Get Updates
Get notified of breaking news, exclusive insights, and must-see stories!

ಕರವೇ ಗೌಡರು ಪುಸ್ತಕ ಬರೆದಿದ್ದಾರೆ, ಬರ್ತೀರಲ್ಲ?

T A Narayana Gowda
ಬೆಂಗಳೂರು, ಡಿ. 22 : ನೇರಾನೇರ ನುಡಿಗೆ ಹೆಸರಾಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಬರೆದಿರುವ 'ನೇರನುಡಿ' ಪುಸ್ತಕ ಡಿ.26, ಸೋಮವಾರ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಪುಸ್ತಕ ಪ್ರಸವವನ್ನು ಸುಲಲಿತಗೊಳಿಸುತ್ತಿರುವವರು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು.

ಹುಕ್ಕೇರಿ ಹಿರೇಮಠ ಗುರುಶಾಂತೇಶ್ವರ ಸಂಸ್ಥಾನದ ಶ್ರೀಶ್ರೀಶ್ರೀ ಷಟಸ್ಥಳಪರಬ್ರಹ್ಮಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಗೃಹ ಸಚಿವ ಆರ್ ಅಶೋಕ್ ಮತ್ತು ಅಧ್ಯಕ್ಷತೆಯನ್ನು ಟಿ.ಎ. ನಾರಾಯಣ ಗೌಡರು ವಹಿಸುತ್ತಿದ್ದಾರೆ.

ಡಿ.26ರ ಬೆಳಿಗ್ಗೆ 10.30ಕ್ಕೆ ಟೌನ್ ಹಾಲ್ ಬಳಿಯಿರುವ, ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಕರವೇ ನಲ್ನುಡಿ ಮಾಸಪತ್ರಿಕೆ ಆಯೋಜಿಸಿದ್ದ ಕರವೇ ನಲ್ನುಡಿ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ.

ಪ್ರಶಸ್ತಿ ಪ್ರದಾನವನ್ನು 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ. ಸಿ.ಪಿ. ಕೃಷ್ಣಕುಮಾರ್ ಅವರು ಮಾಡಲಿದ್ದಾರೆ. ಕರವೇ ನಲ್ನುಡಿ ಕುರಿತು ಬೀದರ್ ಬಸವ ಸೇವಾ ಪ್ರತಿಷ್ಠಾನದ ವಚನ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ರಂಜಾನ್ ದರ್ಗಾ ಅವರು ನಾಲ್ಕು ನುಡಿಗಳನ್ನು ಆಡಲಿದ್ದಾರೆ.

ಬಹುಮಾನ ಗೆದ್ದವರು : ಮೊದಲನೇ ಬಹುಮಾನವನ್ನು ಮಂಜುನಾಥ್ ಲತಾ (ಮೊತ್ತ 25 ಸಾವಿರ), ಎರಡನೇ ಬಹುಮಾನ ಗೌತಮ ಜ್ಯೋತ್ಸ್ನಾ ಜಿ.ಜೆ. (15 ಸಾವಿರ) ಮತ್ತು ಮೂರನೇ ಬಹುಮಾನ ನಾಗಮಂಗಲ ಕೃಷ್ಣಮೂರ್ತಿ (10 ಸಾವಿರ) ಪಡೆದಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೂ ಮೊದಲು 10 ಗಂಟೆಗೆ ಶಿವಮೊಗ್ಗ ಯುವರಾಜ್ ಮತ್ತು ತಂಡದವರಿಂದ ಜಾನಪದ ಭಾವ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+