Aditya L1: ಉಡಾವಣೆ ನಂತರ ಆದಿತ್ಯ ಎಲ್1ನಿತ್ಯ ಈ ಕಾರ್ಯ ಮಾಡಲಿದೆ
ಬೆಂಗಳೂರು, ಆಗಸ್ಟ್ 31: ಆದಿತ್ಯ-ಎಲ್1 ಸೌರ ವೀಕ್ಷಣಾ ಉಪಗ್ರಹವು ಸೆಪ್ಟಂಬರ್ 2ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ PSLV-C57 ರಾಕೆಟ್‌ನಲ್ಲಿ ಉಡಾವಣೆಗೊಳ್ಳಲು ಕೌಂಟ್‌ಡೌನ್ ಶುರುವಾಗಿದೆ. ಈ ಆದಿತ್ಯ ಎಲ್ 1 ಒಮ್ಮೆ ನಿಗದಿತ ಗಮ್ಯಸ್ಥಾನ ತಲುಪಿದರೆ ಅದನ್ನು ಲ್ಯಾಗ್ರೇಂಜ್ ಪಾಯಿಂಟ್ 1 ಎಂದು ಕರೆಯಲಾಗುತ್ತದೆ. ನಿತ್ಯವು ಪ್ರತಿದಿನವೂ ಸೂರ್ಯನ ಕುರಿತಾದ ಅನೇಕ ಮಾಹಿತಿಯನ್ನು ಭೂಮಿಗೆ ಕಳುಹಿಸಲಿದೆ.
ಸೂರ್ಯಾನ್ವೇಷಣೆಗೆ ಇಳಿಯುವ ಈ ಆದಿತ್ಯ ಎಲ್1 ಜನವರಿ 2024 ರಿಂದ ಮಾಹಿತಿ ಸಂಗ್ರಹಿಸವುದನ್ನು ಆರಂಭಿಸಿತ್ತದೆ.

ಆದಿತ್ಯ-ಎಲ್ 1 ವೀಕ್ಷಣಾಲಯದ ಮುಖ್ಯ ಸಾಧನವಾದ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ ಅಥವಾ VELC ಎಂದು ಕರೆಯಲಾಗುತ್ತದೆ. ಇದು ಪ್ರತಿ ನಿತ್ಯ ಸೂರ್ಯನ ಒಟ್ಟು 1,440 ಅಲ್ಟ್ರಾ-ಹೈ-ರೆಸಲ್ಯೂಶನ್ ಫೋಟೊಗಳನ್ನು ಇಸ್ರೋಗೆ ಕಳುಹಿಸುತ್ತದೆ ಎಂದು ದಿ ಹಿಂದೂ ವರದಿ ಮಾಡಿದೆ.
VELC, ಮಂಡಳಿಯಲ್ಲಿ ಮುಖ್ಯ ಸಾಧನ
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಸಂಸ್ಥೆಯು ಆದಿತ್ಯ ಎಲ್1 ನಲ್ಲಿ ಅಳವಡಿಸಲಾದ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಸಾಧನವನ್ನು ಅಭಿವೃದ್ಧಿಪಡಿಸಿದೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ವರೆಗೆ ಸಾಗುತ್ತದೆ. ನಂತರ ಅಷ್ಟು ದೂರದಲ್ಲಿದ್ದುಕೊಂಡೇ ಸೂರ್ಯನ ಕೊರೊನಾವನ್ನು ನಿರಂತರವಾಗಿ ಅಧ್ಯಯನ ಮಾಡುವ ಸಾಮರ್ಥ್ಯ ಈ ಸಾಧನಕ್ಕಿದೆ.

ಪೇಲೋಡ್ ಪ್ರಧಾನ ತನಿಖಾಧಿಕಾರಿ ಪ್ರೊಫೆಸರ್ R.ರಮೇಶ್ ಅವರು ಹೇಳುವಂತೆ, ಈ ಸಾಧನವನ್ನು ಸೂರ್ಯನ ಕರೋನಾಗ್ರಾಫ್ ಅನ್ನು ಪ್ರತಿ ನಿಮಿಷವೂ ಸೂರ್ಯನ ನಿಖರ ಚಿತ್ರಗಳನ್ನು ಸೆರೆಹಿಡಿಯಲು ರಚಿಸಲಾಗಿದೆ.
