ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ 14 ಲಕ್ಷ ಮಕ್ಕಳ ಬಳಿ ಮೊಬೈಲೇ ಇಲ್ಲ; ಆನ್‌ಲೈನ್ ಶಿಕ್ಷಣದ ಕಥೆ?

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಜುಲೈ 02: ಕೊರೊನಾ ಯಾವ ಕ್ಷೇತ್ರದ ಮೇಲೆ ಪರಿಣಾಮ ಬೀರಿಲ್ಲ? ಶಿಕ್ಷಣ ಕ್ಷೇತ್ರಕ್ಕಂತೂ ಕೊರೊನಾ ಕೊಟ್ಟಿರುವ ಪೆಟ್ಟು ದೊಡ್ಡದೇ. ಕೊರೊನಾ ಕಾರಣವಾಗಿ ಕಳೆದ ಒಂದೂವರೆ ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳು ಸಾಗುತ್ತಿಲ್ಲ. ಶಾಲೆಗಳು ಬಂದ್ ಆಗಿವೆ.

ಈ ಸಮಯದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ರಾಜ್ಯಾದ್ಯಂತ "ಆನ್‌ಲೈನ್" ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಆನ್‌ಲೈನ್ ತರಗತಿಗಳಿಗಿರುವ ತೊಡಕೇನು ಕಡಿಮೆಯೇ? ಇದಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆ ಸಮೀಕ್ಷೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 2020-21 ಶೈಕ್ಷಣಿಕ ಸಾಲಿನ 1-10ನೇ ತರಗತಿವರೆಗಿನ ವಿದ್ಯಾರ್ಥಿಗಳ ಮೇಲೆ ನಡೆಸಿದ ಸಮೀಕ್ಷೆಯ ವರದಿ ಯೋಚನೆಗೆ ದೂಡುವಂತಿದೆ. ಸಮೀಕ್ಷೆ ಏನು ಹೇಳುತ್ತಿದೆ? ಮುಂದೆ ಓದಿ...

(ಪ್ರಾತಿನಿಧಿಕ ಚಿತ್ರಗಳು)

40% ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ

40% ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ

ಮೊಟ್ಟಮೊದಲನೆಯದಾಗಿ, ಸಮೀಕ್ಷೆಯ ವರದಿ ಪ್ರಕಾರ, ರಾಜ್ಯಾದ್ಯಂತ ಈ ಆನ್‌ಲೈನ್ ತರಗತಿಗಳು ತಲುಪಿರುವುದು ಶೇ 60ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ. ಹಾಗಿದ್ದರೆ ಇನ್ನುಳಿದ 40% ವಿದ್ಯಾರ್ಥಿಗಳ ಕಥೆ? ಈ ವಿದ್ಯಾರ್ಥಿಗಳು ಕೊರೊನಾ ಅವಧಿಯಲ್ಲಿ ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಇದಕ್ಕೆ ಕಾರಣ ಡಿಜಿಟಲ್ ಸಾಧನಗಳ ಅಲಭ್ಯತೆ. ಸ್ಮಾರ್ಟ್‌ಫೋನ್ ಇಲ್ಲದ ಕಾರಣಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಕ್ಕಳು ಆನ್‌ಲೈನ್ ಕಲಿಕೆ ಪಡೆಯಲು ಸಾಧ್ಯವಾಗಿಲ್ಲ.

58,59,907 ಮಕ್ಕಳ ಬಳಿ ಸ್ಮಾರ್ಟ್‌ಫೋನ್

58,59,907 ಮಕ್ಕಳ ಬಳಿ ಸ್ಮಾರ್ಟ್‌ಫೋನ್

ರಾಜ್ಯದಲ್ಲಿ ಸದ್ಯಕ್ಕೆ 1ನೇ ತರಗತಿಯಿಂದ 10ನೇ ತರಗತಿವರೆಗೆ 1,05,09,367 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ ಶಾಲೆಗೆ ದಾಖಲಾದ ಮಕ್ಕಳ ಸಂಖ್ಯೆ 93,01,805. ಇದರಲ್ಲಿ ಮೊಬೈಲ್ ಬಳಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 79,03,329. ಅದರಲ್ಲಿ 58,59,907 ಮಕ್ಕಳು ಸ್ಮಾರ್ಟ್‌ಫೋನ್ ಹೊಂದಿದ್ದಾರೆ. ಇಂಟರ್‌ನೆಟ್ ಸೌಲಭ್ಯ ಹೊಂದಿರುವ ಮಕ್ಕಳ ಸಂಖ್ಯೆ 37,79,965 ಆಗಿದೆ.

