ಪ್ರಯಾಣಿಕರಿಗೆ ಸಿಹಿ ಸುದ್ದಿ: ಬಿಎಂಟಿಸಿ ಹೊಸ ಮಾರ್ಗಗಳ ಪರಿಚಯ
ಬೆಂಗಳೂರು: ಸಿಲಿಕಾನ್ ಸಿಟಿಯ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ನಗರದ ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದೆ.
ಸಾರ್ವಜನಿಕ ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ ಸಂಸ್ಥೆಯು ಇದೇ ಬರುವ ಮಾರ್ಚ್ 9,2026 ಸೋಮವಾರದಿಂದ ನಗರದ ವಿವಿಧೆಡೆ ನೂತನ ಬಸ್ ಮಾರ್ಗಗಳು ಸಾರ್ವಜನಿಕರ ಸೇವೆಗೆ ಇಳಿಯಲಿವೆ.

ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು ಹೊಸ ಬಡಾವಣೆಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವುದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಬಿಎಂಟಿಸಿ, ನಮ್ಮ ಮೆಟ್ರೋ ರೈಲು ತಲುಪದ ಭಾಗಗಳಿಗೆ ಹಾಗೂ ಹೆಚ್ಚಿನ ಜನದಟ್ಟಣೆ ಇರುವ ಪ್ರದೇಶಗಳಿಗೆ ಮಿತವ್ಯಯಕಾರಿ ಮತ್ತು ದಕ್ಷ ಸಾರಿಗೆ ಸೌಲಭ್ಯ ಒದಗಿಸಲು ಈ ಹೊಸ ಮಾರ್ಗಗಳನ್ನು ಪರಿಚಯಿಸಲಾಗುತ್ತಿದೆ. ಹೊಸದಾಗಿ ಆರಂಭಿಸಲಾದ ಮಾರ್ಗದ ಸಂಪೂರ್ಣ ವಿವರ ಈ ಕೆಳಗಿನಂತಿದೆ.
| ಕ್ರ. ಸಂ. | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಿಡುವ ಸಮಯ | ಸುತ್ತುವಳಿ ಸಂಖ್ಯೆ |
|---|---|---|---|---|---|---|
| 1 | MF 22-E | ಹೊಸರೋಡ್ ಮೆಟ್ರೋ ನಿಲ್ದಾಣ (ಚಕ್ರ ಮಾರ್ಗ) | ಹೊಸರೋಡ್ ಮೆಟ್ರೋ ನಿಲ್ದಾಣ | ಸೆಂಟ್ರಲ್ ಜೈಲ್, ಹರಳೂರು, ಅಗರ, ಪರಂಗಿಪಾಳ್ಯ, ಸೋಮಸುಂದರ ಪಾಳ್ಯ, ಕೂಡ್ಲು ಗೇಟ್, ಸಿಂಗಸಂದ್ರ | 0600, 0700, 0815, 0845, 0915, 0930, 1000, 1030, 1100, 1130, 1200, 1240, 1310, 1430, 1500, 1530, 1600, 1620, 1650, 1710, 1730, 1800, 1910, 2020, 2140 | 25 |
| 2 | MF 22-EA | ಹೊಸರೋಡ್ ಮೆಟ್ರೋ ನಿಲ್ದಾಣ (ಚಕ್ರ ಮಾರ್ಗ) | ಹೊಸರೋಡ್ ಮೆಟ್ರೋ ನಿಲ್ದಾಣ | ಸಿಂಗಸಂದ್ರ, ಕೂಡ್ಲು ಗೇಟ್, ಸೋಮಸುಂದರ ಪಾಳ್ಯ, ಪರಂಗಿಪಾಳ್ಯ, ಅಗರ, ಹರಳೂರು, ಸೆಂಟ್ರಲ್ ಜೈಲ್ | 0615, 0715, 0830, 0900, 0930, 0945, 1015, 1045, 1115, 1145, 1215, 1255, 1325, 1405, 1435, 1510, 1530, 1555, 1625, 1645, 1710, 1730, 1845, 1955, 2120 | 25 |
| 3 | MF 22-K | ಹೊಸರೋಡ್ ಮೆಟ್ರೋ ನಿಲ್ದಾಣ | ಕಾರ್ಮೆಲಾರಾಂ ಬಸ್ ನಿಲ್ದಾಣ | ದೊಡ್ಡಮರ, ಚಿಕ್ಕನಾಯಕನಹಳ್ಳಿ, ದೊಡ್ಡಕನ್ನಲ್ಲಿ | 0600, 0635, 0710, 0755, 0835, 0915, 0955, 1045, 1120, 1155, 1230, 1430, 1505, 1540, 1625, 1700, 1735, 1815, 1855, 1935, 2010, 2100 | 44 |
ಬಿಎಂಟಿಸಿ: ಇಂದಿನಿಂದ ರಾಮನಗರ, ಕನಕಪುರಕ್ಕೂ 'ವಜ್ರ ವಿಸ್ತಾರ' ಎಸಿ ಬಸ್ ಸಂಚಾರ ಆರಂಭ!
