• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಹ್! ಅತ್ಯಂತ ಸಮೀಪದಲ್ಲಿ ಸೆರೆ ಸಿಕ್ಕ ಸೂರ್ಯ..!

By ಅನಿಕೇತ್
|

ಸದಾಕಾಲ ಹೊತ್ತಿ ಉರಿಯುವ ಸೂರ್ಯನ ಒಡಲಿನಲ್ಲಿ ಏನಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಹಾಗೆಂದು ಅದನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ, ಬಾಹ್ಯಾಕಾಶದ ಕೌತುಕಗಳನ್ನು ಹೊರಗೆಡವಿ ಅಚ್ಚರಿ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಬಾಹ್ಯಾಕಾಶ ಸಂಸ್ಥೆ ನಾಸಾ, ಸೂರ್ಯನ ಅಂಗಳದ ಸಮೀಪ ಹೋಗುವ ಸಾಹಸ ಮಾಡಿದ್ದು, ಹೊಸ ಮೈಲಿಗಲ್ಲು ದಾಟಿದೆ.

ಬಾಹ್ಯಾಕಾಶ ಸಂಶೋಧನೆಯಲ್ಲಿ ಮತ್ತೊಂದು ಮಹತ್ವದ ಸಾಧನೆ ದಾಖಲಾಗಿದೆ. ಭೂಮಿಗೆ ಅತ್ಯಂತ ಸಮೀಪದ ನಕ್ಷತ್ರವಾಗಿರುವ ಸೂರ್ಯನ ವಿಶಿಷ್ಟವಾದ ಚಿತ್ರವನ್ನ ಸೆರೆಹಿಡಿಯಲಾಗಿದೆ. ಇದೇ ವರ್ಷದ ಫೆಬ್ರವರಿ 9ರಂದು ಸೂರ್ಯನ ಸಂಶೋಧನೆಗಾಗಿ ಉಡಾಯಿಸಿದ್ದ ಉಪಗ್ರಹ 'ಸೋಲಾರ್ ಆರ್ಬಿಟರ್ ಪ್ರೋಬ್' ಸೂರ್ಯನ ಅತ್ಯಂತ ಸಮೀಪದ ಫೋಟೋ ಕ್ಲಿಕ್ ಮಾಡಿದೆ.

ಸುಡುವ ಸೂರ್ಯನ ಅಂಗಳಕ್ಕೆ ನಾಸಾದ ಪಾರ್ಕರ್

ಯೂರೋಪಿಯನ್ ಸ್ಪೇಸ್ ಏಜೆನ್ಸಿ ಹಾಗೂ ಅಮೆರಿಕದ ನಾಸಾ ಸಂಯೋಗದಲ್ಲಿ ಈ ಸ್ಯಾಟಲೈಟ್ ಹಾರಿಬಿಡಲಾಗಿತ್ತು. ಸುಮಾರು 77 ಮಿಲಿಯನ್ ಕಿಲೋ ಮೀಟರ್ ಅಂದರೆ 7.7 ಕೋಟಿ ಕಿಲೋ ಮೀಟರ್ ದೂರದಿಂದ ಈ ಫೋಟೋ ಕ್ಲಿಕ್ಕಿಸಲಾಗಿದೆ. ಭೂಮಿಯಿಂದ ಸೂರ್ಯ 150 ಮಿಲಿಯನ್ ಕಿಲೋ ಮೀಟರ್‌ ದೂರವಿದ್ದು, ಈವರೆಗೆ ಸೂರ್ಯನನ್ನ ಇಷ್ಟು ಸಮೀಪದಿಂದ ಸೆರೆಹಿಡಿಯಲು ಆಗಿರಲಿಲ್ಲ.

ಸೋಲಾರ್ ಆರ್ಬಿಟರ್ ಪ್ರೋಬ್

ಸೋಲಾರ್ ಆರ್ಬಿಟರ್ ಪ್ರೋಬ್

ಆದರೆ ನಾಸಾ ಹಾಗೂ ಇಎಸ್‌ಎ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದ ಬಾಹ್ಯಾಕಾಶ ನೌಕೆ ‘ಸೋಲಾರ್ ಆರ್ಬಿಟರ್ ಪ್ರೋಬ್' ಅದನ್ನು ಸಾಧಿಸಿ ತೋರಿಸಿದೆ. ಸೂರ್ಯ, ಬುಧಗ್ರಹ ಹಾಗೂ ಶುಕ್ರಗ್ರಹದ ನಡುವಿನ ಪ್ರದೇಶ ‘ಪೆರಿಹೆಲಿಯನ್' ಬಳಿ ಹಾದು ಹೋಗುವಾಗ ‘ಸೋಲಾರ್ ಆರ್ಬಿಟರ್ ಪ್ರೋಬ್' ಸೂರ್ಯನ ವಿಶಿಷ್ಟವಾದ ಹಾಗೂ ಅತಿ ಸಮೀಪದ ಫೋಟೋ ಕ್ಲಿಕ್ ಮಾಡಿದೆ. ಈ ಚಿತ್ರದಿಂದ ಸೂರ್ಯನ ಕುರಿತು ನಡೆಯುತ್ತಿರುವ ನೂರಾರು ಸಂಶೋಧನೆಗಳಿಗೆ ಸಹಾಯಕವಾಗಲಿದೆ.

ಇದು ಜಸ್ಟ್ ಟ್ರೇಲರ್..!

ಇದು ಜಸ್ಟ್ ಟ್ರೇಲರ್..!