ಮೈಸೂರು; ಟ್ಯಾಬ್‌ಗಾಗಿ ನಿತ್ಯವೂ ಸೊಪ್ಪು ಮಾರುವ ವಿದ್ಯಾರ್ಥಿನಿ
14 ಲಕ್ಷಕ್ಕೂ ಹೆಚ್ಚು ಮಕ್ಕಳ ಬಳಿ ಮೊಬೈಲ್ ಇಲ್ಲ

14 ಲಕ್ಷಕ್ಕೂ ಹೆಚ್ಚು ಮಕ್ಕಳ ಬಳಿ ಮೊಬೈಲ್ ಇಲ್ಲ

ಶಿಕ್ಷಣ ಇಲಾಖೆಯ ಸಮೀಕ್ಷೆ ಪ್ರಕಾರ ಸುಮಾರು 21 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಳಿ ಬೇಸಿಕ್ ಮೊಬೈಲ್ ಇದೆ. ಆದರೆ ಸುಮಾರು 14 ಲಕ್ಷಕ್ಕೂ ಹೆಚ್ಚು ಮಕ್ಕಳ ಬಳಿ ಮೊಬೈಲ್ ಕೂಡ ಇಲ್ಲವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

31.3 ಲಕ್ಷ, ಅಂದರೆ 33% ಮಕ್ಕಳ ಬಳಿ ಮೊಬೈಲ್‌, ಲ್ಯಾಪ್‌ಪಾಟ್‌, ಟ್ಯಾಬ್‌ನಂಥ ಯಾವುದೇ ಡಿಜಿಟಲ್ ತಂತ್ರಜ್ಞಾನದ ಸೌಲಭ್ಯವಿಲ್ಲದೇ ವರ್ಷಗಳ ಕಾಲ ಶಿಕ್ಷಣದಿಂದ ದೂರವುಳಿದಿದ್ದಾರೆ. ಸುಮಾರು 81,14,097 ವಿದ್ಯಾರ್ಥಿಗಳು ದೂರದರ್ಶನದ ಮೂಲಕ ಹಾಗೂ 10,45,288 ವಿದ್ಯಾರ್ಥಿಗಳು ರೇಡಿಯೋ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ 8.6 ಲಕ್ಷ ವಿದ್ಯಾರ್ಥಿಗಳ ಮನೆಗಳಲ್ಲಿ ರೇಡಿಯೋ, ಟಿ.ವಿ ಕೂಡ ಇಲ್ಲ. ಈ ಅಂಕಿ ಅಂಶವೇ ಆಘಾತಕಾರಿಯಾಗಿದ್ದು, ಈ ಮಕ್ಕಳ ಭವಿಷ್ಯದ ಕಥೆಯೇನು ಎಂಬ ಪ್ರಶ್ನೆ ಮೂಡಿಸುತ್ತವೆ.

ಆನ್‌ಲೈನ್ ಕಲಿಕೆ: ಡಿಜಿಟಲ್ ಸಾಧನಗಳಿಲ್ಲದೇ ಶಿಕ್ಷಣದಿಂದ ಮಕ್ಕಳು ದೂರ!ಆನ್‌ಲೈನ್ ಕಲಿಕೆ: ಡಿಜಿಟಲ್ ಸಾಧನಗಳಿಲ್ಲದೇ ಶಿಕ್ಷಣದಿಂದ ಮಕ್ಕಳು ದೂರ!