ಇನ್ನೂ ಮುಖ್ಯವಾಗಿ ಆದಿತ್ಯ ಎಲ್1 ಕಳುಹಿಸುವ ಮಾಹಿತಿ, ಫೋಟೊಗಳನ್ನು ನೈಜ ಸಮಯದಲ್ಲಿ ನಿರ್ವಹಿಸಲು, ಆಪರೇಟ್ ಮಾಡಲು ಇಸ್ರೋ ಸಿದ್ಧವಾಗಬೆಕಿದೆ. ದೊರೆತ ದತ್ತಾಂಶವನ್ನು ನಿರ್ವಹಿಸಿದ 24 ಗಂಟೆಗಳ ನಂತರ ಅವುಗಳು ಭೂಮಿಗೆ (ISRO) ಬರಲಿವೆ. ಅದರ ಕುರಿತು ಸಾರ್ವಜನಿಕ ಪ್ರಸಾರ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಅಗಾಧ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿದೆ
ಆದಿತ್ಯ ಎಲ್1 ನಿತ್ಯ ಕಳುಹಿಸುವ ಬೃಹತ್ ದತ್ತಾಂಶವನ್ನು ಸಂಪೂರ್ಣ ವಾಗಿ ವಿಶ್ಲೇಷಿಸಲು, ಅಧ್ಯಯನ ಮಾಡಲು ISRO ಮತ್ತು IIA, ಸಂಸ್ಥೆಗಳಿಗೆ ಆಗಾಧವಾದ ಕಂಪ್ಯೂಟಿಂಗ್ ಶಕ್ತಿಯ ಅಗತ್ಯವಿದೆ. ಸ್ಟೋರೇಜ್, ಡೌನ್‌ಲೋಡ್ ಅತ್ಯಂತ ವೇಗವಾಗಿ ನಡೆಯಬೇಕಿರುತ್ತದೆ.
ಇನ್ನೂ ಸೂರ್ಯನ ಕುರಿತು ಭೂಮಿಗೆ ಬರುವ ತಡೆರಹಿತ ಡೇಟಾ ನಿರ್ವಹಣೆ ಮಾಡಲು ಎಲ್ಲಾ ಸಾಫ್ಟ್‌ವೇರ್ ಘಟಕಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ. ಎಲ್ಲ ಸಾಫ್ಟ್‌ವೇರ್ ಗಳನ್ನು ಈಗಾಗಲೇ ಪರೀಕ್ಷಿಸುವ ಕಾರ್ಯ ಆರಂಭವಾಗಿದೆ. ಕನಿಷ್ಠ ಸಮಯದಲ್ಲಿ ಆದಿತ್ಯ ಎಲ್ಲ ಕಳುಹಿಸುವ ಮಾಹಿತಿಯನ್ನು ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್‌ನಲ್ಲಿ ಡೌನ್‌ಲೋಡ್ ಮಾಡಲಾಗುವುದು. ನಂತರ ಮಾಹಿತಿ ಕ್ರಮೇಣ ಪ್ರಕ್ರಿಯೆಗೆ ಒಳಪಡುತ್ತದೆ. ಆಮೇಲೆ ಪೆಲೋಡ್ ಕಾರ್ಯಾಚರಣೆಗೆ ಕಳುಹಿಸುತ್ತಾರೆ.
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಕೇಂದ್ರವು ಕೇವಲ ಒಂದೇ ದಿನದಲ್ಲಿ ದತ್ತಾಂಶಗಳನ್ನು ಪ್ರಕ್ರಿಯೆಗೊಳಿಸುತ್ತದೆ. ನಂತರ ಸಾರ್ವಜನಿಕ ಪ್ರಸಾರಕ್ಕಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರಕ್ಕೆ ಕಳುಹಿಸತ್ತದೆ ಎಂದು ತಿಳಿಸಿದರು.
VELC ಆದಿತ್ಯ-L1 ವೀಕ್ಷಣಾಲಯದಲ್ಲಿ ಅತ್ಯಂತ ಪ್ರಮುಖವಾದ ಪೇಲೋಡ್ ಆಗಿದೆ. ಇದು ಆರು ಇನ್ನಿತರ ಪೇಲೋಡ್‌ಗಳ ಜತೆಗೂಡಿ ಮುಂದಿನ ಐದು ವರ್ಷಗಳ ವರೆಗೆ ಸೂರ್ಯನನ್ನು ವೀಕ್ಷಣೆ ಮಾಡಲಿದೆ. ನಿಗದಿತ ಕಕ್ಷೆ ಸುತ್ತಲಿದೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications