ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vehicle Fitness Certificate: ನಿಮ್ಮ ವಾಹನದ ಎಫ್‌ಸಿ ಮಾಡಿಸುವುದು ಹೇಗೆ?

|
Google Oneindia Kannada News

ನೀವು ಒಂದು ವಾಹನದೊಂದಿಗೆ ರಸ್ತೆಗೆ ಇಳಿಯಬೇಕೆಂದರೆ ಕೆಲ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ. ವಿಮೆ, ಮಾಲಿನ್ಯ ಪರೀಕ್ಷೆ, ಆರ್‌ಸಿ, ಡ್ರೈವಿಂಗ್ ಲೈಸೆನ್ಸ್, ರೋಡ್ ಟ್ಯಾಕ್ಸ್ ಇವುಗಳ ದಾಖಲೆ ನಿಮ್ಮೊಂದಿಗೆ ಇರಬೇಕು. ಇದರ ಜೊತೆಗೆ ಈಗ ಎಫ್‌ಸಿಯನ್ನೂ ಕಡ್ಡಾಯಪಡಿಸಲಾಗಿದೆ.

ಏನಿದು ಎಫ್‌ಸಿ? ಇದು ಫಿಟ್ನೆಸ್ ಸರ್ಟಿಫಿಕೇಟ್. ನಿಮ್ಮ ವಾಹನದ ಕ್ಷಮತಾ ಪ್ರಮಾಣಪತ್ರ. ಸೇನೆ, ಪೊಲೀಸ್ ಇತ್ಯಾದಿ ಉದ್ಯೋಗಕ್ಕೆ ಸೇರಬೇಕಾದರೆ ಅಭ್ಯರ್ಥಿಯ ಕ್ಷಮತಾ ಪರೀಕ್ಷೆ ಮಾಡಲಾಗುತ್ತದೆ. ಹಾಗೆಯೇ, ವಾಹನ ರಸ್ತೆಗೆ ಇಳಿಯಬೇಕೆಂದರೆ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗುವುದು ಈಗ ಕಡ್ಡಾಯ.

ಜನಸೇವಕ ತಿಳಿದಿರಿ; ವೃದ್ಧರ ಪಿಂಚಣಿ ಸೇರಿದಂತೆ 80 ಸರಕಾರಿ ಸೇವೆಗಳು ನಿಮ್ಮ ಮನೆಬಾಗಿಲಿಗೆಜನಸೇವಕ ತಿಳಿದಿರಿ; ವೃದ್ಧರ ಪಿಂಚಣಿ ಸೇರಿದಂತೆ 80 ಸರಕಾರಿ ಸೇವೆಗಳು ನಿಮ್ಮ ಮನೆಬಾಗಿಲಿಗೆ

ನಿಮ್ಮ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ (ಎಫ್‌ಸಿ) ಮಾಡಿಸಿಲ್ಲವೆಂದರೆ ತ್ವರೆ ಮಾಡಿ ಈಗಲೇ ಮಾಡಿಸಿ. ಆರ್‌ಟಿಒನವರು ನಿಮ್ಮ ವಾಹನವನ್ನು ಸೀಜ್ ಮಾಡಬಹುದು, ಅಥವಾ ಭಾರೀ ದಂಡ ವಿಧಿಸಬಹುದು. ಮೋಟಾರು ವಾಹನ ಕಾಯ್ದೆ ಪ್ರಕಾರ, ನಿಮ್ಮ ವಾಹನದ ನೊಂದಣಿಯು ಸಿಂಧುವಾಗಿ ಉಳಿಯಬೇಕಾದರೆ ವಾಹನದ ಎಫ್‌ಸಿ ಮಾಡಿಸಿರಬೇಕು. ಎಫ್‌ಸಿ ಇಲ್ಲದಿದ್ದರೆ ನಿಮ್ಮ ವಾಹನದ ನೊಂದಣಿ ಮಾನ್ಯವೆನಿಸುವುದಿಲ್ಲ.

