕ ನೀರು ಪೋಲಾಗದಂತೆ ಉಳಿಸಿ ರಕ್ಷಿಸುವುದು ಹೇಗೆಂದು ಎಲ್ಲವನ್ನೂ ಈ ಹೊತ್ತಗೆ ತಿಳಿಸಿಕೊಡುತ್ತದೆ.
* ಆಸ್ತಿಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ನೊಂದಣಿ ಮಾಡಿರುವುದು, ಖಾತೆ ಬದಲಾಯಿಸುವುದು, ಕೊಳ್ಳುವಾಗ ಯಾವುದನ್ನು ಮಾಡಬೇಕು ಮಾಡಬಾರದು, ತೆರಿಗೆ ಸುಲಭವಾಗಿ ತುಂಬುವುದು ಹೇಗೆ ಮತ್ತು ಎಲ್ಲಿ?
* ವಸತಿ ಸಮುಚ್ಚಯವನ್ನು ಸಮರ್ಥವಾಗಿ ಹೇಗೆ ನಿಭಾಯಿಸುವುದು? ಯಾವುದೇ ಅವಘಡ ಸಂಭವಿಸದಂತೆ ಕಟ್ಟಡವನ್ನು ರಕ್ಷಿಸಿಕೊಳ್ಳುವುದು ಹೇಗೆ?
* ಮತದಾರರ ಚೀಟಿ ಪಡೆಯುವುದು ಹೇಗೆ? ಡ್ರೈವರ್ಸ್ ಲೈಸೆನ್ಸ್ ಪಡೆಯುವುದು ಯಾವ ರೀತಿ? ಪಡಿತರ ಚೀಟಿ ಪಡೆಯುವ ಸುಲಭ ಬಗೆ ಯಾವುದು?
* ಪೊಲೀಸರಿಗೆ ದೂರು ನೀಡುವುದು ಹೇಗೆ? ಮಕ್ಕಳು ಅಪಾಯಕ್ಕೆ ಸಿಕ್ಕಿದಾಗ ರಕ್ಷಿಸುವುದು ಹೇಗೆ? ಮಕ್ಕಳ ಸಹಾಯವಾಣಿ ಸಂಪರ್ಕಿಸುವ ಬಗೆ ಯಾವುದು?
* ಗಾರ್ಡನ್ ಸಿಟಿ ಅನಿಸಿಕೊಂಡಿದ್ದ ಬೆಂಗಳೂರನ್ನು ಹಸಿರಾಗಿಡುವುದು ಹೇಗೆ? ಪರಿಸರ ಮಲಿನವಾಗದಂತೆ ಯಾವ ಕ್ರಮ ತೆಗೆದುಕೊಳ್ಳಬೇಕು? ನೀರಿನ ಸದ್ಬಳಕೆ ಯಾವ ರೀತಿ?
* ಇದೆಲ್ಲದರ ಜೊತೆಗೆ, ಬಿಬಿಎಂಪಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬಿಬಿಎಂಪಿ ಸೇವಾ ಕೇಂದ್ರ, ಪ್ರತಿನಿಧಿಗಳು, ಆರ್ಟಿಓ, ನೊಂದಣಾಧಿಕಾರಿಗಳ ಫೋನ್ ನಂಬರ್ ಇಲ್ಲಿ ಲಭ್ಯ.
ಈ ಪುಸ್ತಕ ಮೊದಲು ಬಂದಿದ್ದು ಆಂಗ್ಲ ಭಾಷೆಯಲ್ಲಿ. ಈಗಾಗಲೆ 15 ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದು, ನ್ಯಾ. ಸಂತೋಷ್ ಹೆಗ್ಡೆ, ಟಿ.ವಿ. ಮೋಹನದಾಸ್ ಪೈ, ಪತ್ರಕರ್ತ ನಾಗೇಶ್ ಹೆಗ್ಡೆ, ನಟ ಪ್ರಕಾಶ್ ಬೆಳವಾಡಿ ಮುಂತಾದವರಿಂದ ಪ್ರಶಂಸೆಗೊಳಗಾಗಿದೆ. ಈ ಯಶಸ್ಸಿನಿಂದ ಉತ್ತೇಜಿತರಾಗಿ ಈ ಪುಸ್ತಕವನ್ನು ಕನ್ನಡ ಭಾಷೆಯಲ್ಲಿ ತರಲಾಗಿದೆ. ಬೆಲೆ ಕೇವಲ 80 ರು. ಮಾತ್ರ.
ನೀವು ಮತ್ತು ನಿಮ್ಮ ಬೆಂಗಳೂರು ಚೆನ್ನಾಗಿರಬೇಕು ಎಂದು ನಿಮಗನಿಸಿದರೆ ಈ ಪುಸ್ತಕ ಓದಿರಿ. ನಿಮ್ಮ ಸ್ನೇಹಿತರು ಮತ್ತು ಬಂಧುಗಳ ಜೀವನವೂ ಚೆನ್ನಾಗಿರಬೇಕೆ ಎಂದು ನಿಮಗನಿಸಿದರೆ ಈ ಪುಸ್ತಕವನ್ನು ಉಡುಗೊರೆಯಾಗಿ ನೀಡಿರಿ ಅಥವಾ ಅವರೇ ಕೊಳ್ಳಲು ಪ್ರೇರೇಪಿಸಿರಿ.
ಪುಸ್ತಕದ ಬೆಲೆ ಕೇವಲ ರು. 80 ಮಾತ್ರ. ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಹೊರಪ್ರದೇಶಕ್ಕೆ ರವಾನೆ ಮಾಡಬೇಕಿದ್ದರೆ ರು.10 ಹೆಚ್ಚು ತಗಲುತ್ತದೆ. ಆನ್ ಲೈನ್ ಮುಖಾಂತರ ಕೊಳ್ಳಬೇಕಿದ್ದರೆ ಈ ಕೊಂಡಿ ಕ್ಲಿಕ್ಕಿಸಿ.
ಪುಸ್ತಕ ಎಲ್ಲೆಲ್ಲಿ ದೊರೆಯುತ್ತದೆ?
ಸಪ್ನಾ ಬುಕ್ ಹೌಸ್ - ಗಾಂಧಿನಗರ, ಜಯನಗರ, ಇಂದಿರಾನಗರ, ಕೋರಮಂಗಲ, ಸದಾಶಿವನಗರ, ರೆಸಿಡೆನ್ಸಿ ರಸ್ತೆ.
ಪ್ರಿಸಂ ಬುಕ್ ಹೌಸ್ - ಜಯನಗರ 4ನೇ ಬ್ಲಾಕ್
ನಾಗಶ್ರೀ ಬುಕ್ ಶಾಪ್ - ಜಯನಗರ 4ನೇ ಬ್ಲಾಕ್
ಟೋಟಲ್ ಕನ್ನಡ - ಜಯನಗರ 4ನೇ ಬ್ಲಾಕ್
ಕರ್ನಾಟಕ ಬುಕ್ ಹೌಸ್ - ಅವೆನ್ಯೂ ರಸ್ತೆ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications