Aditya L1: ಸೂರ್ಯನ ಸಂಶೋಧನೆಗೆ ಆದಿತ್ಯ ಎಲ್-1 ಸಜ್ಜು: ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿದ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ತನ್ನ ಸೌರ ಮಿಷನ್ ಆದಿತ್ಯ-ಎಲ್ 1 ಉಡಾವಣಾ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿದೆ. "ಉಡಾವಣೆಯ ಸಿದ್ಧತೆಗಳು ಪ್ರಗತಿಯಲ್ಲಿವೆ. ಉಡಾವಣಾ ಪೂರ್ವಾಭ್ಯಾಸ, ವಾಹನದ ಆಂತರಿಕ ತಪಾಸಣೆ ಪೂರ್ಣಗೊಂಡಿದೆ" ಎಂದು ಎಕ್ಸ್‌ನಲ್ಲಿ ಇಸ್ರೋ ಹೇಳಿದೆ.
ಭಾರತದ ಮೊದಲ ಸೌರ ಮಿಷನ್ ಅನ್ನು ಸೆಪ್ಟೆಂಬರ್ 2 ರಂದು ಪ್ರಾರಂಭಿಸಲು ಇಸ್ರೋ ದಿನಾಂಕ ನಿಗದಿ ಮಾಡಿದ್ದು, ಉಪಗ್ರಹ ಉಡಾವಣೆ ಮಾಡಲಿದೆ. ಚಂದ್ರನ ಅಂಗಳದಲ್ಲಿ ಕಾಲಿಟ್ಟ ಇಸ್ರೋ ಈಗ ಸೂರ್ಯನ ಸಂಶೋಧನೆಗೆ ಮುಂದಾಗಿದೆ.

ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯ ವರ್ಗದ ಭಾರತೀಯ ಸೌರ ಮಿಷನ್ ಆಗಿದೆ. ಭೂಮಿಯಿಂದ ಸುಮಾರು 1.5 ಮಿಲಿಯನ್ (15 ಲಕ್ಷ) ಕಿಮೀ ದೂರದಲ್ಲಿರುವ ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರಾಂಜಿಯನ್ ಪಾಯಿಂಟ್1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲು ಯೋಜಿಸಲಾಗಿದೆ.
ಎಲ್1 ಬಿಂದುವಿನಲ್ಲಿ ಇರಿಸಲಾದ ಉಪಗ್ರಹವು ಯಾವುದೇ ಗ್ರಹಣವಿಲ್ಲದೆ ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಪ್ರಮುಖ ಪ್ರಯೋಜನವನ್ನು ಹೊಂದಿದೆ.
PSLV-C57/Aditya-L1 Mission:
— ISRO (@isro) August 30, 2023
The preparations for the launch are progressing.
The Launch Rehearsal - Vehicle Internal Checks are completed.
Images and Media Registration Link https://t.co/V44U6X2L76 #AdityaL1 pic.twitter.com/jRqdo9E6oM
ಸೂರ್ಯನ ಬಗ್ಗೆ ಮಹತ್ವದ ಅಧ್ಯಯನ
ವಿದ್ಯುತ್ಕಾಂತೀಯ ಮತ್ತು ಕಣ ಶೋಧಕಗಳನ್ನು ಬಳಸಿಕೊಂಡು ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳನ್ನು (ಕರೋನಾ) ವೀಕ್ಷಿಸಲು ಬಾಹ್ಯಾಕಾಶ ನೌಕೆಯು ಏಳು ಪೇಲೋಡ್‌ಗಳನ್ನು ಒಯ್ಯುತ್ತದೆ. ಎಲ್1 ನ ವಿಶೇಷ ವಾಂಟೇಜ್ ಪಾಯಿಂಟ್ ಅನ್ನು ಬಳಸಿಕೊಂಡು, ನಾಲ್ಕು ಪೇಲೋಡ್‌ಗಳು ನೇರವಾಗಿ ಸೂರ್ಯನನ್ನು ವೀಕ್ಷಿಸುತ್ತವೆ ಮತ್ತು ಉಳಿದ ಮೂರು ಪೇಲೋಡ್‌ಗಳು ಲ್ಯಾಗ್ರೇಂಜ್ ಪಾಯಿಂಟ್ ಎಲ್1 ನಲ್ಲಿ ಕಣಗಳು ಮತ್ತು ಕ್ಷೇತ್ರಗಳ ಸ್ಥಳದ ಅಧ್ಯಯನವನ್ನು ನಡೆಸಲಿವೆ.
ಇಸ್ರೋ ಹೇಳಿಕೊಂಡಿರುವ ಪ್ರಕಾರ: "ಆದಿತ್ಯ-ಎಲ್ 1 ಪೇಲೋಡ್‌ಗಳ ಸೂಟ್ ಕರೋನಲ್ ಹೀಟಿಂಗ್, ಕರೋನಲ್ ಮಾಸ್ ಎಜೆಕ್ಷನ್, ಪ್ರೀ-ಫ್ಲೇರ್ ಮತ್ತು ಫ್ಲೇರ್ ಚಟುವಟಿಕೆಗಳು ಮತ್ತು ಅವುಗಳ ಗುಣಲಕ್ಷಣಗಳು, ಬಾಹ್ಯಾಕಾಶ ಹವಾಮಾನದ ಡೈನಾಮಿಕ್ಸ್, ಕಣಗಳ ಪ್ರಸರಣ, . ಅಂತರಗ್ರಹ ಮಾಧ್ಯಮದಲ್ಲಿಅಧ್ಯಯನದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅತ್ಯಂತ ನಿರ್ಣಾಯಕ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ"
ಭೂಮಿಯಿಂದ ಸೂರ್ಯ 15 ಮಿಲಿಯನ್ (15 ಕೋಟಿ) ಕಿಲೋ ಮೀಟರ್ ದೂರದಲ್ಲಿದೆ. ಆದಿತ್ಯ ಎಲ್ 1 ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರ ಚಲಿಸಲಿದ್ದು, ಅಲ್ಲಿಂದ ಸೂರ್ಯನ ಬಗ್ಗೆ ಅಧ್ಯಯನ ನಡೆಸಿ ಇಸ್ರೋಗೆ ಮಾಹಿತಿ ನೀಡಲಿದೆ. ಚಂದ್ರಯಾನ 3 ಯಶಸ್ಸಿನ ಬಳಿಕ ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲಿದೆ.












Click it and Unblock the Notifications