ಫ್ರಯಾಣಿಕರಿಗೆ ಹೊಸ ಮಾರ್ಗಗಳ ಪರಿಚಯ
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರ್ಯಾಯ ಮಾರ್ಗವಾಗಿರುವ ನೈಸ್ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಹಿ ಸುದ್ದಿ ನೀಡಿದೆ. ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ ಈ ಭಾಗದಲ್ಲಿ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೆಶದಿಂದ ಮಾರ್ಚ್ 5, 2026 ರಿಂದ ಜಾರಿಗೆ ಬರುವಂತೆ ನೂತನ ಹವಾನಿಯಂತ್ರಿತ ರಹಿತ ಬಸ್ ಸೇವೆಗಳನ್ನು ಪ್ರಾರಂಭಿಸಿದೆ.
ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಮಾರ್ಗಗಳನ್ನು ಪರಿಚಯಸಲಾಗಿದ್ದು, ಇದರಿಂದ ಉದ್ಯೋಗಿಗಳು, ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕರವಾಗಲಿದೆ ಎಂದು ಬೆಂ.ಮ.ಸಾ. ಸಂಸ್ಥೆ ತಿಳಿಸಿದೆ. ಹೊಸದಾಗಿ ಆರಂಭಿಸಲಾದ ಮಾರ್ಗದ ಸಂಪೂರ್ಣ ವಿವರ ಈ ಕೆಳಗಿನಂತಿದೆ.
| ಮಾರ್ಗ | ಎಲ್ಲಿಂದ | ಎಲ್ಲಿಗೆ | ಮಾರ್ಗ ವಿವರ | ಬಸ್ಸು / ಸುತ್ತುವಳಿಗಳ ಸಂಖ್ಯೆ |
|---|---|---|---|---|
| ನೈಸ್-4 | ವಿಜಯನಗರ ಟಿಟಿಎಂಸಿ (ಬಿಡುವ ವೇಳೆ: 6.25 Hrs) | ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ (ಬಿಡುವ ವೇಳೆ: 16.35 Hrs) | ಚಂದ್ರ ಲೇಔಟ್, ನಾಯಂಡಹಳ್ಳಿ ಜಂಕ್ಷನ್ | 2 ಸುತ್ತುವಳಿಗಳು |
ಹೊಸ ಮಾರ್ಗದ ವೇಳಾಪಟ್ಟಿ ಮತ್ತು ನಿಲುಗಡೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕರು ಹತ್ತಿರದ ಬಿಎಂಟಿಸಿ ಡಿಪೋ ಅಥವಾ ಅಧಿಕೃತ ಮೊಬೈಲ್ ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.
ರಾಮನಗರ, ಕನಕಪುರಕ್ಕೂ 'ವಜ್ರ' ವೈಭವ
ಬಿಎಂಟಿಸಿ ತನ್ನ ಸೇವೆಯನ್ನು ವಿಸ್ತರಿಸುವ ಮೂಲಕ ಇಂದು ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಸೇವೆಯನ್ನು ಈಗ ಸಮೀಪದ ಜಿಲ್ಲೆಗಳ ಗ್ರಾಮೀಣ ಭಾಗಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಬಿಎಂಟಿಸಿ ವ್ಯಾಪ್ತಿಯನ್ನು 25 ಕಿ.ಮೀ ನಿಂದ 40 ಕಿ.ಮೀ ಗೆ ಹೆಚ್ಚಿಸಲಾಗಿದ್ದು, ಇದರ ಮೊದಲ ಭಾಗವಾಗಿ ಮಾರ್ಚ್ 04, 2026 ರಂದು ರಾಮನಗರ ಮತ್ತು ಕನಕಪುರಕ್ಕೆ 'ವಜ್ರ ವಿಸ್ತಾರ' (Vajra Vistara) ಎಸಿ ಬಸ್‌ಗಳ ಸಂಚಾರಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಈ ಮೂಲಕ ಹೊರವಲಯದ ಪ್ರಯಾಣಿಕರಿಗೂ ಆರಾಮದಾಯಕ ಎಸಿ ಬಸ್ ಸೌಲಭ್ಯ ಲಭ್ಯವಾಗಲಿದೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications