ಆದಿತ್ಯ ಎಲ್-1 ಯಶಸ್ವಿ ಉಡಾವಣೆ: ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ರಾಜಕೀಯ ಗಣ್ಯರು

ಆದಿತ್ಯ ಎಲ್‌-1 ಎಕ್ಸ್‌ಎಲ್ ಆವೃತ್ತಿಯ ಪಿಎಸ್‌ಎಲ್‌ವಿ ರಾಕೆಟ್‌ನ ಸಹಾಯದಿಂದ ಗಮ್ಯಸ್ಥಾನಕ್ಕೆ ಪಯಣಿಸುತ್ತಿದ್ದು, ಸುಮಾರು 120 ರಿಂದ 125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. ಅಂದರೆ ನಾಲ್ಕು ತಿಂಗಳು ಆದಿತ್ಯ-ಎಲ್‌1 ಯೋಜನೆಯ ಅವಧಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಸೂರ್ಯಯಾನದ ನೌಕೆಯು ಎಲ್-1ಗೆ ಸೇರುವ ನಿರೀಕ್ಷೆ ಇದೆ.

ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ ಎಲ್‌-1 ಗಗನ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆದಿತ್ಯ ಎಲ್‌-1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ ಉಡಾವಣೆ ಯಶಸ್ವಿಯಾಗಿದೆ ಎಂದು ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ ತಿಳಿಸಿದೆ. ಶ್ರೀಹರಿಕೋಟಾದಲ್ಲಿ ಸಾವಿರಾರು ಮಂದಿ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.

Successful launch of Aditya L-1: Political elites thank scientists

ಚಂದ್ರನ ಬಳಿಕ ಈಗ ಇಸ್ರೋ ಸೂರ್ಯ ಅಧ್ಯಯನ ನಡೆಸಲು ಆದಿತ್ಯ ಎಲ್-1 ಉಪಗ್ರಹ ಉಡಾವಣೆ ಮಾಡಲಾಗಿದ್ದು ಈ ಸಂಶೋಧನಾ ಕಾರ್ಯ ಯಶಸ್ವಿಯಾಗಲೆಂದು ನಡೆದ ಪೂಜೆ ಪುನಸ್ಕಾರಗಳು ಫಲನೀಡಿವೆ. ನಿರೀಕ್ಷೆಯಂತೆ ಆದಿತ್ಯ ಎಲ್-1 ಯಶಸ್ವಿಯಾಗಿ ಉಡಾವಣೆಯಾಗಿದ್ದು 125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. ಆದಿತ್ಯ ಎಲ್-1 ಯಶಸ್ವಿ ಉಡಾವಣೆ ವಿಜ್ಞಾನಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಆದಿತ್ಯ ಎಲ್-1 ಯಶಸ್ವಿ ಉಡಾವಣೆ: ವಿಜ್ಞಾನಿಗಳಿಗೆ ಕೃತಜ್ಞತೆ ತಿಳಿಸಿದ ಮಲ್ಲಿಕಾರ್ಜುನ ಖರ್ಗೆ

ಬಾಹ್ಯಾಕಾಶ ಸಂಸ್ಥೆ ಇಸ್ರೋ ಮೊಟ್ಟ ಮೊದಲ ಬಾರಿಗೆ ಕೈಗೊಂಡಿದ್ದ ಸೂರ್ಯಯಾನದ ಆದಿತ್ಯ ಎಲ್-1 ಯಶಸ್ವಿಯಾಗಿ ಉಡಾವಣೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಸೌರ ವೀಕ್ಷಣಾ ಮಿಷನ್‌ ಆದಿತ್ಯ ಎಲ್-1 ಯಶಸ್ವಿ ಉಡಾವಣೆಗಾಗಿ ನಮ್ಮ ವಿಜ್ಞಾನಿಗಳು, ಬಾಹ್ಯಾಕಾಶ ಇಂಜಿನಿಯರ್‌ಗಳು, ಸಂಶೋಧಕರು ಮತ್ತು ಇಸ್ರೋನಲ್ಲಿರುವ ನಮ್ಮ ಕಠಿಣ ಪರಿಶ್ರಮದ ಸಿಬ್ಬಂದಿಗೆ ನಾವು ಋಣಿಯಾಗಿದ್ದೇವೆ ಮತ್ತು ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.


ಆದಿತ್ಯ ಎಲ್-1 ಯಶಸ್ವಿ ಉಡಾವಣೆ: ಮೋದಿ ಟ್ವೀಟ್

'ಚಂದ್ರಯಾನ-3 ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರೆಸಿದೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ -L1 ನ ಯಶಸ್ವಿ ಉಡಾವಣೆಗಾಗಿ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.


ಇದೊಂದು ಐತಿಹಾಸಿಕ ಸಾಧನೆ- ನಿತಿನ್‌ ಗಡ್ಕರಿ

ಆದಿತ್ಯ ಎಲ್-1 ಯಶಸ್ವಿಯಾಗಿ ಉಡಾವಣೆಯಾಗಿದ್ದು ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಾತನಾಡಿ, ವೈಜ್ಞಾನಿಕ ಜ್ಞಾನದ ಅನ್ವೇಷಣೆಯಲ್ಲಿ ಇದು ಐತಿಹಾಸಿಕ ಸಾಧನೆ. ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋ ತನ್ನ ಮೊದಲ ಬಾಹ್ಯಾಕಾಶ ಕಾರ್ಯಾಚರಣೆಯನ್ನು ವಿಜಯಶಾಲಿಯಾಗಿ ಪ್ರಾರಂಭಿಸಿದೆ. ಈ ಗಮನಾರ್ಹ ಪ್ರಯತ್ನವು ನಮ್ಮ ಹತ್ತಿರದ ನಕ್ಷತ್ರದ ರಹಸ್ಯಗಳನ್ನು ತಿಳಿಯಲು ಸಹಾಯವಾಗುತ್ತದೆ. ಜೊತೆಗೆ ಬಾಹ್ಯಾಕಾಶ ಹವಾಮಾನದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+