ತಂತ್ರಜ್ಞಾನದ ಲಭ್ಯತೆಯಿಲ್ಲದೇ ಕಲಿಕೆಯಿಂದ ದೂರವುಳಿದ ಮಕ್ಕಳು

ತಂತ್ರಜ್ಞಾನದ ಲಭ್ಯತೆಯಿಲ್ಲದೇ ಕಲಿಕೆಯಿಂದ ದೂರವುಳಿದ ಮಕ್ಕಳು

ಹೈಕೋರ್ಟ್ ನಿರ್ದೇಶನದ ಮೇರೆಗೆ ಶಿಕ್ಷಣ ಇಲಾಖೆ ಈ ಸಮೀಕ್ಷೆಯನ್ನು ಕೈಗೊಂಡಿತ್ತು. ಎಷ್ಟು ಮಕ್ಕಳು ತಂತ್ರಜ್ಞಾನದ ಲಭ್ಯತೆ ಇಲ್ಲದೇ ಶಿಕ್ಷಣದಿಂದ ದೂರವುಳಿದಿದ್ದಾರೆ ಎಂಬುದನ್ನು ಕಂಡುಕೊಳ್ಳಲು ಸಮೀಕ್ಷೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಜೂನ್ 8ರಂದು ವರದಿ ಸಲ್ಲಿಸಿದ್ದು, ಅದರಲ್ಲಿ 20% ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿರುವುದಾಗಿ ತಿಳಿಸಿತ್ತು. ಆದರೆ ಇದರ ಪ್ರಮಾಣ ಹೆಚ್ಚಾಗಿಯೇ ಇದೆ.

ಯಾವ್ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತ?

ಯಾವ್ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟಾರೆ 1.1 ಲಕ್ಷ ವಿದ್ಯಾರ್ಥಿಗಳಿದ್ದು, ಅದರಲ್ಲಿ 42,309 ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸಂಪರ್ಕವಿಲ್ಲ. ಕಲಬುರಗಿ ಜಿಲ್ಲೆಯಲ್ಲಿ 5.4 ಲಕ್ಷ ವಿದ್ಯಾರ್ಥಿಗಳ ಪೈಕಿ 1.7 ಲಕ್ಷ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸೌಲಭ್ಯವಿಲ್ಲ. ಅಲ್ಲಿಯೇ 1.4 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ ಇಲ್ಲ.

ಬಳ್ಳಾರಿ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೌಲಭ್ಯವಿರದ 2.6 ಲಕ್ಷ ವಿದ್ಯಾರ್ಥಿಗಳಿದ್ದಾರೆ. 2.2 ಲಕ್ಷ ವಿದ್ಯಾರ್ಥಿಗಳ ಬಳಿ ಡಿಜಿಟಲ್ ಸಾಧನವಿಲ್ಲ. 44,295 ವಿದ್ಯಾರ್ಥಿಗಳ ಮನೆಯಲ್ಲಿ ದೂರದರ್ಶನ, ರೇಡಿಯೋ ಇಲ್ಲ. ವಿಜಯಪುರದಲ್ಲಿ ಒಟ್ಟಾರೆ 5 ಲಕ್ಷ ವಿದ್ಯಾರ್ಥಿಗಳ ಪೈಕಿ 2.2 ಲಕ್ಷ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸೌಲಭ್ಯವಿಲ್ಲ. 1.8 ಲಕ್ಷ ವಿದ್ಯಾರ್ಥಿಗಳ ಬಳಿ ಡಿಜಿಟಲ್ ಸಾಧನವಿಲ್ಲ. 75,419 ವಿದ್ಯಾರ್ಥಿಗಳ ಮನೆಯಲ್ಲಿ ದೂರದರ್ಶನ, ರೇಡಿಯೋ ಇಲ್ಲ. ಈ ಅಂಕಿಅಂಶಗಳೇ ರಾಜ್ಯದಲ್ಲಿ ಅರ್ಧಕ್ಕರ್ಧ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವುಳಿದಿದ್ದಾರೆ ಎಂಬುದನ್ನು ಸೂಚಿಸುತ್ತಿವೆ.

English summary
More than 14 lakh students in karnataka dont have even basic obile set and almost 40% of students completely not getting education, says education department survey
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X