'ಛಂದ'ದ ಮುಖಪುಟ ರಚಿಸಿ ಬಹುಮಾನ ಗೆಲ್ಲಿರಿ

ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದ ಪುಸ್ತಕವು 'ಛಂದ ಮುಖಪುಟ ಸ್ಪರ್ಧೆ' ಏರ್ಪಡಿಸಿದೆ. ಅಂದದ ಛಂದದ ಮುಖಪುಟ ವಿನ್ಯಾಸ ರಚಿಸಿ ಪುಸ್ತಕದ ಅಂದ ಮತ್ತಷ್ಟು ಹೆಚ್ಚಿಸಲು ಯುವ ಕಲಾಕಾರರಿಗೆ ಆಹ್ವಾನ ನೀಡಿದೆ. ಚುಕ್ಕುಬುಕ್ಕು ಕನ್ನಡ ಪೋರ್ಟಲ್ ಈ ಸ್ಪರ್ಧೆಗೆ ಛಂದ ಪುಸ್ತಕ ಪ್ರಕಾಶನದೊಡನೆ ಕೈ ಜೋಡಿಸಿದೆ.
ಛಂದ ಪುಸ್ತಕ ಡಿಸೆಂಬರ್ 2012ರಲ್ಲಿ ಪ್ರಕಟಿಸಲಿರುವ ವಸುಧೇಂದ್ರರ 'ವರ್ಣಮಯ' ಎಂಬ ಸುಲಲಿತ ಪ್ರಬಂಧ ಸಂಕಲನಕ್ಕೆ ಕಲಾಕಾರರು ಸುಂದರವಾದ ಮುಖಪುಟ ರಚಿಸಬಹುದು. ಆಯ್ಕೆಗೊಂಡ ಒಂದು ವಿನ್ಯಾಸಕ್ಕೆ 5,000 ರು. ಬಹುಮಾನ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ. (http://www.chukkubukku.com)
ಕವರ್ ಸ್ಟಾರ್ ಆಗಬೇಕೆಂದು ಬಯಸಿದ್ದರೆ ಈಗಲೇ ನಿಮ್ಮ ಕಲಾನೈಪುಣ್ಯತೆಯನ್ನು ಒರೆಗೆ ಹಚ್ಚಿರಿ. ಮುಖಪುಟ ರಚಿಸುವ ಮುನ್ನ ಕೆಳಗೆ ನೀಡಿರುವ ಸಂಗತಿಗಳನ್ನು ಗಮನದಲ್ಲಿಟ್ಟು ಕಲಾಕೃತಿ ರಚಿಸಲು ಶುರು ಮಾಡಿರಿ. ಆಲ್ ದಿ ಬೆಸ್ಟ್.
ಮುಖಪುಟ ವಿನ್ಯಾಸದ ಅಳತೆ : ಎತ್ತರ 18 ಸೆಂ.ಮೀ., ಅಗಲ 13 ಸೆಂ.ಮೀ.
ನಿಮ್ಮ ವಿನ್ಯಾಸಗಳನ್ನು [email protected]ಗೆ ಇ-ಮೇಲ್ ಮಾಡಿ.
ಕಡೆಯ ದಿನಾಂಕ : ನವೆಂಬರ್ 30, 2012 (ನಂತರ ಬಂದ ಕೃತಿಗಳನ್ನು ಸ್ವೀಕರಿಸುವುದಿಲ್ಲ)
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 98444 22782
ಛಂದಪುಸ್ತಕದ ಪರವಾಗಿ:
ವಂದನೆಗಳು,
ವಸುಧೇಂದ್ರ












Click it and Unblock the Notifications