ಇರಾನ್ ವಿರುದ್ಧದ ಯುದ್ಧದಲ್ಲಿ ಎಐ ಸಹಾಯ, ಹೀಗೆ ನಡೆಯುತ್ತಿದೆ ಕದನ | Operation Roaring Lion
ಅಮೆರಿಕ ಹಾಗೂ ಇರಾನ್ ನಡುವೆ ಸದ್ಯಕ್ಕೆ ಯುದ್ಧ ಮುಗಿಯುವ ಯಾವುದೇ ಮುನ್ಸೂಚನೆ ಸಿಗ್ತಾನೇ ಇಲ್ಲ. ಯುದ್ಧಕ್ಕೆ ಬ್ರೇಕ್ ಹಾಕುವ ಬದಲಾಗಿ ಇದೀಗ ಅಮೆರಿಕ ಹಾಗೂ ಇರಾನ್ ಯುದ್ಧದಲ್ಲಿ ಹೊಸ ಹೊಸ ತಂತ್ರ ಬಳಸಿ ದಾಳಿ ಮಾಡಲಾಗುತ್ತಿದ್ದು, ಭಾರಿ ದೊಡ್ಡ ಬಿರುಗಾಳಿ ಎದ್ದಿದೆ. ಅದರಲ್ಲೂ ಈ ರೀತಿ ಎರಡೂ ಕಡೆ ಬಡಿದಾಟ ಶುರುವಾಗಿರುವ ಸಮಯದಲ್ಲಿ ಇಸ್ರೇಲ್ ಏನು ಸುಮ್ಮನೆ ಕೂತಿಲ್ಲ, ತನ್ನ ಶತ್ರು ಇರಾನ್ ವಿರುದ್ಧ ನಿರಂತರವಾಗಿ ದಾಳಿ ಮಾಡುತ್ತಿದೆ ಇಸ್ರೇಲ್ ಮಿಲಿಟರಿ. ಈ ಮೂಲಕ ಘೋರ ಯುದ್ಧ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದ್ದು ಇರಾನ್ ಪ್ರಜೆಗಳು ಭಯಗೊಂಡು ಜೀವ ಕಳೆದುಕೊಳ್ಳುವ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.
ಇರಾನ್ ರಾಜಧಾನಿ ತೆಹ್ರಾನ್ ಇದೀಗ ಧಗಧಗ ಅಂತಿದ್ದು, ಇಸ್ರೇಲ್ & ಅಮೆರಿಕ ಒಟ್ಟಾಗಿಯೇ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕಾರಣಕ್ಕೆ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಇರಾನ್ ಸೇನೆ ತನ್ನ ಜೊತೆ ಸ್ನೇಹಿತ ದೇಶಗಳು ಇಲ್ಲದೆ ಒಂಟಿಯಾಗಿ ಅಮೆರಿಕ & ಇಸ್ರೇಲ್ ಸೇನೆ ದಾಳಿ ಎದುರಿಸುವ ಅನಿವಾರ್ಯತೆಗೆ ಸಿಲುಕಿದೆ. ಇಷ್ಟೆಲ್ಲದರ ನಡುವೆ ಇರಾನ್ ವಿರುದ್ಧದ ಯುದ್ಧದಲ್ಲಿ ಎಐ ಸಹಾಯ ಕೂಡ ಪಡೆಯಲಾಗುತ್ತಿದ್ದು, ಇರಾನ್ ರಾಜಧಾನಿ ತೆಹ್ರಾನ್ ಸೇರಿ ಸುತ್ತಮುತ್ತಲ ಭಾಗಗಳು ನಲುಗಿ ಹೋಗಿವೆ. ಇರಾನ್ ಸರ್ವಾಧಿಕಾರಿ ಅಲಿ ಹೊಸೆನಿ ಖಮೇನಿ ಸಾವಿನ ನಂತರ ಇರಾನ್ ಕೂಡ ಈ ಯುದ್ಧವನ್ನ ಮತ್ತಷ್ಟು ಕಠಿಣ ಪರಿಸ್ಥಿತಿಗೆ ತೆಗೆದುಕೊಂಡು ಹೋಗಲು ಮುಂದೆ ನುಗ್ಗಿದೆ.

ಇರಾನ್ ಪರಿಸ್ಥಿತಿ ಈಗ ಅಯೋಮಯ
ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಸೇನೆಯ 50,000ಕ್ಕೂ ಹೆಚ್ಚು ಸೈನಿಕರು ಬಂದು ನಿಂತು ಅಲರ್ಟ್ ಆಗಿದ್ದಾರೆ. ಇರಾನ್ ಸಮೀಪ ಅಮೆರಿಕ ಸೇನೆ ಬೃಹತ್ ಯುದ್ಧ ನೌಕೆ ಹಾಗೂ ಕಠಿಣ ಸಂದರ್ಭ ಎದುರಿಸಿ ನಿಲ್ಲುವ ಯುದ್ಧ ವಿಮಾನಗಳನ್ನು ಸಿದ್ಧಪಡಿಸಿಕೊಂಡು ಕಾಯುತ್ತಿದೆ. ಹೀಗಿದ್ದಾಗ ಪ್ರಸ್ತುತ ಮಧ್ಯಪ್ರಾಚ್ಯ ಭಾಗದಲ್ಲಿ ಇರುವ ಒಟ್ಟು 8 ವಾಯುನೆಲೆಗಳ ಬೆಂಬಲದಿಂದ ಅಮೆರಿಕ ಸೇನೆ ನೇರವಾಗಿ ಇರಾನ್ ಮೇಲೆ ಕಿಚ್ಚಿನಿಂದ ದಾಳಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ಬೂದಿ ಮುಚ್ಚಿದ ಕೆಂಡವಾಗಿದ್ದು, ಇದರ ಪರಿಣಾಮ ಅರಬ್ ದೇಶಗಳ ಮೇಲೆ ಆಗುತ್ತಿದೆ. ನೋಡ ನೋಡುತ್ತಲೇ ಸಾವಿರಾರು ಜನ ಈಗ ಜೀವ ಕಳೆದುಕೊಂಡು, ಸಾವಿರಾರು ಕಟ್ಟಡಗಳು ಧೂಳ್ ಧೂಳ್ ಆಗಿವೆ. ಮತ್ತೊಂದು ಕಡೆ ಇರಾನ್ ದೇಶದ ವಿಮಾನ ನಿಲ್ದಾಣಗಳು ಕೂಡ ಇಸ್ರೇಲ್ ಹಾಗೂ ಅಮೆರಿಕ ದಾಳಿಗೆ ನಾಶವಾಗುತ್ತಿವೆ.
AI ಆಧಾರಿತ ದಾಳಿ ವ್ಯವಸ್ಥೆ
ಇರಾನ್ ವಿರುದ್ಧದ ಕಾರ್ಯಾಚರಣೆಗೆ ಅಮೆರಿಕ ಆಪರೇಷನ್ ಎಪಿಕ್ ಫ್ಯೂರಿ ಎಂಬ ಹೆಸರನ್ನ ಇಟ್ಟಿದ್ದು, ಘೋರವಾಗಿ ದಾಳಿ ಮಾಡುತ್ತಾ ಇದೆ. ಅದರಲ್ಲೂ ಕೃತಕ ಬುದ್ಧಿಮತ್ತೆ ಅಂದ್ರೆ ಎಐ ಮೂಲಕ ಇರಾನ್ ದೇಶಕ್ಕೆ ಆಘಾತ ನೀಡುತ್ತಿರುವ ಅಮೆರಿಕ, ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇರಾನ್ ಮೇಲೆ ಬಾಂಬ್ ಹಾಕುತ್ತಿದೆ. ಅಮೆರಿಕ ಸೈನ್ಯ AI ಆಧಾರಿತ ವ್ಯವಸ್ಥೆ ವ್ಯಾಪಕವಾಗಿ ಬಳಸುತ್ತಿದೆ, ಈ ವ್ಯವಸ್ಥೆಯ ಮೂಲಕ ಗುಪ್ತಚರ ಮಾಹಿತಿ ವಿಶ್ಲೇಷಿಸಿ ನಿಖರವಾಗಿ ದಾಳಿ ಮಾಡಲು ಸಾಧ್ಯ ಎನ್ನಲಾಗಿದೆ. ಮತ್ತೊಂದು ವರದಿ ಪ್ರಕಾರ ಇರಾನ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲು ಕೂಡ ಎಐ ವ್ಯವಸ್ಥೆಯ ಬಳಕೆ ಆಗುತ್ತಿದೆಯಂತೆ.
ಒಟ್ನಲ್ಲಿ ಎಐ ಮೂಲಕ ಇರಾನ್ ದೇಶಕ್ಕೆ ದೊಡ್ಡ ಆಘಾತ ಕೊಡುತ್ತಿರುವ ಅಮೆರಿಕ ಸೇನೆ, ಇನ್ನೂ ಘೋರವಾಗಿ ದಾಳಿ ಮಾಡಿ ಎಲ್ಲವನ್ನೂ ಉಡಾಯಿಸುವ ಎಚ್ಚರಿಕೆ ನೀಡುತ್ತಿದೆ. ಇದೇ ಕಾರಣಕ್ಕೆ ಬೇಗ ಬಂದು ಸಂಪೂರ್ಣವಾಗಿ ಶರಣಾಗಿ ಯುದ್ಧ ನಿಲ್ಲಿಸಿ ಎಂದು ಅಮೆರಿಕ ಸಲಹೆ ನೀಡುತ್ತಿದೆ. ಈ ಮೂಲಕ ಅರಬ್ ದೇಶಗಳಿಗೆ ಮತ್ತಷ್ಟು ಆತಂಕ ಶುರುವಾಗಿ, ಯಾವ ಕ್ಷಣದಲ್ಲಿ ಏನಾಗುತ್ತೋ? ಎಂಬ ಭಯದಲ್ಲೇ ಸಮಯ ಕಳೆಯುತ್ತಿವೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications