ಮೈಸೂರು; ಟ್ಯಾಬ್‌ಗಾಗಿ ನಿತ್ಯವೂ ಸೊಪ್ಪು ಮಾರುವ ವಿದ್ಯಾರ್ಥಿನಿ
ಮೈಸೂರು, ಜುಲೈ 01; ಕೋವಿಡ್ ಹೊಡೆತಕ್ಕೆ ಎಲ್ಲಾ ವರ್ಗದ ಜನರ ಜೀವನ ದುಸ್ತರವಾಗಿದ್ದು, ಮಹಾಮಾರಿ ಆರ್ಭಟದಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಸಹ ಹಾಳಾಗಿದೆ.
Recommended Video
ಕೊರೊನಾದಿಂದ ಶಾಲಾ ಹಾಗೂ ಕಾಲೇಜುಗಳಲ್ಲಿ ತರಗತಿಗಳು ನಡೆಯದ ಪರಿಣಾಮ ಮಕ್ಕಳು ಆನ್‌ಲೈನ್ ತರಗತಿಯನ್ನೇ ಅವಲಂಬಿಸಿದ್ದಾರೆ. ತರಗತಿಗಳಿಗೆ ಹಾಜರಾಗಲು ಮಕ್ಕಳು ಇಂಟರ್‌ನೆಟ್ ಹಾಗೂ ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ.
ಮೈಸೂರಿನ ವಿದ್ಯಾರ್ಥಿನಿಯೊಬ್ಬಳು ಆನ್‌ಲೈನ್ ತರಗತಿಗೆ ಟ್ಯಾಬ್ ಖರೀದಿಸಲು ಸೊಪ್ಪು ಮಾರುತ್ತಿದ್ದಾಳೆ. ಆನ್‌ಲೈನ್ ಕ್ಲಾಸ್‌ಗಾಗಿ ಮೈಸೂರು ನಗರದ ಸಾತಗಳ್ಳಿ ನಿವಾಸಿ ಕೀರ್ತನಾಗೆ ಟ್ಯಾಬ್ ಅಗ್ಯವಿದೆ.

ಕೀರ್ತನಾ ತಂದೆ ಹನುಮಂತ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದಾರೆ. ಆದರೆ ಇವರು ಸಹ ಮಗಳ ಶಿಕ್ಷಣಕ್ಕಾಗಿ ಸೊಪ್ಪು ಮಾರುತ್ತಿರುವುದು ಬಡತನಕ್ಕೆ ಸಾಕ್ಷಿಯಾಗಿದೆ.
10 ತರಗತಿ ಓದುತ್ತಿರುವ ಕೀರ್ತನಾಗೆ ಆನ್ ಲೈನ್ ಶಿಕ್ಷಣ ಅನಿವಾರ್ಯ. ಆದರೆ ಟ್ಯಾಬ್ ಖರೀದಿಗೂ ಹಣವಿಲ್ಲದ ಪರಿಣಾಮ ವಿದ್ಯಾರ್ಥಿನಿ ತಂದೆ ಹನುಮಂತಪ್ಪ ಜೊತೆ ಸೊಪ್ಪು ಮಾರಾಟ ಮಾಡುತ್ತಲೇ ಪರೀಕ್ಷೆಗಾಗಿ ಓದುತ್ತಿದ್ದಾಳೆ.
ಆನ್‌ಲೈನ್ ಶಿಕ್ಷಣ ಬಡ ವಿದ್ಯಾರ್ಥಿಗಳ ಪಾಲಿಗೆ ಸಂಕಷ್ಟ ತಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕೀರ್ತನಾಳಿಗೆ ಒಂದು ಟ್ಯಾಬ್ ಕೊಡಿಸುವಂತಾಗಲಿ ಮತ್ತು ಓದುವ ವಯಸ್ಸಿನಲ್ಲಿ ಬೀದಿಯಲ್ಲಿ ಕುಳಿತು ದುಡಿಯುವುದು ನಿಲ್ಲಲಿ ಎಂಬುದು ಎಲ್ಲರ ಆಶಯ.












Click it and Unblock the Notifications