ಬಿಎಂಟಿಸಿ: ಇಂದಿನಿಂದ ರಾಮನಗರ, ಕನಕಪುರಕ್ಕೂ 'ವಜ್ರ ವಿಸ್ತಾರ' ಎಸಿ ಬಸ್ ಸಂಚಾರ ಆರಂಭ!
ಬೆಂಗಳೂರು ಮಾರ್ಚ್ 4: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಈಗ ತನ್ನ ಸಾರಿಗೆ ಸೇವೆಯನ್ನು ವಿಸ್ತರಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಕೇವಲ ನಗರಕ್ಕೆ ಸೀಮಿತವಾಗಿದ್ದ ಸಾರಿಗೆ ಸೇವೆ ಈಗ ಸಮೀಪ ಜಿಲ್ಲೆಯ ಗ್ರಾಮೀಣ ಭಾಗಗಳಿಗೂ ಸೇವೆ ನೀಡಲು ನಿರ್ಧರಿಸಿದೆ. ಅದರಂತೆ ಬಿಎಂಟಿಸಿ ವ್ಯಾಪ್ತಿಯನ್ನು 25 ಕಿ.ಮೀ ನಿಂದ 40 ಕಿ.ಮೀ ಗೆ ವಿಸ್ತರಿಲಾಗಿದ್ದು ಇದರ ಮೊದಲ ಭಾಗವಾಗಿ ಇಂದು ಮಾರ್ಚ್ 04, 2026 ರಾಮನಗರ ಮತ್ತು ಕನಕಪುರಕ್ಕೆ 'ವಜ್ರ ವಿಸ್ತಾರ' ಎಸಿ ಬಸ್‌ಗಳ ಸಂಚಾರಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ಪ್ರಸ್ತುತ 50 ಘಟಕಗಳಿಂದ ವಿವಿಧ ಮಾದರಿಯ ಬಸ್ಸುಗಳಲ್ಲಿ ಪ್ರತಿದಿನ 6300 ಅನುಸೂಚಿಗಳಿಂದ (ಮಾರ್ಗ) 66,315 ಸುತ್ತುವಳಿಗಳನ್ನು, 13.06 ಲಕ್ಷ ಕಿ.ಮೀ ಗಳಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಸರಾಸರಿ 45 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಸದರಿ ಅನುಸೂಚಿಗಳಲ್ಲಿ 1727 ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 145 ಅನುಸೂಚಿಗಳಿಂದ 1332 ಸುತ್ತುವಳಿಗಳನ್ನು ಹಾಗೂ ಬಿಡದಿ ವ್ಯಾಪ್ತಿಯಲ್ಲಿ ಒಟ್ಟು 136 ಅನುಸೂಚಿಗಳಿಂದ 1163 ಸುತ್ತುವಳಿಗಳನ್ನು ಕಾರ್ಯಾಚರಣೆ ಮಾಡಲಾಗುವುದೆಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಹೊರ ವಲಯದಲ್ಲಿರುವ ಪ್ರಮುಖ ಪ್ರದೇಶಗಳಾದ ಹಾರೋಹಳ್ಳಿ ಹಾಗೂ ಹಾರೋಹಳ್ಳಿಯಿಂದ ಮುಂದೆ 58 ಅನುಸೂಚಿಗಳಿಂದ 510 ಟ್ರಿಪ್‌ಗಳು, ಮಾಗಡಿ ವಲಯದಲ್ಲಿ 39 ಅನುಸೂಚಿಗಳಿಂದ 240 ಟ್ರಿಪ್‌ಗಳು, ಸೋಲೂರು/ದಾಬಸಪೇಟೆ ವಲಯದಲ್ಲಿ 35 ಅನುಸೂಚಿಗಳಿಂದ 220 ಟ್ರಿಪ್‌ಗಳ ಸೇವೆ ನೀಡಲಾಗುತ್ತದೆ.