ಅಂದಹಾಗೆ ‘ಸೋಲಾರ್ ಆರ್ಬಿಟರ್ ಪ್ರೋಬ್' ಈಗ ಸಾಧಿಸಿರುವುದು ಜಸ್ಟ್ ಟ್ರೇಲರ್ ಅಷ್ಟೇ. ಇನ್ನೂ ಮುಂದೆ ಬಹುದೊಡ್ಡ ಸಾಧನೆಗೆ ಈ ಗಗನ ನೌಕೆ ಸಜ್ಜಾಗಿದೆ. ಸೂರ್ಯನ ಉತ್ತರ ಹಾಗೂ ದಕ್ಷಿಣ ಧೃವ ಪ್ರದೇಶದ ಫೋಟೋಗಳನ್ನು ನೌಕೆ ಭೂಮಿಗೆ ರವಾನಿಸಲಿದೆ. ಈ ಚಿತ್ರಗಳ ಸಹಾಯದಿಂದ ಸೂರ್ಯನ ಬೈಜಿಕ ಸಮ್ಮಿಲನ(Nuclear fusion) ಕ್ರಿಯೆ ಅಥವಾ ಹೈಡ್ರೋಜನ್+ಹೈಡ್ರೋಜನ್ ಸಮ್ಮಿಲನ ಪ್ರಕ್ರಿಯೆಯನ್ನ ಆಳವಾಗಿ ಅಧ್ಯಯನ ನಡೆಸಬಹುದಾಗಿದೆ.

ಹೈಡ್ರೋಜನ್ ಬಾಂಬ್ ಸೃಷ್ಟಿಗೆ ಮೂಲ

ಹೈಡ್ರೋಜನ್ ಬಾಂಬ್ ಸೃಷ್ಟಿಗೆ ಮೂಲ

ನಮ್ಮ ನ್ಯೂಕ್ಲಿಯರ್ ಪ್ಲಾಂಟ್‌ಗಳಲ್ಲಿ ಬೈಜಿಕ ವಿದಳನ(Nuclear fission) ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸಿದರೆ, ಸೂರ್ಯನ ಅಂತರಾಳದಲ್ಲಿ ಹೈಡ್ರೋಜನ್ ಬಾಂಬ್ ಸೃಷ್ಟಿಗೆ ಮೂಲವಾದ ಬೈಜಿಕ ಸಮ್ಮಿಲನ ಕ್ರಿಯೆ ನಡೆಯುತ್ತಿದೆ. ಇನ್ನು ಈ ಅಧ್ಯಯನದಿಂದ ಸೂರ್ಯನ ಯಾವ ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಉಷ್ಣಾಂಶವಿದೆ ಎಂಬದರ ಬಗ್ಗೆ ಸ್ಪಷ್ಟವಾದ ಮಾಹಿತಿ ಬಾಹ್ಯಾಕಾಶ ವಿಜ್ಞಾನಿಗಳಿಗೆ ಲಭ್ಯವಾಗಲಿದೆ. ಇದು ಭವಿಷ್ಯದ ದೃಷ್ಟಿಯಿಂದ ಬಹುದೊಡ್ಡ ಸಾಧನೆಯಾಗಿದೆ.

₹10 ಸಾವಿರ ಕೋಟಿಯ ಯೋಜನೆ..!

₹10 ಸಾವಿರ ಕೋಟಿಯ ಯೋಜನೆ..!

‘ಸೋಲಾರ್ ಆರ್ಬಿಟರ್ ಪ್ರೋಬ್' ಯೋಜನೆ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಸಾವಿರ ಕೋಟಿಯ ಪ್ರಾಜೆಕ್ಟ್ ಆಗಿದೆ. ಭವಿಷ್ಯದ ದೃಷ್ಟಿಯಿಂದ ಸೂರ್ಯನ ಅಧ್ಯಯನವನ್ನ ಗಮನದಲ್ಲಿ ಇಟ್ಟುಕೊಂಡು ನಾಸಾ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಜಂಟಿಯಾಗಿ ಯೋಜನೆಯನ್ನ ಕಾರ್ಯರೂಪಕ್ಕೆ ತಂದಿದ್ದವು.

ಪಾರ್ಕರ್ ಸೋಲಾರ್ ಪ್ರೋಬ್

ಮತ್ತೊಂದೆಡೆ 2018ರಲ್ಲಿ ನಾಸಾ ಏಕಾಂಗಿಯಾಗಿ ಉಡಾಯಿಸಿದ್ದ ‘ಪಾರ್ಕರ್ ಸೋಲಾರ್ ಪ್ರೋಬ್' ಇಂತಹದ್ದೇ ಸಾಧನೆ ಮಾಡುತ್ತಿದೆ. ಸೂರ್ಯನ ಬಗ್ಗೆ ಆಳವಾದ ಅಧ್ಯಯನ ಸಾಧ್ಯವಾದರೆ, ಸಮೀಪದ ಗ್ಯಾಲಕ್ಸಿಗಳಲ್ಲಿರುವ ಸೌರಮಂಡಲವನ್ನೇ ಹೋಲುವ ವ್ಯವಸ್ಥೆಯನ್ನ ಅರಿಯಬಹುದು. ಇದು ಭವಿಷ್ಯದಲ್ಲಿ ಭೂಮಿಯಂತಹ ಗ್ರಹಗಳನ್ನು ಪತ್ತೆಹಚ್ಚಲು ಸಹಾಯಕವಾಗಲಿದೆ.

English summary
The first images snapped by the Solar Orbiter spacecraft, an international collaboration between NASA and the European Space Agency, or ESA, are now available for the public, including the closest pictures ever taken of the Sun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X