ಹಳೆಯ ವಾಹನವಷ್ಟೇ ಅಲ್ಲ, ಎಲ್ಲಾ ವಾಹನಗಳಿಗೂ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸುವುದು ಅಗತ್ಯ. ಕರ್ನಾಟಕದಲ್ಲಿ ವಾಹನದ ಎಫ್‌ಸಿ ಮಾಡಿಸುವುದು ಹೇಗೆ ಇತ್ಯಾದಿ ಕ್ರಮಗಳ ವಿವರ ಇಲ್ಲಿದೆ.

ಎಫ್‌ಸಿ ಮಾಡಿಸಲು ಬೇಕಾದ ದಾಖಲೆಗಳು

ಎಫ್‌ಸಿ ಮಾಡಿಸಲು ಬೇಕಾದ ದಾಖಲೆಗಳು

* ಫಾರ್ಮ್ 20
* ಫಾರ್ಮ್ 21 (ಸೇಲ್ಸ್ ಸರ್ಟಿಫಿಕೇಶನ್)
* ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ (ಪೊಲ್ಯೂಶನ್ ಸರ್ಟಿಫಿಕೇಟ್)
* ವಾಣಿಜ್ಯ ಪ್ರಯಾಣಿಕ ವಾಹನಗಳಾದರೆ ಎಸ್‌ಟಿಎಯಿಂದ ಲೆಟರ್ ಆಫ್ ಇನ್‌ಡೆಮ್ನಿಟಿ (ಎಲ್‌ಒಐ)
* ತಾತ್ಕಾಲಿಕ ನೊಂದಣಿ ಇದ್ದರೆ ಅದರ ದಾಖಲೆ
* ಫಾರ್ಮ್ 22 (ರೋಡ್‌ವರ್ತಿ ಸರ್ಟಿಫೀಕೇಟ್)
* ಶುಲ್ಕ

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹೊಸ ಕಂತು; ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ?ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹೊಸ ಕಂತು; ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ?

ಎಫ್‌ಸಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು

ಎಫ್‌ಸಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು

* ಪರಿವಾಹನ್ (https://vahan.parivahan.gov.in/vahanservice/vahan/ui/statevalidation/homepage.xhtml) ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇದೆ.
* ಈ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ನಿಮ್ಮ ವಾಹನದ ನೊಂದಣೆ ಸಂಖ್ಯೆ ನಮೂದಿಸಿ
* ಪ್ರೊಸೀಡ್ ಕ್ಲಿಕ್ ಮಾಡಿ
* ಆನ್‌ಲೈನ್ ಸರ್ವಿಸಸ್ ಕ್ಲಿಕ್ ಮಾಡಿ
* ಅಪ್ಲಿಕೇಶನ್ ಫಾರ್ ಫಿಟ್ನೆಸ್ ಸರ್ಟಿಫಿಕೇಟ್ ಆಯ್ಕೆಮಾಡಿ
* ನಿಮ್ಮ ವಾಹನದ ಚಾಸಿಸ್ ನಂಬರ್ ಮತ್ತು ಮೊಬೈಲ್ ನಂಬರ್ ಹಾಕಿ
* ಜನರೇಟ್ ಒಟಿಪಿ ಕ್ಲಿಕ್ ಮಾಡಿ
* ನಿಮ್ಮ ಮೊಬೈಲ್ ನಂಬರ್‌ಗೆ ಬಂದ ಓಟಿಪಿಯನ್ನು ನಮೂದಿಸಿ
* ನಂತರ 'ಶೋ ಡೀಟೇಲ್ಸ್' ಬಟನ್ ಮೇಲೆ ಕ್ಲಿಕ್ ಮಾಡಿ
* ವಾಹನದ ಇನ್ಷೂರೆನ್ಸ್ ಸೇರಿದಂತೆ ಎಲ್ಲಾ ಅಗತ್ಯ ವಿವರಗಳನ್ನು ತುಂಬಿರಿ
* ನಂತರ ಪೇಮೆಂಟ್ ಬಟನ್ ಕ್ಲಿಕ್ ಮಾಡಿ ನಿಗದಿತ ಶುಲ್ಕ ಹಣವನ್ನು ಆನ್‌ಲೈನ್‌ನಲ್ಲೇ ಪಾವತಿಸಬಹುದು.

ಎಫ್‌ಸಿ ಅವಧಿ ಎಷ್ಟು?