ಪ್ರಮುಖ ದೇವಾಲಯಗಳಿಗೆ ಟೂರ್ ಪ್ಯಾಕೇಜ್ ಗಳನ್ನು ಹೆಚ್ಚಿಸಿದ್ದು, 11 ದಿವ್ಯ ದರ್ಶನ ಮಾರ್ಗಗಳನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿ ವಾರಾಂತ್ಯಗಳಲ್ಲಿ 20+20=40 (ಶನಿವಾರ & ಭಾನುವಾರ) ಬಸ್ಸುಗಳನ್ನು ಓಡಿಸಲಾಗುತ್ತಿದ್ದು, ಅಂದಾಜು 600+600=1200 ಪ್ರವಾಸಿಗರು ಸದರಿ ಸಾರಿಗೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರು ನಗರದ ಸುತ್ತಮುತ್ತಲಿರುವ ಪ್ರಮುಖ ಪಟ್ಟಣ ಪ್ರದೇಶಗಳಾದ ಅತ್ತಿಬೆಲೆ, ಆನೇಕಲ್, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸಪೇಟೆ, ಬಿಡದಿ, ಹಾರೋಹಳ್ಳಿ ಹಾಗೂ ಹೊಸಕೋಟೆಗೆ ಒಟ್ಟು 11 ಮಾರ್ಗಗಳಲ್ಲಿ 124 ಅನುಸೂಚಿಗಳನ್ನು ವೇಗದೂತ ತಡೆ ರಹಿತವಾಗಿ ಬಸ್ಸನ್ನು ತರಲು ಚಿಂತನೆ ನಡೆದಿದೆ. ಪ್ರತಿದಿನ ಸರಾಸರಿ 60 ಸಾವಿರ ಪ್ರಯಾಣಿಕರು ಸಾರಿಗೆ ಸೌಲಭ್ಯ ಪಡೆಯುತ್ತಿದ್ದು, ಒಂದೇ ದಿನಕ್ಕೆ ಸರಾಸರಿ ರೂ.18.0 ಲಕ್ಷ ಸಾರಿಗೆ ಆದಾಯ ಬರುತ್ತಿದೆ.
ಕರ್ನಾಟಕ ಸರ್ಕಾರವು 25.0 ಕಿ.ಮೀ. ವರೆಗೆ ಇದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಾರ್ಯಾಚರಣೆ ವ್ಯಾಪ್ತಿಯನ್ನು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ 40.0 ಕಿ.ಮೀ ವರೆಗೆ ವಿಸ್ತರಿಸಿರುತ್ತದೆ.
ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಬೆಂಗಳೂರು ನಗರದಿಂದ ರಾಮನಗರ ಹಾಗೂ ಕನಕಪುರಕ್ಕೆ "ವಜ್ರ ವಿಸ್ತಾರ" ಸಾರಿಗೆಗಳನ್ನು ದಿನಾಂಕ ಮಾರ್ಚ್ 04ರಿಂದ ಪ್ರಾರಂಭಿಸಲು ಉದ್ದೇಶಿಸಿದ್ದು, ಇದರ ವಿವರ ಕೆಳಕಂಡಂತೆ ಇರುತ್ತದೆ.
| ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಬಸ್ಸುಗಳು | ಸುತ್ತುವಳಿಗಳು | ಪ್ರಯಾಣ ದರ |
|---|---|---|---|---|---|
| V-EX-RMN-1 | ಕೆಬಿಎಸ್ | ರಾಮನಗರ | 6 | 36 | ರೂ.95.0 |
| V-EX-KNP-1 | ಬನಶಂಕರಿ | ಕನಕಪುರ | 8 | 48 | ರೂ.90.0 |
ಪಾಸುಗಳ ದರದ ವಿವರಗಳು:
| ಪಾಸಿನ ವಿಧ | ಪಾಸಿನ ದರ (ಜಿಎಸ್‌ಟಿ ಸೇರಿ) |
|---|---|
| ದೈನಿಕ ಪಾಸು | ರೂ.180/- |
| ಸಾಪ್ತಾಹಿಕ ಪಾಸು | ರೂ.1000/- |
| ಮಾಸಿಕ ಪಾಸು | ರೂ.2700/- |
ಮಾರ್ಗ ಸಂಖ್ಯೆ: V-EX-RMN-1ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಬಸ್ ನಿಲುಗಡೆ ಹಾಗೂ ಪ್ರಯಾಣ ದರಗಳ ವಿವರ:
| ಪ್ರಾರಂಭ ಸ್ಥಳ | ನಿಲುಗಡೆಗಳ ವಿವರ | ಪ್ರಯಾಣ ದರ ರೂ.ಗಳಲ್ಲಿ |
|---|---|---|
| ಕೆಂಪೇಗೌಡ ಬಸ್ ನಿಲ್ದಾಣ | MRBS | 25.0 |
| ನಾಯಂಡನಹಳ್ಳಿ | 35.0 | |
| ರಾಜರಾಜೇಶ್ವರಿನಗರ ಗೇಟ್ | 40.0 | |
| ಕೆಂಗೇರಿ | 45.0 | |
| ನೈಸ್ ರಸ್ತೆ ಜಂಕ್ಷನ್ | 50.0 | |
| ರಾಮನಗರ | 95.0 |
ಮಾರ್ಗ ಸಂಖ್ಯೆ: V-EX-KNP-1ಬನಶಂಕರಿಯಿಂದ ಕನಕಪುರಕ್ಕೆ ಬಸ್ ನಿಲುಗಡೆ ಹಾಗೂ ಪ್ರಯಾಣ ದರಗಳ ವಿವರ:
| ಪ್ರಾರಂಭ ಸ್ಥಳ | ನಿಲುಗಡೆಗಳ ವಿವರ | ಪ್ರಯಾಣ ದರ ರೂ.ಗಳಲ್ಲಿ |
|---|---|---|
| ಬನಶಂಕರಿ | ಕೋಣನಕುಂಟೆ ಕ್ರಾಸ್ | 20.0 |
| ತಲಗಟ್ಟಪುರ | 30.0 | |
| ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣ | 40.0 | |
| ಕಗ್ಗಲಿಪುರ | 50.0 | |
| ಹಾರೋಹಳ್ಳಿ | 70.0 | |
| ದಯಾನಂದ ಸಾಗರ ಕಾಲೇಜು | 80.0 | |
| ಜೈನ ಯುನಿವರ್‌ಸಿಟಿ ಗೇಟ್ | 85.0 | |
| ಕನಕಪುರ | 90.0 |
ಸಂಸ್ಥೆಯಲ್ಲಿ ಕೈಗೊಂಡಿರುವ ಕಾರ್ಮಿಕ ಉಪಕ್ರಮಗಳ ಮಾಹಿತಿ
ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ 40 ವರ್ಷ ಮೇಲ್ಪಟ್ಟ ನೌಕರರು ಮತ್ತು ಅಧಿಕಾರಿಗಳ ಹೃದಯ ಸಂಬಂಧಿ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ ಒಟ್ಟು 13,668 ನೌಕರರುಗಳಿಗೆ ಉಚಿತವಾಗಿ ಹೃದಯ ತಪಾಸಣೆಗೆ ಒಳಪಡಿಸಲಾಗಿರುತ್ತದೆ.
