ಇರಾನ್ ಯುದ್ಧದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಮಹತ್ವದ ಸಂದೇಶ | Operation Roaring Lion
ಇರಾನ್
ಯುದ್ಧದ ಪರಿಣಾಮಗಳು ಹೆಚ್ಚಾಗುತ್ತಿದ್ದು, ಇಸ್ರೇಲ್ ಮತ್ತು ಅಮೆರಿಕ ಒಟ್ಟಾಗಿ ಘೋರವಾಗಿ ದಾಳಿ ಮಾಡುತ್ತಾ ಇರಾನ್ ನಾಶಕ್ಕೆ ಮುನ್ನುಗ್ಗಿವೆ. ಇದರ ಪರಿಣಾಮ ರೊಚ್ಚಿಗೆದ್ದಿರುವ ಇರಾನ್ ಕೂಡ ಅಕ್ಕಪಕ್ಕದ ದೇಶಗಳು ಎಂದರೆ ಅರಬ್ ದೇಶಗಳ ಮೇಲೆ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿದೆ. ಈ ಹಿನ್ನೆಲೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಕೂಡ ಅಲ್ಲಾಡಿ ಹೋಗಿದ್ದು, ಯಾವುದೇ ಕ್ಷಣದಲ್ಲಿ ಈ ಯುದ್ಧ ಮತ್ತಷ್ಟು ವಿನಾಶಕ್ಕೆ ನಾಂದಿ ಹಾಡಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಅತ್ತ ಇರಾನ್ ಯುದ್ಧದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಈಗ ದಿಢೀರ್ ಮಹತ್ವದ ಸಂದೇಶ ಕೊಟ್ಟಿದ್ದಾರೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಅಮೆರಿಕ
ಹಾಗೂ ಇಸ್ರೇಲ್ ತಮ್ಮ ಮೇಲೆ ದಾಳಿ ಮಾಡಿವೆ ಎಂಬ ಕಾರಣಕ್ಕೆ ರೊಚ್ಚಿಗೆದ್ದಿರುವ ಇರಾನ್ ಈಗ ಮಧ್ಯಪ್ರಾಚ್ಯ ಭಾಗದಿಂದ ಕಚ್ಚಾತೈಲ ಸರಬರಾಜು ಮಾಡಲು ಅಡ್ಡಿ ಮಾಡುತ್ತಿದೆ. ಪೆಟ್ರೋಲ್ & ಡೀಸೆಲ್ ಸೇರಿದಂತೆ ಗ್ಯಾಸ್ ಸಿಲಿಂಡರ್ ಬೆಲೆಯೂ ಯುದ್ಧದ ಪರಿಣಾಮ ಈಗ ಮುಗಿಲು ಮುಟ್ಟಿದೆ. ಮುಂದಿನ ಒಂದು ವಾರಗಳ ಕಾಲ ಇದೇ ರೀತಿ ಯುದ್ಧ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಘೋರ ಸ್ಥಿತಿಗೆ ತಲುಪುವ ಅಪಾಯ ಕೂಡ ಕಾಡುತ್ತಿದ್ದು, ಇಡೀ ಪ್ರಪಂಚ ಈಗ ಅಲರ್ಟ್ ಆಗಿದೆ. ಇದೇ ರೀತಿ ಈಗ ರಷ್ಯಾ ಅಧ್ಯಕ್ಷ ಪುಟಿನ್ ಅವರು ಮೊದಲ ಬಾರಿಗೆ ನೇರವಾಗಿ ಇರಾನ್ ಯುದ್ಧದ ಬಗ್ಗೆ ಹೇಳಿಕೆ ನೀಡಿದ್ದು, ಯುದ್ಧ ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ಇರಾನ್ ಅಧ್ಯಕ್ಷರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ಯುದ್ಧ ನಿಲ್ಲಿಸುವ ಸಲಹೆ ನೀಡಿದ್ದು, ಈಗಿನ ಪರಿಸ್ಥಿತಿಯಲ್ಲಿ ರಷ್ಯಾ ನಡೆ ಕುತೂಹಲ ಕೆರಳಿಸಿದೆ. id='are-slot-2' class='oiad oi-axt oiadv'>












Click it and Unblock the Notifications