ಎಫ್‌ಸಿ ಅವಧಿ ಎಷ್ಟು?

ಕರ್ನಾಟಕದಲ್ಲಿ ವಾಹನದ ಫಿಟ್ನೆಸ್ ಸರ್ಟಿಫಿಕೇಟ್‌ನ ಕಾಲಾವಧಿ ಖಾಸಗಿ ವಾಹನಕ್ಕೆ ಬೇರೆ ವಾಣಿಜ್ಯ ವಾಹನಕ್ಕೆ ಬೇರೆ ಇರುತ್ತದೆ. ಖಾಸಗಿ ವಾಹನವಾದರೆ ಒಮ್ಮೆ ಎಫ್‌ಸಿ ಮಾಡಿಸಿದರೆ 15 ವರ್ಷದವರೆಗೂ ಅದು ಸಿಂಧುವಾಗಿರುತ್ತದೆ. ಅದಾದ ಬಳಿಕ ಪ್ರತೀ 5 ವರ್ಷಕ್ಕೆ ನೀವು ಎಫ್‌ಸಿ ರಿನಿವಲ್ ಮಾಡಿಸಬೇಕಾಗುತ್ತದೆ.

ಇನ್ನು, ವಾಣಿಜ್ಯ ವಾಹನವಾದರೆ ಮೊದಲ ಬಾರಿಗೆ ಎಫ್‌ಸಿ ಕಾಲಾವಧಿ 2 ವರ್ಷ ಇರುತ್ತದೆ. ಅದಾದ ನಂತರ ಪ್ರತೀ ಎರಡು ವರ್ಷಕ್ಕೊಮ್ಮೆ ಪ್ರಮಾಣಪತ್ರ ನವೀಕರಿಸುತ್ತಿರಬೇಕು.

ಎಫ್‌ಸಿ ನವೀಕರಿಸುವುದು?

ಎಫ್‌ಸಿ ನವೀಕರಿಸುವುದು?

ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸಲು ಫಾರ್ಮ್ ನಂಬರ್ 25 ಇದೆ. ಈ ಅರ್ಜಿಯನ್ನು ತುಂಬಿಸುವುದು. ಹಾಗೆಯೇ, ವಾಹನದ ನೊಂದಣಿ ಪ್ರಮಾಣಪತ್ರ, ರಸ್ತೆ ತೆರಿಗೆ ಭರ್ತಿಯ ದಾಖಲೆ ಹೊಂದಿರಬೇಕು. ೨೫ ರೂ ಶುಲ್ಕ ನಿಗದಿಯಾಗಿದೆ.

ಒಂದು ವೇಳೆ ನಿಮ್ಮ ಎಫ್‌ಸಿ ದಾಖಲೆ ಕಳೆದುಹೋದಲ್ಲಿ ನಕಲಿ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯ. ಅದಕ್ಕಾಗಿ ನೀವು ಖಾಲಿ ಕಾಗದ ಮೇಲೆ ಅರ್ಜಿ ಬರೆಯಬೇಕು. ನಿಮ್ಮ ಮೂಲ ಎಫ್‌ಸಿ ಕೊಡಲಾದ ದಿನಾಂಕ ಮತ್ತು ಅದರ ಅಂತ್ಯ ಸಮಯವನ್ನು ಈ ಅರ್ಜಿಯಲ್ಲಿ ನಮೂದಿಸಬೇಕು.

ಪೊಲೀಸ್ ವರದಿ, ಟ್ಯಾಕ್ಸ್ ಕ್ಲಿಯರೆನ್ಸ್ ರಿಪೋರ್ಟ್, ಟ್ರಾಫಿಕ್ ಇಲಾಖೆಯಿಂದ ಚಲನ್ ಕ್ಲಿಯರೆನ್ಸ್, ಎಫ್‌ಸಿಯ ಫೋಟೋಕಾಪಿ ಈ ದಾಖಲೆಗಳನ್ನು ಸಲ್ಲಿಸಬೇಕು. ಶುಲ್ಕ ೧೨೦ ರೂ ಇರುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Vehicle Fitness Certificate is compulsory if the vehicle has to be used. Here is details of procedure on how to get vehicle FC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X