ಬೆಂಗಳೂರು ನಗರದ ಜನದಟ್ಟಣೆಯ ಸಾರಿಗೆ ವ್ಯವಸ್ಥೆಯಲ್ಲಿ ಸದಾ ಕರ್ತವ್ಯನಿರತ ಸಿಬ್ಬಂದಿಗಳ ಶ್ವಾಸಕೋಶ, ಉಸಿರಾಟ ಕಾಯಿಲೆ, ಅಲರ್ಜಿಗಳಿಗೆ ಸಂಬಂಧಿಸಿದ ಸ್ಕ್ರೀನಿಂಗ್ ಮತ್ತು ಸುಧಾರಿತ ಪರೀಕ್ಷೆಗಳನ್ನು ಮಾಡಿಸುವ ಕಾಳಜಿಯಿಂದ ಜಯನಗರದ ವಾಯು ಚೆಸ್ಟ್ ಅಂಡ್ ಸ್ಲೀಪ್ ಸೆಂಟರ್ ನಲ್ಲಿ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು ಈವರೆಗೂ 4,186 ನೌಕರರುಗಳು ತಪಾಸಣೆಗೆ ಒಳಪಟ್ಟಿರುತ್ತಾರೆ.
ಸಂಸ್ಥೆಯ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಸಂಸ್ಥೆಯ ಎಲ್ಲಾ ನೌಕರರಿಗೆ Department of Biotechnology Govt of India ಸಹಕಾರದೊಂದಿಗೆ C-CAMP ಅನ್ನು ಸರ್ಕಾರದ ಸಾರಿಗೆ ಇಲಾಖೆಯ ಸಾರಿಗೆ ಆಶಾಕಿರಣ ಯೋಜನೆಯಡಿ ಸಂಸ್ಥೆಯ ಕೇಂದ್ರ ಕಛೇರಿ ಸೇರಿದಂತೆ 50 ಘಟಕಗಳು ಮತ್ತು 4 ಕಾರ್ಯಾಗರಗಳಲ್ಲಿ ವಿವಿಧ ತಂಡಗಳೊಂದಿಗೆ ಕಣ್ಣಿನ ತಪಾಸಣಾ ಶಿಬಿರಗಳನ್ನು ಹಂತಹಂತವಾಗಿ ಆಯೋಜಿಸಿ ನೌಕರರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ ನಡೆಸಿ ಕನ್ನಡಕಗಳನ್ನು ನೀಡಲಾಗುತ್ತಿದೆ.
ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 2500 ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲಾಗಿದೆ. ಇದರಿಂದ ಸೇವೆಯ ಗುಣಮಟ್ಟ ಮತ್ತು ಕಾರ್ಯನಿರ್ವಹಣೆಯಲ್ಲಿ ಮತ್ತಷ್ಟು ಸುಧಾರಣೆ ಕಂಡು ಬರುತ್ತಿದೆ.
ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ಮೃತಾವಲಂಭಿತರುಗಳನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳಿಗೆ ಜೂನ್ 2023 ರಿಂದ ಇಲ್ಲಿಯವರೆಗೂ ಒಟ್ಟು 416 ಮೃತಾವಲಂಭಿತರಿಗೆ ಅನುಕಂಪ ಆಧಾರದ ಮೇಲೆ ನೇಮಕಾತಿ ಆದೇಶ ನೀಡಲಾಗಿದೆ.
ಈ ಸಾಲಿನಲ್ಲಿ ಅರ್ಬನ್ ಮೊಬಿಲಿಟಿ ಇಂಡಿಯಾ(UMI) ಮತ್ತು ರಾಜ್ಯ ಸಾರಿಗೆ ಸಂಸ್ಥೆಗಳ ಒಕ್ಕೂಟ(ASRTU)ದಂತಹ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಪಡೆದಿರುವ ಪ್ರಶಸ್ತಿಗಳು ಒಳಗೊಂಡಂತೆ, ಬೆಂ.ಮ.ಸಾ.ಸಂಸ್ಥೆಗೆ ಒಟ್ಟಾರೆ 151 ಪ್ರಶಸ್ತಿ ಮತ್ತು ಪುರಸ್ಕಾರಗಳು ಲಭಿಸಿರುತ್ತದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್












Click it and Unblock the Notifications